VIDEO : ಈ ವ್ಯಾಯಾಮಗಳು ಶ್ವಾಸಕೋಶವನ್ನು ಬಲವಾಗಿಸುತ್ತವೆ ಮತ್ತು ಆರೋಗ್ಯಕರವಾಗಿಸುತ್ತವೆ
ನೀವು ಈ ಶ್ವಾಸಕೋಶದ ವ್ಯಾಯಾಮಗಳನ್ನು ಪ್ರತಿದಿನ ಅಭ್ಯಾಸ ಮಾಡಿದರೆ, ನಿಮಗೆ ಉಸಿರಾಟದ ತೊಂದರೆ ಉಂಟಾಗುವ ಅಪಾಯ ಬಹಳವಾಗಿ ಕಡಿಮೆಯಾಗುತ್ತದೆ. ಮಾಲಿನ್ಯದಿಂದ ಅಥವಾ ಧೂಮಪಾನದಂತಹ ಅಭ್ಯಾಸಗಳಿಂದಾಗಿ ನಮ್ಮ ಶ್ವಾಸಕೋಶವು ತುಂಬಾ ದುರ್ಬಲಗೊಂಡಿರುತ್ತದೆ. ವಾಹನಗಳ ದಟ್ಟಣೆ ಜೊತೆಗೆ ಸಿಗರೇಟ್ – ಬೀಡಿ ಶ್ವಾಸಕೋಶವನ್ನು ಹೈರಾಣು ಮಾಡಿರುತ್ತವೆ.
ಜೊತೆಗೆ ಕರೋನವೈರಸ್ ಅಥವಾ ಇತರ ಯಾವುದೇ ಶ್ವಾಸಕೋಶದ ಸೋಂಕಿನಿಂದ ಸೋಂಕಿಗೆ ಒಳಗಾಗಿದ್ದರೆ ದೈಹಿಕ ಆರೋಗ್ಯವು ಹದಗೆಡುತ್ತದೆ. ಆದರೆ ನಾವು ಪ್ರತಿದಿನ ಕೆಲವು ವ್ಯಾಯಾಮಗಳನ್ನು ಮಾಡುವ ಮೂಲಕ ನಮ್ಮ ಶ್ವಾಸಕೋಶವನ್ನು ಬಲಪಡಿಸಬಹುದು. ಬನ್ನಿ ಆರೋಗ್ಯ ಹೆಚ್ಚಿಸುವ ಆ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ…

1 ಯೋಗ :
ದೇಹದ ಯಾವುದೇ ಭಾಗವನ್ನು ಬಲಪಡಿಸಲು ಯೋಗ ಅತ್ಯುತ್ತಮ ಮಾರ್ಗವಾಗಿದೆ. ಯೋಗದ ಸಮಯದಲ್ಲಿ ಆಳವಾದ ಮತ್ತು ದೀರ್ಘವಾದ ಉಸಿರಾಟವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ಶ್ವಾಸಕೋಶಕ್ಕೆ ಸರಿಯಾದ ಪೋಷಣೆ ಸಿಗುತ್ತದೆ. ಆಳವಾದ ಉಸಿರನ್ನು ತೆಗೆದುಕೊಳ್ಳುವ ಮೂಲಕ, ನಾವು ಗರಿಷ್ಠ ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಶ್ವಾಸಕೋಶಗಳು ಆರೋಗ್ಯಕರವಾಗಿರುತ್ತವೆ.
2 ಈಜು :
ಸ್ವಿಮ್ಮಿಂಗ್ ಸಮಯದಲ್ಲಿ ನಿಮ್ಮ ಶ್ವಾಸಕೋಶಗಳು ತುಂಬಾ ಸಕ್ರಿಯವಾಗಿರುತ್ತವೆ ಮತ್ತು ಆಳವಾದ ಉಸಿರಾಟ ಮತ್ತು ದೀರ್ಘ ವಿರಾಮವನ್ನು ತಗೆದುಕೊಳ್ಳತ್ತದೆ. ಇದು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಶ್ವಾಸಕೋಶದ ಸ್ನಾಯುಗಳ ಮೇಲೆ ಸಕಾರಾತ್ಮಕ ಒತ್ತಡವನ್ನು ಬೀರುತ್ತದೆ. ಈಜು ಒಂದು ಉತ್ತಮ ಲಂಗ್ಸ್ ವ್ಯಾಯಾಮವಾಗಿದೆ.

3 ಉಸಿರಾಟದ ವ್ಯಾಯಾಮ :
ಉಸಿರಾಟದ ವ್ಯಾಯಾಮದ ಮೂಲ ಉದ್ದೇಶ ನಿಮ್ಮ ಉಸಿರಾಟವನ್ನು ನಿಯಂತ್ರಿಸುವುದು ಆಗಿರುತ್ತದೆ. ಇದು ನಿಮ್ಮ ದೇಹವನ್ನು ಶಾಂತಗೊಳಿಸುತ್ತದೆ ಮತ್ತು ಉಸಿರಾಟದ ವ್ಯವಸ್ಥೆಯಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಉಸಿರಾಟದ ವ್ಯಾಯಾಮದ ಸಮಯದಲ್ಲಿ ದೀರ್ಘ ಮತ್ತು ಆಳವಾದ ಉಸಿರಾಟವು ಶ್ವಾಸಕೋಶವನ್ನು ಸಂಪೂರ್ಣವಾಗಿ ತೆರೆಯುವಂತೆ ಮಾಡುತ್ತದೆ.
4 ಕಾರ್ಡಿಯೋ :
ಓಡುವ ಅಥವಾ ಇತರ ಹೃದಯದ ವ್ಯಾಯಾಮಗಳನ್ನು ಅಭ್ಯಾಸ ಮಾಡಲು ನಿಮಗೆ ಸಾಕಷ್ಟು ಆಮ್ಲಜನಕ ಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಶ್ವಾಸಕೋಶವು ಹೆಚ್ಚು ಶ್ರಮಿಸುತ್ತದೆ. ಈ ಪ್ರಯತ್ನವು ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಆದ್ದರಿಂದ ಶ್ವಾಸಕೋಶವನ್ನು ಬಲಪಡಿಸಲು ಸೋಮಾರಿತನವನ್ನು ಬದಿಗಿರಿಸಿ ಹೆಚ್ಚು ಗಮನಹರಿಸಿ.

ಆಳವಾದ ಉಸಿರಾಟವು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಮತ್ತು ನಮ್ಮ ಉಸಿರಾಟದ ಸಾಮರ್ಥ್ಯವನ್ನು ಸುಧಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇಂತಹ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದು ನಮ್ಮ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅದ್ಭುತ, ಕೋವಿಡ್-19 ರ ಅವಧಿಯಲ್ಲಿಯಂತೂ ಅವು ವಿಶೇಷವಾಗಿ ಮಹತ್ವದ್ದಾಗಿವೆ.
ಕರೋನವೈರಸ್ ಪ್ರಾಥಮಿಕವಾಗಿ ಶ್ವಾಸಕೋಶ ಮತ್ತು ನಮ್ಮ ಉಸಿರಾಟದ ವ್ಯವಸ್ಥೆಯನ್ನು ಆಕ್ರಮಿಸುತ್ತದೆ, ಇದರ ಪರಿಣಾಮವಾಗಿ ಉಸಿರಾಟದ ತೊಂದರೆಗಳು ಮತ್ತು ತೀವ್ರತರವಾದ ನ್ಯುಮೋನಿಯಾ ಉಂಟಾಗುತ್ತದೆ. ನಮ್ಮ ಶ್ವಾಸಕೋಶವನ್ನು ದೃಢವಾಗಿ ಮತ್ತು ಆರೋಗ್ಯವಾಗಿರಿಸಿಕೊಳ್ಳುವುದು ಸಾಂಕ್ರಾಮಿಕ ರೋಗಕ್ಕೆ ನಮ್ಮನ್ನು ಸಿದ್ಧಪಡಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.

ಉಸಿರಾಟದ ವ್ಯಾಯಾಮದ ಬಗ್ಗೆ ಉತ್ತಮವಾದ ಅಂಶವೆಂದರೆ ನೀವು ಅವುಗಳನ್ನು ಎಲ್ಲಿ ಬೇಕಾದರೂ ಮಾಡಬಹುದು ಮತ್ತು ಅವು ನಮ್ಮ ಶ್ವಾಸಕೋಶವನ್ನು ಬಲಪಡಿಸುತ್ತವೆ. ಈ ಮೇಲಿನ ಉಸಿರಾಟದ ವ್ಯಾಯಾಮಗಳು ಸರಳ, ಹೆಚ್ಚು ಪರಿಣಾಮಕಾರಿ, ಮತ್ತು ಉತ್ತಮ ಫಲಿತಾಂಶಗಳನ್ನು ಹೊಂದಿವೆ.
ಯಾರಾದರೂ ಇವನ್ನು ಮಾಡಬಹುದು. ಇಲ್ಲಿ ನೀಡಲಾದ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿ ಅಲ್ಲ. ಇದು ಕೇವಲ ಪ್ರಾಥಮಿಕ ಸಲಹೆ ಮಾತ್ರ, ಸೋಂಕಿತರಾದ ಅಥವಾ ಇತರೆ ಸಮಸ್ಯೆ ಎದುರಾದ ಮೇಲೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಮೇಲೆ Yoganam ಯೂಟ್ಯೂಬ್ ಚಾನೆಲ್ ನ ನಮಿತಾರವರು Breathing Exercises ಮಾಡುವ ವಿಡಿಯೊ ಇದೆ, ಆಸಕ್ತರು ನೋಡಿ…
-Team Infotrend