LPG Booking: ಕೇವಲ ಒಂದು Missed Call ಮಾಡುವ ಮೂಲಕ ನಿಮ್ಮ ಮನೆಗೆ ಬರುವದು ಗ್ಯಾಸ್ ಸಿಲಿಂಡರ್, ಹೇಗೆ ಅಂತ ತಿಳಿದುಕೊಳ್ಳಿ!

LPG Booking : ಎಲ್ಪಿಜಿ ಗ್ರಾಹಕರ ಸಲುವಾಗಿ ಒಂದು ಮಹತ್ವದ ಸುದ್ಧಿ ಇದೆ. ನಿಮಗೂ ಕೂಡಾ ಗ್ಯಾಸ್ ಬುಕಿಂಗ್ ಮಾಡಲು ತುಂಬಾ ಅಡಚಣೆ ನಿರ್ಮಾಣವಾಗುತ್ತಿದ್ದರೆ ನಿಮ್ಮ ಸಲುವಾಗಿಯೇ ಈ ಸುದ್ಧಿ ಇದೆ. ಗ್ಯಾಸ್ ಸಿಲಿಂಡರ್ ಬುಕ್ ಮಾಡುವದು ತುಂಬಾ ಸರಳವಾಗಿದೇ.

ಸದ್ಯಕ್ಕೆ ನಿಮಗೆ ಗ್ಯಾಸ್  ಸಿಲಿಂಡರ್ ಬುಕ್ ಮಾಡುವ ಸಲುವಾಗಿ ಗ್ಯಾಸ್ ಏಜೆನ್ಸಿ ಕಡೆಗೆ  ಹೋಗದೆ ಕೇವಲ ನಿಮ್ಮ ಮೊಬೈಲ್ ಮುಖಾಂತರ ಮಾಡಬಹುದು, ಅದು ಸಹ ಒಂದು ಮಿಸ್ ಕಾಲ್ ಮಾಡುವ ಮೂಲಕ ನಿಮ್ಮ ಮನೆಯೇ ಮುಂದೆ ಗ್ಯಾಸ್ ಸಿಲಿಂಡರ್ ಬರುವದು. ಈ ಹೊಸ ವ್ಯವಸ್ಥೆಯನ್ನು ಇಂಡಿಯನ್ ಆಯಿಲ್(IOC) ತನ್ನ ಗ್ರಾಹಕರ ಸಲುವಾಗಿ ಈ ಸೇವೆಯನ್ನು ಪ್ರಾರಂಭ ಮಾಡಿದೆ.

ಈ ಯೋಜನೆಯ ಅಡಿಯಲ್ಲಿ, ಕೇವಲ ನೀವು ಮಿಸ್ ಕಾಲ್ ಮಾಡಿದರೆ ಸಾಕು ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ನಿಮ್ಮ ಮನೆಯ ಮುಂದೆ ಗ್ಯಾಸ್ ಸಿಲಿಂಡರ್ ಬರುವದು ಖಚಿತ. ಇಂಡಿಯನ್ ಆಯಿಲ್ ಈ ವರ್ಷವೇ ಅಂದರೆ ಫೆಬ್ರುವರಿ ತಿಂಗಳಲ್ಲಿ ಮಿಸ್ ಕಾಲ್ ಸೇವೆಯನ್ನು ಪ್ರಾರಂಭ ಮಾಡಿದೆ. ಇದಕ್ಕೂ ಮುಂಚೆ ಕಸ್ಟಮರ್ ಕೇರ್ ಗೆ ಕಾಲ್ ಮಾಡಿ ಸುಮಾರು ಸಮಯದ ವರೆಗೆ ಹೋಲ್ಡ್ ಮಾಡಿ ಬುಕ್ ಮಾಡುವ ಪರಸ್ಥಿತಿ ಇತ್ತು, ಆದರೆ ಈಗ ಅದರ ಅವಶ್ಯಕತೆ ಇಲ್ಲ. ಕೇವಲ ಒಂದು ಮಿಸ್ ಕಾಲ್ ಮಾಡಿದರೆ ಸಾಕು ಗ್ಯಾಸ್ ಸಿಲಿಂಡರ್ ನಿಮ್ಮ ಬಾಗಿಲವರೆಗೆ ತಲುಪಿಸಲಾಗುತ್ತದೆ.

ಇಂಡಿಯನ್ ಆಯಿಲ್ ತನ್ನ  ಎಲ್ಪಿಜಿ ಗ್ರಾಹಕರಿಗೆ ಟ್ವೀಟ್ ಮುಖಾಂತರ ಈ ಮಾಹಿತಿಯನ್ನು ನೀಡಿದೆ. ಇಂಡಿಯನ್ ಆಯಿಲ್ ಮಿಸ್ ಕಾಲ್ ಕೊಡುವ ಸಲುವಾಗಿ ಒಂದು ನಂಬರ್ ಸಹ ನೀಡಿದೆ. ಆ ನಂಬರ್ 8454955555 ಇದಾಗಿದೆ. ನೀವು ನಿಮ್ಮ ನೊಂದಣಿ ಮಾಡಿರುವ ಮೊಬೈಲ್ ಮೂಲಕ ಆ ನಂಬರ ಗೆ ಮಿಸ್ ಕಾಲ್ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಅಷ್ಟೇ ಅಲ್ಲದೆ ಇಂಡಿಯನ್ ಆಯಿಲ್ ಟ್ವಿಟ್ಟರ್ ನಲ್ಲಿ ಈ ನಂಬರ್ ಗೆ ಮಿಸ್ ಕಾಲ್ ಮಾಡುವ ಮೂಲಕ ಹೊಸ ಗ್ಯಾಸ್ ಕನೆಕ್ಷನ್ ಸಹ ಪಡೆಯಬಹುದು ಎಂದು ತಿಳಿಸಿದೆ. ವಿಶೇಷವೆಂದರೆ ಇದರ ಸಲುವಾಗಿ ಗ್ರಾಹಕರ ಕಡೆಯಿಂದ   ಬೇರೆ ಯಾವುದೇ ಪ್ರಕಾರದ ಶುಲ್ಕ ತಗೆದುಕೊಳ್ಳುವದಿಲ್ಲ.

ಒಂದನೇ ಪದ್ಧತಿಯಂದರೆ ನಿಮ್ಮ ರಜಿಸ್ಟರ್ ಮೊಬೈಲ್ ಮೂಲಕ ಮಿಸ್ ಕಾಲ್ ಮಾಡಿ ಗ್ಯಾಸ್ ಸಿಲಿಂಡರ್ ಬುಕ ಮಾಡುವದು ಇನ್ನೊಂದು ಪದ್ಧತಿ ಇದೆ ಅದೇನೆಂದರೆ ಮಿಸ್ಡ್ ಕಾಲ್ ಹೊರೆತು IOC, HPCL ಮತ್ತು BPCL ನ ಗ್ರಾಹರಕ ಸಲುವಾಗಿ SMS ಮತ್ತು  Whatsapp ಮೂಲಕ ಸಹ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.

ನೀವು ಇಂಡೆನ್ ಗ್ರಾಹಕರು ಇದ್ದರೆ ನೀವು ನಿಮ್ಮ ರಜಿಸ್ಟರ ಮೊಬೈಲ್ ನಂಬರ್ ಮೂಲಕ 7718955555 ಮೇಲೆ ಕಾಲ್ ಮಾಡಿ ಗ್ಯಾಸ್ ಬುಕ್ ಮಾಡಬಹುದು ಅಲ್ಲದೆ ನಿಮ್ಮ ನೋಂದಣಿಕೃತ ಮೊಬೈಲ್ ನಂಬರ್ ಮೂಲಕ Whatsapp ನಲ್ಲಿ 7588888824 ಈ ನಂಬರ್ ಗೆ REFILL ಅಂತ ಟೈಪ್ ಮಾಡಿ ಮೆಸೇಜ್ ಮಾಡಿ ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.

HP ಗ್ರಾಹಕರ ಸಲುವಾಗಿ ಸಹ ಅದೇ ತರಹ 9222201122  ಈ ನಂಬರ್ ಗೆ whatsapp ನಲ್ಲಿ ನಿಮ್ಮ ನೋಂದಣಿ ಇರುವ ನಂಬರ್ ದಿಂದ BOOK ಅಂತ ಟೈಪ್ ಮಾಡಿದರೆ ಸಾಕು ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ ಆಗುತ್ತೆ. ಅಲ್ಲದೆ ಈ ನಂಬರ್ ಮೂಲಕ ಸಬ್ಸಿಡಿಯ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.

Bhart Gas ನ ಗ್ರಾಹಕರ ಸಲುವಾಗಿ, ನಿಮ್ಮ ನೋಂದಣಿ ಹೊಂದಿರುವ ಮೊಬೈಲ್ ನಂಬರ್ ಮೂಲಕ 1800224344 ಈ ನಂಬರ್ ಗೆ BOOK ಅಂತ ಮೆಸೇಜ್ ಕಳುಹಿಸಿ ತದನಂತರ ಏಜೆನ್ಸಿ ನಿಮ್ಮ ಬುಕಿಂಗ್ ರಿಕ್ವೆಸ್ಟ್ ಸ್ವೀಕಾರ ಮಾಡಿ ನಿಮ್ಮ ವಾಟ್ಸಾಪ್ ನಂಬರ್ ನಲ್ಲಿ ಅಲರ್ಟ್ ಬರುವದು.