ಈ ಥರ ಹುಡುಗಿಯರು ತುಂಬಾ ಅದೃಷ್ಟವಂತರಂತೆ! ಫೋಟೋಗಳನ್ನು ನೋಡಿ…
ನಿಮಗೆ ಅನುಭವವಾಗಿರಬಹುದು, ನಿಮ್ಮ ಮಕ್ಕಳನ್ನು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೊರಕರೆದುಕೊಂಡು ಹೋದಾಗ ಹಿರಿಯರಾರೊ ಅವರನ್ನು ನೋಡಿ, ಭಾರಿ ಅದೃಷ್ಟವಂತೆ ಈಕೆ ಎಂದು ನೇರವಾಗಿ ಹೇಳುತ್ತಾರೆ. ಪರಿಚಯವಿಲ್ಲದಿದ್ದರೂ ಸಹ “ಅವಳಿಗೆ ಚೆನ್ನಾಗಿ ನೋಡ್ಕಳಿ, ನಿಮಗೆ ಅದೃಷ್ಟ ತರ್ತಾಳೆ ಈ ತಾಯಿ” ಎನ್ನುತ್ತಾರೆ. ಅವರು ಹಾಗೆನ್ನಲು ಕಾರಣ ಮಕ್ಕಳ ದೇಹರಚನೆ.
ಕೈ – ಕಾಲು, ಮುಖ ಲಕ್ಷಣ ನೋಡಿಯೇ ತುಂಬಾ ಜನ ಮಹಿಳೆಯರ ಗುಣಗಳಿಂದ ಹಿಡಿದು ಅವರ ವ್ಯಕ್ತಿತ್ವದವರೆಗೆ ಕರಾರುವಕ್ಕಾಗಿ ಹೇಳಬಲ್ಲರು. ಕೈ ಬೆರಳು, ಹಣೆ, ಮುಖ ಮುಂತಾದ ಅಂಗಾಂಗ ನೋಡಿ ಆಕೆಯ ಭವಿಷ್ಯ ಹೇಳಬಲ್ಲವರಿದ್ದಾರೆ. ಯಾರೊ ದುಡ್ಡಿಗೆ ಹೇಳುವ ಶಾಸ್ತ್ರದ ಬಗ್ಗೆ ನಾ ಮಾತಾಡ್ತಿಲ್ಲ, ಮಾಮೂಲಾಗಿ ಹಿರಿಯರು ಅಥವಾ ಅನುಭವ ಇರುವವರು ಎದುರಾಎದುರಾ ಹೇಳಿಬಿಡುತ್ತಾರಷ್ಟೆ.

ಕೆಲವು ಜನರು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಹೊಂದಿದ್ದಾರೆ ಮತ್ತು ಅದರ ಸ್ಪಷ್ಟ ಸೂಚನೆಗಳು ಅವರ ಜಾತಕದ ಗ್ರಹಗಳಿಂದ ಹಿಡಿದು ದೇಹದ ಮೇಲೆ ತಾಳೆ ರೇಖೆಗಳು ಮತ್ತು ಮಚ್ಚೆ, ಕಲೆಗಳು ಇತ್ಯಾದಿಗಳವರೆಗೆ ಕಂಡುಬರುತ್ತವೆ. ಅನುಭವ ಇರುವವರು ಹಾಗೇ ಮೇಲ್ನೋಟಕ್ಕೇ ಆ ಬಗ್ಗೆ ಹೇಳಿಬಿಡುತ್ತಾರೆ.
ಹುಡುಗಿಯರು ಮತ್ತು ಮಹಿಳೆಯರ ದೇಹದಲ್ಲಿ ಇರುವ ಚಿಹ್ನೆಗಳ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ, ಅದು ಅವರು ಅದೃಷ್ಟವಂತರು (Lucky) ಎಂದು ಸೂಚಿಸುತ್ತದೆ. ಸಮುದ್ರ ಶಾಸ್ತ್ರ (Samudra Shastra) ದ ಪ್ರಕಾರ, ಅಂತಹ ಮಹಿಳೆಯರು ಎಲ್ಲಿ ವಾಸಿಸುತ್ತಾರೋ ಅಲ್ಲಿ ಸಾಕಷ್ಟು ಸಂಪತ್ತು ಇರುತ್ತದೆ.

ಅಗಲವಾದ ಹಣೆ (Wide forehead) :
ವಿಶಾಲ ಹಣೆಯಿರುವ ಹುಡುಗಿಯರನ್ನು ಜ್ಯೋತಿಷ್ಯ ಮತ್ತು ಸಮುದ್ರಶಾಸ್ತ್ರದಲ್ಲಿ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಅವರು ಹೋಗುವ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾರೆ. ಅಂದರೆ ಅವರ ಗಂಡನಮನೆಯಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.
ಎಡಭಾಗದ ಮಚ್ಚೆ (Left side mole) :
ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಗಳು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ದೇಹದ ಬಲಭಾಗಕ್ಕಿಂತ ಎಡಭಾಗದಲ್ಲಿ ಹೆಚ್ಚು ಮಚ್ಚೆ ಹೊಂದಿರುವ ಮಹಿಳೆಯರನ್ನು ಕುಟುಂಬಕ್ಕೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಚಿತ್ರದಲ್ಲಿರುವ ಹಾಗೆ ದೇಹದ ಅಥವಾ ಮುಖದ ಬಲಭಾಗದಲ್ಲಿ ಮಚ್ಚೆ ಇದ್ದರೆ ಅವರನ್ನು ಇಡೀ ಕುಟುಂಬಕ್ಕೆ ಅದೃಷ್ಟವಂತೆ ಎನ್ನಲಾಗುತ್ತದೆ.

ಕಾಲುಗಳಲ್ಲಿ ಕಮಲದ ಚಿಹ್ನೆ (Lotus sign in feet) :
ಪಾದದ ಅಡಿಭಾಗದಲ್ಲಿ ಶಂಖ, ಕಮಲ ಅಥವಾ ಚಕ್ರ ಇರುವುದು ಬಹಳ ಶುಭ. ಇದು ಮಹಿಳೆಯರಿಗೆ ಇದ್ದಲ್ಲಿ, ಅವರು ದೊಡ್ಡ ಹುದ್ದೆಗೆ ತಲುಪುವುದು ಮಾತ್ರವಲ್ಲ, ಇಡೀ ಕುಟುಂಬಕ್ಕೆ ಅದೃಷ್ಟವಂತರು ಎಂದು ಸಾಬೀತುಪಡಿಸುತ್ತಾರೆ. ಅವರು ಓದಿನಲ್ಲಿ ಮುಂದಿದ್ದು ಉನ್ನತ ಹುದ್ದೆ ಗಳಿಸುತ್ತಾರಂತೆ.
ಇದಲ್ಲದೆ, ಹೆಬ್ಬೆರಳು ಅಗಲ, ದುಂಡಗಿನ ಮತ್ತು ಕೆಂಪು ಬಣ್ಣದವಿದ್ದರೆ ಆ ಹುಡುಗಿಯರು ಖುದ್ದು ಅವರು ಮತ್ತು ಅವರ ಕುಟುಂಬವು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತದಂತೆ. ಇಂಥವರ ಮನೆಯಲ್ಲಿ ಅಶಾಂತಿ, ಅಸಂತೋಷಕ್ಕೆ ಜಾಗ ಇಲ್ಲ ಎಂದು ನಂಬಲಾಗುತ್ತದೆ. ತುಂಬಾ ಸಲ ಇದು ಸಾಬೀತು ಕೂಡ ಆಗಿದೆ.

ಉದ್ದನೆಯ ಬೆರಳುಗಳು (Long fingers) :
ಕೈಯಲ್ಲಿ ಉದ್ದನೆಯ ಬೆರಳುಗಳನ್ನು ಹೊಂದಿರುವ ಹುಡುಗಿಯರು ತಮ್ಮ ಗಂಡಂದಿರಿಗೆ ತುಂಬಾ ಅದೃಷ್ಟಶಾಲಿ ಎಂದು ಎನ್ನಲಾಗುತ್ತದೆ. ಇಂಥವರ ಪತಿ ತನ್ನ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾನೆ. ಹೆಣ್ಣುಮಕ್ಕಳು ಇನ್ನೂ ಚಿಕ್ಕವಿರುವಾಗಲೇ ಇದನ್ನು ಗಮನಿಸುವ ತುಂಬಾ ಈ ಬಗ್ಗೆ ಆಗಲೇ ಅಂದೇಬಿಡುತ್ತಾರೆ.
ಉದ್ದನೆಯ ಕುತ್ತಿಗೆ (Long Neck) :
ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಹುಡುಗಿಯರು ಅವರು ಸಂತೋಷ ಮತ್ತು ಸಮೃದ್ಧಿಯ ದೃಷ್ಟಿಯಿಂದಲೂ ಅದೃಷ್ಟವಂತರಂತೆ. ಅವರ ಪತಿ ಸಾಕಷ್ಟು ಹಣ ಸಂಪಾದಿಸುತ್ತಾನೆ ಎಂದು ನಂಬಲಾಗಿದೆ. ಇದನ್ನು ಕೂಡ ತುಂಬಾ ಜನ ನಂಬುತ್ತಾರೆ, ಉದ್ದ ಕತ್ತಿನ ಹುಡುಗಿಯರು ಅಥವಾ ಮಹಿಳೆಯರು ಕಂಡಾಗ ಈ ಮಾತು ಹೊರಬರುತ್ತದೆ.

(ಗಮನಿಸಿ : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಇದು ಲೋಕಾರೂಢಿ ಅಥವಾ ಜನರಿಂದ ಜನರಿಗೆ ಬಂದ ಅನುಭವದ ಮಾತು ಆಧರಿಸಿದ್ದು, ಇದು ಖಚಿತ ಮಾಹಿತಿಯಲ್ಲ)
-Team Infotrend