Live ಪಂದ್ಯದಲ್ಲಿ ಬ್ಯಾಟಿಂಗ್ ಬಿಟ್ಟು ಟಾಯ್ಲೆಟ್ ಕಡೆಗೆ ಓಡಿದ ಪಾಕಿಸ್ತಾನಿ ಆಟಗಾರ; Video ನೋಡಿದರೆ ನಗು ತಾಳಲಾರದು!

IPL ತರ ಪಾಕಿಸ್ತಾನದಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ‘ಪಾಕಿಸ್ತಾನ ಸೂಪರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸಿದೆ. ಇದು ಸಹ ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತು ಆಸಕ್ತರಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದಿದೆ. ಐಪಿಎಲ್ ನ 13 ನೇ ಆವೃತ್ತಿ ಮುಗಿದ ಬೆನ್ನಲ್ಲೇ ಪಾಕಿಸ್ತಾನ್ ಸೂಪರ್ ಲೀಗ್ ನ ಪ್ಲೇ ಆಫ್ ಪಂದ್ಯಗಳು ಪ್ರಾರಂಭವಾಗಿವೆ.

ಎಲಿಮಿನೇಟರ ರೌಂಡ್ ನ ಮೊದಲ ಪಂದ್ಯದಲ್ಲಿ ಲಾಹೋರ್ ಕಲಂದರ್ ತಂಡವು ಪೇಶಾವರ್ ಜಾಲ್ಮಿ ತಂಡದ ಮೇಲೆ 5 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿ ಮಂದಹಾಸ ಬೀರಿತು. ಈ ಹಾಯ್ ಸ್ಕೊರಿಂಗ್ ಮ್ಯಾಚ್ ನಲ್ಲಿ ನಡೆದ ತಮಾಷೆಯ ಘಟನೆಯೊಂದು ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಪೇಶಾವರ್ ಜಾಲ್ಮಿ ತಂಡವು 9 ವಿಕೆಟ್ ಗಳಿಗೆ 170 ರನ್ ಗಳಿಸಿತ್ತು. 170 ರನ್ ಗಳ ಗುರಿ ಮುಟ್ಟಲು ಕಲಂದರ್ ತಂಡ ಒಳ್ಳೆಯ ಪ್ರಾರಂಭವನ್ನೆ ಮಾಡಿತು. ಆದರೆ 12 ನೇ ಓವರ್ ನಲ್ಲಿ ಮೊದಲ ಎಸೆತ ಒಗೆದಾದ ಮೇಲೆ ಒಮ್ಮೆಲೆ ಆಟ ನಿಂತು ಬಿಟ್ಟಿತು. ಕಲಂದರ ತಂಡದ ಬ್ಯಾಟ್ಸ್ ಮನ್ ಮೊಹಮ್ಮದ್ ಹಾಫೀಜ್ ಡ್ರೆಸ್ಸಿಂಗ್ ರೂಮ್ ಕಡೆಗೆ ಓಡುತ್ತ ಹೋದನು. ನಿಜವಾಗಿಯೂ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಆ ಸಮಯದಲ್ಲಿ ಯಾರಿಗೂ ತಿಳಿಯದಾಗಿತ್ತು.

ಅದೇ ಸಮಯದಲ್ಲಿ ಫೀಲ್ಡರ್ ಗಳಾದ ವಹಾಬ್ ರಿಯಾಜ್, ಇಮಾಮ್ ಉಲ್ ಹಕ್ ಮತ್ತು ಶೋಯೆಬ್ ಮಲಿಕ್ ತಮ್ಮ ತಮ್ಮಲ್ಲೇ ಚರ್ಚೆ ಮಾಡುತ್ತಾ ಗ್ರೌಂಡ್ನಲ್ಲಿ ನಿಂತಿದ್ದರು. ಹಾಗೆ ಸ್ಪೈಕ್ ಕ್ಯಾಮೆರಾ ಅವರ ಹತ್ತಿರ ನಿಲ್ಲಿಸಿದರು. ವೀಕ್ಷಕ ವಿವರಣೆಕಾರ ರಮೀಜ್ ರಾಜಾ ಅವರು ಈ ಮೇಲೆ ಹೇಳಿದ ಫೀಲ್ಡರುಗಳ ಜೊತೆಗೆ ಈ ವಿಷಯವಾಗಿ ಚರ್ಚೆ ಮಾಡಿದರು. ಆಗ ಗೊತ್ತಾಯಿತು ಮೊಹಮ್ಮದ್ ಹಾಫೀಜ್ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಓಡಿ ಹೋದ ಕಾರಣ.

ರಮೀಜ್ ರಾಜಾ ಅವರು ಕೇಳಿದ ಪ್ರಶ್ನೆಗೆ ಇಮಾಮ್ ಅವರು, ಕಳೆದ ಎರಡು ಓವರ್ ಗಳಿಂದ ಹಾಫೀಜ್ ನನಗೆ ತುಂಬಾ ಜೋರಾಗಿ ಲಘುಶಂಕೆಯ ಸಮಸ್ಯೆ ಕಾಡುತ್ತಿದೆ ಎಂದು ಹೇಳುತ್ತಿದ್ದ, ಅದಕ್ಕಾಗಿ ಆತ ಡ್ರೆಸ್ಸಿಂಗ್ ರೂಮ್ ಕಡೆಗೆ ಓಡಿ ಹೋದನು ಎಂದು ಹೇಳಿದರು. ಇಮಾಮ್ ಅವರು ನೀಡಿದ ಈ ಉತ್ತರದಿಂದ ಕಮೆಂಟೇಟರ್ ಬಾಕ್ಸ್ ನಲ್ಲಿದ್ದವರು ಎಲ್ಲರೂ ಗೊಳ್ಳನೆ ನಗಲಾರಂಭಿಸಿದರು.

ಹಫೀಜ್ ಪ್ರದರ್ಶಿಸಿದರು ಉತ್ತಮ ಆಟ…. 

ಹಫೀಜ್ ಅವರು 46 ಎಸೆತಗಳಲ್ಲಿ 9 ಫೋರ್ ಮತ್ತು 2 ಸಿಕ್ಸ್ ಗಳ ಸಹಾಯದಿಂದ ಔಟಾಗದೆ 74 ರನ್ ಗಳನ್ನು ದಾಖಲಿಸಿದರು. ಮತ್ತು ತಮ್ಮ ತಂಡವಾದ ಲಾಹೋರ್ ಕಲಂದರ ತಂಡವನ್ನು 5 ವಿಕೆಟ್ ಗಳಿಂದ ಗೆಲ್ಲಿಸಿದರು.