ಹಾವಿನ ಲೈವ್ ಆಪರೇಶನ್! ಡಾಕ್ಟರ್ಸ್ ಗಳು ಹಾವಿನ ಗಂಟಲಲ್ಲಿ ಸಿಲುಕಿದ ಬಟ್ಟೆಯನ್ನು ತೆಗೆದರು ಹೀಗೆ..!

ಸೋಶಿಯಲ್ ಮೀಡಿಯಾದಲ್ಲಿ ಹಾವಿನ ಆಪರೇಶನ್ ಮಾಡಿ ಗಂಟಲಲ್ಲಿ ಸಿಲುಕಿದ ಬಟ್ಟೆಯನ್ನು ತೆಗೆಯುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಡಾಕ್ಟರ್ ಗಳು ಹಾವಿನ ಜೀವ ಉಳಿಸುವ ಒಳ್ಳೆಯ ಪ್ರಯತ್ನವನ್ನು ಮಾಡಿದ್ದಾರೆ.

ಡಾಕ್ಟರ್ ಗಳಿಗೆ ಜೀವಂತ ದೇವರುಗಳಂತೆ ಭಾವಿಸಲಾಗುತ್ತದೆ. ಇವರು ಬರೀ ಮನುಷ್ಯರ ಜೀವ ಅಷ್ಟೇ ಅಲ್ಲ ಭೂಮಿಯ ಮೇಲಿನ ಸಕಲ ಪ್ರಾಣಿಗಳ ಜೀವಕ್ಕೆ ಅಪಾಯ ಬಂದರೆ ಅದನ್ನು ದೂರ ಮಾಡಲು ತಯಾರಾಗಿರುತ್ತಾರೆ.

ಸದ್ಯ ಹಾವೊಂದು ಬಟ್ಟೆಯನ್ನು ನುಂಗಿ ತಾಪತ್ರಯಕ್ಕೆ ಸಿಲುಕಿ ಒದ್ದಾಡುತ್ತಿರುವ ಸಂದರ್ಭದಲ್ಲಿ ಡಾಕ್ಟರ್ ಗಳು ಅದರ ಸಹಾಯಕ್ಕೆ ಓಡಿ ಬಂದಿದ್ದಾರೆ.

ಇಲ್ಲಿ ಡಾಕ್ಟರ್ ಗಳು ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಿ ಒಂದು ವಿಷಕಾರಿ ಹಾವಿನ ಆಪರೇಶನ್ ತುಂಬಾ ಜಾಗೃತೆಯಿಂದ ಮಾಡುತ್ತಿರುವದು ಕಂಡು ಬರುತ್ತಿದೆ.

ನೋಡಿ ಈ ಲೈವ್ ವಿಡಿಯೋ…

ಹಾವು ಯಾವತ್ತೂ ತನ್ನ ಬೇಟೆಯನ್ನು ಹಿಡಿದ ತಕ್ಷಣ ಅದನ್ನು ನುಂಗಿ ಬಿಡುತ್ತದೆ. ಹೀಗಿರುವಾಗ ಹಾವು ಕೆಲವೊಂದು ಸಲ ಬೇಟೆಯಂದು ತಿಳಿದು ನುಂಗಿದ ವಸ್ತುಗಳು ಅದಕ್ಕೆ ಕಗ್ಗಂಟಾಗಿ ಪರಿಣಮಿಸಿಬಿಡುತ್ತದೆ. ಅದು ಗಂಟಲಲ್ಲಿಯೇ ಸಿಕ್ಕಿ ಹಾಕಿಕೊಂಡಾಗ ಮಾತ್ರ ಅಸಹ್ಯ ವೇದನೆಯಿಂದ ಒದ್ದಾಡುತ್ತವೆ. ಈ ಹಾವಿನ ಗಂಟಲಲ್ಲಿಯೂ ಹೀಗೆಯೇ ಬೆಟ್ಟೆಯೊಂದು ಸಿಲುಕಿದೆ. ಆ ಸಿಲುಕಿದ ಬಟ್ಟೆಯನ್ನು ಡಾಕ್ಟರ್ ಗಳು ನಿಧಾನವಾಗಿ ಹಾವಿನ ಬಾಯಿಯಿಂದ ತೆಗೆಯುತ್ತಿದ್ದಾರೆ.

ನೇಟಿಜನ್ಸ್ ಗಳಿಂದ ಡಾಕ್ಟರ್ ಗಳ ಹೊಗಳಿಕೆ.

1 ನಿಮಿಷ 42 ಸೆಕೆಂಡು ಗಳ ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 14 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಒಬ್ಬ ಯೂಸರ್, ನಾನೇನು ದೊಡ್ಡ ಸರ್ಪಮಿತ್ರನಲ್ಲ ಆದರೂ ಡಾಕ್ಟರ್ ಗಳು ಹಾವಿನ ಗಂಟಲಲ್ಲಿ ಸಿಲುಕಿದ ಬಟ್ಟೆಯನ್ನು ತೆಗೆದಾಗ ನಿಜಕ್ಕೂ ನನಗೆ ತುಂಬಾ ಸಮಾಧಾನವಾಗಿದೆ ಎಂದಿದ್ದಾನೆ. ಅನೇಕ ಯೂಸರ್ಸ್ ಗಳು ಡಾಕ್ಟರ್ ಗಳ ಈ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.