Luxury Train: ಇದು ಜಗತ್ತಿನ ಅತೀ ದುಬಾರಿ ಲಕ್ಸುರಿ ಟ್ರೈನ್! ಪ್ರವಾಸದ ಫೀಲಿಂಗ್ 5 ಸ್ಟಾರ್ ಹೋಟೆಲ್ ರೀತಿಯಲ್ಲಿ…

ಪ್ರವಾಸ ಮಾಡುವದೆಂದರೆ ಅಥವಾ ಸುತ್ತಾಡುವದೆಂದರೆ ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುತ್ತದೆ. ಏತನ್ಮಧ್ಯೆ ಅಲ್ಲಿಯ ಸೌಲಭ್ಯಗಳು ಒಂದು ವೇಳೆ 5 ಸ್ಟಾರ್ ರೀತಿಯಲ್ಲಿ ದೊರಕಿದರೆ ಹೇಗಿರುತ್ತೆ? ತುಂಬಾ ಮಜಾ ಬರುತ್ತೆ ಅಲ್ವಾ? ಇದೇ ರೀತಿಯ ಪ್ರವಾಸದ ಅನುಭೂತಿಯನ್ನು ಕೊಡಲಿದೆ ಜಗತ್ತಿನ ಲಕ್ಸುರಿ ಟ್ರೈನ್ ವೆನಿಸ್ ಸಿಂಪ್ಲಾನ್ ಓರಿಯಂಟ್ ಎಕ್ಸ್ ಪ್ರೆಸ್. (Venice-Simplon Orient Express). ಏನಿದೆ ಈ ಟ್ರೇನಿನ ವಿಶೇಷತೆ? ಬನ್ನಿ ತಿಳಿದುಕೊಳ್ಳೋಣ…

ಓರಿಯಂಟ್ ಎಕ್ಸ್ ಪ್ರೆಸ್ 1920-30 ರ ಮಧ್ಯೆದಲ್ಲಿ ತುಂಬಾ ಫೇಮಸ್ ಆಗಿತ್ತು. ಕಾರಣ ಆಗಿನ ಕಾಲದಲ್ಲಿ ಈ ರೀತಿಯ ಟ್ರೈನ್ ಸೌಲಭ್ಯ ಇದರ ಹೊರತಾಗಿ ಬೇರೆಲ್ಲಿಯೂ ಸಿಗುತ್ತಿರಲಿಲ್ಲ. ಅದರಲ್ಲಿ ಪ್ರವಾಸ ಮಾಡುವುದೆಂದರೆ ಪ್ರತಿಯೊಬ್ಬನ ಕನಸಾಗಿರುತ್ತಿತ್ತು. ಆ ಕನಸು ಈಗಲೂ ಪೂರ್ಣಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ ಟ್ರೇನಿನ ಪ್ರವಾಸದಲ್ಲಿ ಜನಪ್ರಿಯ ಲಕ್ಸುರಿ ಕ್ಯಾಬಿನ್ ನಲ್ಲಿ ಶಾಂಪೆನ್ ದೊರೆಯುತ್ತದೆ. ನಂತರ ಕ್ರಿಸ್ಟಲ್ ಗ್ಲಾಸ್ ನಲ್ಲಿ ಡ್ರಿಂಕ್ಸ್ ಸಹ ಸರ್ವ್ ಮಾಡಲಾಗುತ್ತದೆ. ಯಾತ್ರಿಕರು ಅಲಿಶಾನ್ ಲೆದರ್ ಸೀಟ್ ಮೇಲೆ ಕುಳಿತು ಮೃಷ್ಟಾನ್ನ ಭೋಜನವೂ ಮಾಡಬಹುದಾಗಿದೆ.

ಇಲ್ಲಿ ಪ್ರವಾಸಿಗರಿಗೆ ಮಲಗಲು ಪ್ರತ್ಯೇಕವಾದ ಸ್ಲೀಪಿಂಗ್ ಕ್ವಾರ್ಟರ್ ಗಳನ್ನು ತಯಾರಿಸಿದ್ದಾರೆ. ಇಲ್ಲಿಯ ಬೆಡ್ ಮೇಲೆ ರೇಷ್ಮೆಯ ಹಾಸಿಗೆಗಳನ್ನು ಹಾಸಲಾಗುತ್ತದೆ. ಇಲ್ಲಿ ಮಲಗಿದ ನಂತರ ಅದ್ಭುತವಾಗಿ ನಿದ್ರೆ ಬರುತ್ತದೆ. ಪ್ರವಾಸದ ಮಧ್ಯೆ ಒಂದು ಪಟ್ಟಣದಲ್ಲಿ ಮಲಗಿದರೆ ಮತ್ತೆ ಏಳುವುದು ಇನ್ನೊಂದು ಪಟ್ಟಣದಲ್ಲಿ.

ಈ ಓರಿಯಂಟ್ ಎಕ್ಸ್ ಪ್ರೆಸ್ ನಲ್ಲಿ ಪ್ರವಾಸಿಗರಿಗೆ 5 ಸ್ಟಾರ್ ಹೋಟೆಲ್ ರೀತಿಯಲ್ಲಿಯೇ ಫೀಲಿಂಗ್ ಆಗುತ್ತದೆ. ಇದರಲ್ಲಿ ಬಾರ್, ಥೀಮ್ ರೆಸ್ಟೋರೆಂಟ್ ಮತ್ತು ಮನರಂಜನೆಯ ಅನೇಕ ಸಾಧನ ಸಾಮಗ್ರಿಗಳು ಉಪಲಬ್ಧವಿವೆ. ಈ ಟ್ರೈನ್ ಜನರಿಗೆ ಲಂಡನ್ ನಿಂದ ಇಟಲಿಯ ವೆನಿಸ್ ವರೆಗೆ ಪ್ರವಾಸ ಮಾಡಿಸುತ್ತದೆ. ಈ ಟ್ರೇನಿನ ಉದ್ದೇಶ ಏನೆಂದರೆ, ಬ್ರಿಟನ್ನಿಗೆ ಯುರೋಪಿನ ರೇಲ್ ನೆಟ್ವರ್ಕ್ ಜೊತೆಗೆ ಲಿಂಕ್ ಮಾಡುವದಿತ್ತು. ಇದು ಜಗತ್ತಿನ ಎಲ್ಲಕ್ಕೂ ದುಬಾರಿ ರೈಲು ಯಾತ್ರೆಯಾಗಿದೆ.


ಹಿಸ್ಟ್ರಿ ಇನ್ ಪಿಕ್ಚರ್ ಪ್ರಕಾರ, ದೂರದ ಈ ಟ್ರೈನ್ ಗೆ 1883 ರಲ್ಲಿಯೇ ತಯಾರಿಸಲಾಗಿದೆ. ಮುಂದೆ ಇದು 1920 ರಿಂದ ಹಿಡಿದು 30 ವರೆಗೆ ತುಂಬಾ ಫೇಮಸ್ ಆಗಿತ್ತು. ಈ ಟ್ರೇನಿನ ಇಂಟೀರಿಯರ್ ಗ್ರೇಟ್ ಸ್ಟಾಯಿಲ್ ನದ್ದಾಗಿದೆ.

ಮೂಲ ಓರಿಯಂಟ್ ಎಕ್ಸ್ ಪ್ರೆಸ್ ನ್ನು 1977 ರಲ್ಲಿಯೇ ಕ್ಲೋಸ್ ಮಾಡಲಾಗಿತ್ತು. ಆದರೀಗ ಈ ಟ್ರೈನ್ ಮತ್ತೆ ಪುನಾರಂಭಿಸಲಿದ್ದಾರೆ. ಇದನ್ನು ಪ್ಯಾರಿಸ್ ಒಲಂಪಿಕ್ 2024 ರಲ್ಲಿ ನಾಸ್ಟಲ್ಗಿ – ಇಸ್ತಾಂಬುಲ್ – ಓರಿಯಂಟ್ – ಎಕ್ಸ್ ಪ್ರೆಸ್ ರೂಪದಲ್ಲಿ ಮತ್ತೆ ಲಾಂಚ್ ಮಾಡುವ ಉದ್ದೇಶವಿದೆ.