ನಂಬಲಾರದ ಸತ್ಯ : 120 ವರ್ಷಗಳಿಂದ ಆರದೇ ಉರಿಯುತ್ತಿದೆ ಈ ವಿದ್ಯುತ್ ಬಲ್ಬ್! ವಿಶ್ವದ ಎಲ್ಲಾ ದಾಖಲೆ ಪುಸ್ತಕಗಳಲ್ಲೂ ಈ ಬಲ್ಬ್ ನ ಹೆಸರು ಸೇರಿದೆ!
ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕಳೆದ 120 ವರ್ಷಗಳಿಂದ ಬೆಳಗುತ್ತಲೇ ಇದೆ. ಇಷ್ಟು ದೀರ್ಘ ಅವಧಿಯಲ್ಲಿ ಬಲ್ಬ್ ಒಂದು ಅಥವಾ ಎರಡು ಬಾರಿ ಮಾತ್ರವೇ ಆರಿರಬಹುದು. ಅದು ಕೂಡಾ ಮನುಷ್ಯರು ಮಾಡಿದಂತಹ ತಪ್ಪಿನ ಕಾರಣದಿಂದಲೇ ಹೊರತು ಬಲ್ಬ್ ನಲ್ಲಿನ ದೋಷದಿಂದ ಅಲ್ಲ. ಸೆಂಟೀನಿಯಲ್ ಬಲ್ಬ್ ಎನ್ನುವ ಹೆಸರಿನ ಇದು ಇರೊ ಬರೊ ಎಲ್ಲ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಈಗಾಗಲೇ ಗಿನ್ನೆಲ್ ಪುಸ್ತಕದಲ್ಲಿ ಸ್ಥಾನವನ್ನು ಪಡೆದು ವಿಶ್ವ ದಾಖಲೆಯನ್ನು ಮಾಡಿರುವುದು ಮಾತ್ರವೇ ಅಲ್ಲದೇ ಹಲವು ದಾಖಲೆ ಪುಸ್ತಕಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ವಿಶೇಷವಾದ ವಿದ್ಯುತ್ ಬಲ್ಬ್ ಅನ್ನು ಒಂದು ವಿಸ್ಮಯ ಎಂದೇ ನೀಡಲಾಗುತ್ತಿದೆ. ಕ್ಯಾಲಿಪೋರ್ನಿಯಾದ ರಾಜ್ಯದ ಲಿವರ್ ಮೋರ್ ನಗರದಲ್ಲಿ ಇರುವ ಈ ಬಲ್ಬ್ ವಿಶ್ವದ ಎಲ್ಲಾ ದಾಖಲೆಗಳ ಪುಸ್ತಕಗಳಲ್ಲಿ ತನ್ನ ಹೆಸರನ್ನು ದಾಖಲಿಸಿದೆ.
ಈ ಬಲ್ಬ್ ಅನ್ನು ಲಿವರ್ ಮೋರ್ ನಗರದ ಫೈರ್ ಬ್ರಿಗೇಡ್ ನ ವರ್ಕ್ ಶಾಪ್ ನಲ್ಲಿ ಹಾಕಲಾಗಿದೆ. ಪ್ರಸ್ತುತ ವರ್ಷಗಳಲ್ಲಿ ಈ ಬಲ್ಬ್ ನಿಂದಾಗಿಯೇ ಈ ನಗರವೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜನರಂತೂ ಈ ಬಲ್ಬ್ ಅದು ಹೇಗೆ ಕಳೆದ 120 ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದೆ ಎಂದು ಆಶ್ಚರ್ಯಚಕಿತರಾಗುತ್ತಾರೆ.

ಈ ಬಲ್ಬ್ ನ ಫಿಲಾಮೆಂಟ್ ಹೇಗೆ ಇಷ್ಟು ವರ್ಷಗಳಾದರೂ ಸುರಕ್ಷಿತವಾಗಿದೆ ಎನ್ನುವುದು ಸಹಾ ವಿಸ್ಮಯಕ್ಕೆ ಕಾರಣವಾಗಿದೆ. ಇನ್ನು ವಿಜ್ಞಾನಿಗಳಾದರೆ ಯಾವುದೇ ಬಲ್ಬ್ ನಲ್ಲೇ ಆದರೂ ಸಹಾ ಫಿಲಾಮೆಂಟ್ ಹೆಚ್ಚು ಎಂದರೆ ಒಂದರಿಂದ ಎರಡು ವರ್ಷ ಮಾತ್ರವೇ ಬಾಳಿಕೆ ಬರುವುದು ಎನ್ನುತ್ತಾರೆ.
ಈ ಬಲ್ಬ್ ನ ಹೆಸರು ಸೆಂಟೀನಿಯಲ್. ಈ ಬಲ್ಬ್ ಅನ್ನು 1901 ರಲ್ಲಿ ಮೊದಲ ಸಲ ಆನ್ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಸಹಾ ಈ ಬಲ್ಬ್ ಉರಿಯುತ್ತಲೇ ಇದೆ. 1901 ರಲ್ಲಿ ಈ ಬಲ್ಬ್ 60 ವೋಲ್ಟ್ ನದಾಗಿತ್ತು. ಆದರೆ ಅದರ ಔಟ್ ಪುಟ್ ದಿನಕಳೆದಂತೆ ಕಡಿಮೆಯಾಗುತ್ತಾ ಬಂದಿದೆ.
2021 ರ ವೇಳೆಗೆ ಇದು 4 ವ್ಯಾಟ್ ನ ಸಮಕ್ಕೆ ಬಂದಿದೆ ಎನ್ನಲಾಗಿದೆ. ಈ ಬಲ್ಬ್ ಅನ್ನು ಓಹಿಯೋ ನ ಶೆಲ್ಬಿ ಯಲ್ಲಿನ ಶೆಲ್ಬಿ ಎಲೆಕ್ಟ್ರಾನಿಕ್ ಹೆಸರಿನ ಕಂಪನಿಯು ತಯಾರು ಮಾಡಿತ್ತು. ಮಾಹಿತಿಗಳ ಪ್ರಕಾರ 1890 ರ ದಶಕದಲ್ಲಿ ಈ ಬಲ್ಬ್ ಸಿದ್ಧವಾಗಿತ್ತು. ಇದನ್ನು ಡೇನಿಯಲ್ ಬರ್ನೆಲ್ ಎನ್ನುವ ವ್ಯಕ್ತಿಯು ಖರೀದಿ ಮಾಡಿದ್ದರು.

ಡೇನಿಯಲ್ ಬರ್ನೆಲ್ ಅವರು ಲಿವರ್ ಮೋರ್ ನ ಪವರ್ ಅಂಡ್ ವಾಟರ್ ಕಂಪನಿಯ ಮಾಲೀಕರಾಗಿದ್ದರು. ಇದನ್ನು ಅವರು ಖರೀದಿ ಮಾಡಿದ ಮೇಲೆ ಅವರು ಅದೇ ನಗರದ ಅಗ್ನಿ ಶಾಮಕ ಕೇಂದ್ರಕ್ಕೆ ಕಾಣಿಕೆಯಾಗಿ ನೀಡಿದರು. ವಿಶ್ವದ ಯಾವುದೇ ಬಲ್ಬ್ ಕೂಡಾ ಇಷ್ಟು ದೀರ್ಘಕಾಲ ಉರಿದಂತಹ ಸಾಕ್ಷಿಯಾಗಲೀ ಅಥವಾ ಉದಾಹರಣೆಯಾಗಲೀ ಇಲ್ಲ.
ಈ 120 ವರ್ಷಗಳ ಕಾಲದಲ್ಲಿ ಅಧಿಕೃತವಾಗಿ ಎರಡು ಬಾರಿ ಮಾತ್ರ ಈ ಬಲ್ಬ್ ಗೆ ವಿರಾಮವನ್ನು ನೀಡಲಾಗಿದೆ. 1937 ರಲ್ಲಿ ಎಲೆಕ್ಟ್ರಿಕ್ ಲೈನ್ ಬದಲಾಯಿಸುವ ವೇಳೆಯಲ್ಲಿ ಈ ಬಲ್ಬ್ ಅನ್ನು ಆಫ್ ಮಾಡಲಾಗಿತ್ತು. ತಂತಿ ಬದಲಾವಣೆಯ ನಂತರ ಮತ್ತೆ ಬಲ್ಬ್ ಬೆಳಗಲು ಆರಂಭಿಸಿತು. ಇದಾದ ಮೇಲೆ 1976 ರಲ್ಲಿ ಅಗ್ನಿ ಶಾಮಕ ಕೇಂದ್ರದ ಕಟ್ಟಡವನ್ನು ಸ್ಥಳಾಂತರ ಮಾಡುವಾಗ ಒಮ್ಮೆ ಬಲ್ಬ್ ಆರಿತ್ತು.
ಹೊಸ ಕಟ್ಟಡಕ್ಕೆ ಒಂದು ಮೆರವಣಿಗೆಯ ಮೂಲಕ ಈ ಬಲ್ಬ್ ಅನ್ನು ಸೂಚಿಸಲಾಗಿತ್ತು. ಆಗ ಈ ಬಲ್ಬ್ 22 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಇನ್ನು ಈ ಬಲ್ಬ್ ಇಷ್ಟು ವರ್ಷಗಳು ಉರಿಯುತ್ತಿರುವ ಹಿಂದಿನ ರಹಸ್ಯ ಅದನ್ನು ತಯಾರಿಸಿರುವ ವಿನ್ಯಾಸವೂ ಒಂದು ಕಾರಣ ಎಂದು ಕೆಲವರು ನಂಬುತ್ತಾರೆ.

ಈ ಬಲ್ಬ್ ನ ಆವಿಷ್ಕಾದ ಮಾಡಿದವರು ಅಡಾಲ್ಫ್ ಚೈಲಿಯೇಟ್ ಎನ್ನುವವರು. ಬಲ್ಬ್ ಗಳನ್ನು ಕಂಡು ಹಿಡಿದ ಕಾಲದಲ್ಲಿ ದೀರ್ಘಕಾಲ ಬಾಳಿಕೆ ಬರುವ ಬಲ್ಬ್ ಗಳನ್ನು ತಯಾರು ಮಾಡಲಾಗುತ್ತಿತ್ತು. 1921 ರ ದಶಕದಲ್ಲಿ ವಿದ್ಯುತ್ ಬಲ್ಬ್ ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳ ಕಾರ್ಟೆಲ್ 1500 ಗಂಟೆಗಳಿಗಿಂತ ಹೆಚ್ಚು ಕಾಲ ಬಲ್ಬ್ ಗಳು ಬಾಳಿಕೆ ಬರಬಾರದು ಎಂದು ತೀರ್ಮಾನ ಮಾಡಲಾಗಿತ್ತು.
ಏಕೆಂದರೆ ಹಾಗೆ ಬಲ್ಬ್ ಗಳು ಹಾಳಾದರೆ ಜನರು ಹೊಸ ಬಲ್ಬ್ ಗಳನ್ನು ಖರೀದಿ ಮಾಡುತ್ತಾರೆ ಎನ್ನಲಾಗಿತ್ತು. ಇನ್ನು 2013 ರಲ್ಲಿ ಸೆಂಟೀನಿಯಲ್ ಬಲ್ಬ್ ಹಾಳಾಯಿತು ಎಂದು ಕೊಳ್ಳಲಾಯಿತು. ಆದರೆ ಆಗ ಸರಿಯಾಗಿ ಗಮನಿಸಿದಾಗ ಬಲ್ಬ್ ಅಲ್ಲ ಬದಲಾಗಿ ಅದು ತಂತಿಯಲ್ಲಾದ ಸಮಸ್ಯೆ ಎಂದು ತಿಳಿದು ಬಂದಿತು. ಅಲ್ಲದೇ ತಂತಿಯನ್ನು ಬದಲಾಯಿಸಿದ ಕೂಡಲೇ ಬಲ್ಬ್ ಮತ್ತೆ ಬೆಳಗಿತು.
ಸೆಂಟೀನಿಯಲ್ ಬಲ್ಬ್ ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದು, ಇದರ ಹೆಸರಲ್ಲಿ ಒಂದು ವೆಬ್ಸೈಟ್ ತೆರೆಯಲಾಗಿದ್ದು, ಬಲ್ಬ್ ಇರುವ ಕಡೆ ಒಂದು ಕ್ಯಾಮೆರಾ ಇದ್ದು ಅದು ಪ್ರತಿ ಮೂವತ್ತು ಸೆಕೆಂಡ್ ಗೆ ಒಮ್ಮೆ ಬಲ್ಬ್ ನ ಹೊಸ ಫೋಟೋ ತೆಗೆದು ಅಪ್ಲೋಡ್ ಮಾಡಲಾಗುತ್ತದೆ. ಈ ವೆಬ್ಸೈಟ್ ನಲ್ಲಿ ಬಲ್ಬ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಹಾ ಸಿಗುತ್ತದೆ ಹಾಗೂ ಅದರ ಸಂಪೂರ್ಣ ಚಿತ್ರಣ ಹಾಗೂ ಫೋಟೋಗಳು ಕೂಡಾ ಲಭ್ಯವಿದೆ.
-Team Infotrend