ಕನ್ನಡಿಗ ರಾಬಿನ್ ಉತ್ತಪ್ಪ MS ಧೋನಿಯವರ ಲವ್ ಗುರು ಅಂತೆ!

ಭಾರತದ ಇಲ್ಲಿಯವರೆಗಿನ ಎಲ್ಲ ನಾಯಕರಲ್ಲಿ ತುಂಬಾ ಯಶಸ್ವಿಯಾದ ನಾಯಕರೆಂದರೆ ಮಾಹಿ, M S ಅಥವಾ ಮಹೇಂದ್ರಸಿಂಗ್ ಧೋನಿ. ಧೋನಿ ಮತ್ತು ಪತ್ನಿ ಸಾಕ್ಷಿಯವರ ಲವ್ ಸ್ಟೋರಿ ನಮ್ಮಲ್ಲಿ ಜಾಸ್ತಿ ಜನರಿಗೆ ಗೊತ್ತೇ ಇದೆ. ಅವರ ಜೀವನಾಧಾರಿತ ಚಿತ್ರವು ಸಹ ಯಶಸ್ಸು ಸಾಧಿಸಿತು. ಮಾಹಿ ಮತ್ತು ಸಾಕ್ಷಿ ಚಿಕ್ಕಂದಿನಿಂದ ಫ್ಯಾಮಿಲಿ ಫ್ರೆಂಡ್ ಆಗಿದ್ದರು ಎಂದು ಅನೇಕರು ಹೇಳುತ್ತಾರೆ, ಅದರಲ್ಲಿ ಸತ್ಯಾಂಶವಿಲ್ಲ.

ಮೊದಲಿನಿಂದಲೂ ಧೋನಿ ನಾಚಿಕೆ ಸ್ವಭಾವದವರಾಗಿದ್ದರು. ಕ್ರಿಕೆಟ್ ಅವರ ಮೊದಲ ಪ್ರೇಮವಾಗಿತ್ತು, ಹುಡುಗಿಯರ ಸಲುವಾಗಿ ಅವರ ಹತ್ತಿರ ಸಮಯವೇ ಇರಲಿಲ್ಲ. ಮಾಹಿಯ ಆಯುಷ್ಯದಲ್ಲಿಯೂ ಅನೇಕ ಘಟನೆಗಳು ಘಟಿಸಿವೆ. ಕೇವಲ ರಾಜ್ಯದ ವತಿಯಿಂದಾದರೂ ಆಡಲಿಕ್ಕೆ ಸಿಕ್ಕರೆ ಸಾಕು ಎಂದು ಕನಸು ಕಾಣುವ ಮಾಹಿ ಟೀಮ್ ಇಂಡಿಯಾದಲ್ಲಿ ಆಯ್ಕೆಯಾದರು.

ಏತನ್ಮಧ್ಯೆ ಧೋನಿಯವರ ಜೀವನದಲ್ಲಿ ಪ್ರಿಯಾಂಕಾ ಝಾ ಹೆಸರಿನ ಹುಡುಗಿಯೂ ಬಂದು ಹೋದಳು. ದುರ್ದೈವ ಆಕೆ ಅಪಘಾತದಲ್ಲಿ ಮೃತಳಾದಳು. ಇದರಿಂದ ಧೋನಿಗೆ ಪ್ರಚಂಡ ಶಾಕ್ ಆಗಿತ್ತು.

ಈ ಧಕ್ಕೆಯಿಂದ ಮೇಲೆಳಲು ಧೋನಿಗೆ ಸ್ವಲ್ಪ ಕಾಲಾವಕಾಶ ಬೇಕಾಯಿತು. ಈ ಸಂದರ್ಭದಲ್ಲಿಯೇ ಧೋನಿ ಭಾರತೀಯ ಕ್ರಿಕೆಟ್ ಗಾಗಿ ತನ್ನನ್ನು ತಾನೇ ಸಂಪೂರ್ಣವಾಗಿ ವಹಿಸಿಕೊಂಡಿದ್ದರು.ಧೋನಿಯ ಬಾಯೊಪಿಕ್ ನಲ್ಲಿ ತೋರಿಸದ ಸೀಕ್ರೆಟ್ ವಿಷಯವನ್ನು ಇಲ್ಲಿ ಚರ್ಚಿಸಲಿದ್ದೇವೆ. ಅದೇನೆಂದರೆ, ರಾಬಿನ್ ಉತ್ತಪ್ಪ ಇವರೇ ಧೋನಿಯ ಲವ್ ಗುರು ಇದ್ದಾರೆ.

ಧೋನಿ ಯಾವ ಫೆವ್ ರಿಟ್ ಆಟಗಾರರ ಫೋಟೋಗಳನ್ನು ನೋಡುತ್ತಾ ಬೆಳೆದಿದ್ದರೋ ಅದೇ ಆಟಗಾರರ ಜೊತೆಗೆ ಆಡಿ ದೇಶಕ್ಕಾಗಿ ಪಂದ್ಯ ಗೆಲ್ಲಿಸಿ ಕೊಡಲು ಪ್ರಾರಂಭಿಸಿದರು. ಧೋನಿಯವರ ಜೀವನಕ್ಕೆ ನಿಜವಾಗಿ ತಿರುವು ಸಿಕ್ಕ ಘಟನೆ ನಡೆದದ್ದು 2007 ರ T-ಟ್ವೆಂಟಿ ವಿಶ್ವ ಕಪ್ ಟೂರ್ನಿಯಲ್ಲಿ. ಯೋಗಾಯೋಗದಿಂದ ಧೋನಿಗೆ ನಾಯಕ ಪಟ್ಟ ಸಿಕ್ಕ ಮೇಲೆ ಅವರು ಭಾರತಕ್ಕೆ ಮೊಟ್ಟ ಮೊದಲ T-ಟ್ವೆಂಟಿಯ ವಿಶ್ವ ಕಪ್ ಪುರಸ್ಕಾರ ಮುಡಿಗೇರಿಸಿದರು.

ಆವತ್ತಿನಿಂದ ದೇಶ ಹೊಸ ನಾಯಕನಾದ ಧೋನಿಯ ಪ್ರೇಮದಲ್ಲಿ ಮುಳುಗಿದರು. ಎಲ್ಲಿ ಹೋದಲ್ಲಿ ಧೋನಿಯ ಹವಾ ಪ್ರಾರಂಭವಾಯಿತು. ಆಗ ಅನೇಕ ಹುಡುಗಿಯರು ಧೋನಿ ಸಲುವಾಗಿ ಪರದಾಡುತ್ತಿದ್ದರು.ದಿನಂಪ್ರತಿ ಒಬ್ಬಳು ಹೀರೋಯಿನ್ ಜೊತೆಗೆ ಧೋನಿಯ ಲಿಂಕ್ ಅಪ್ ಬಗ್ಗೆ ನ್ಯೂಸ್ ಬರುತ್ತಿದ್ದವು.

ಇದೆ ಸಂದರ್ಭದಲ್ಲಿ ಪಾಕಿಸ್ತಾನದ ತಂಡ ಭಾರತದ ಪ್ರವಾಸಕ್ಕೆ ಬಂತು. ಗುವಾಹಟಿಗೆ ಮೊದಲ ಏಕದಿನ ಪಂದ್ಯವಿತ್ತು. ಭಾರತದ ತಂಡ ಕೋಲ್ಕತಾದ ತಾಜ್ ಹೊಟೇಲ್ ನಲ್ಲಿ ಇಳಿದಿದ್ದರು. ನಾಯಕ ಧೋನಿಯವರೆ ಇದ್ದರು. ಧೋನಿ ಯಾವಾಗ ರೂಮ್ ಚೆಕ್ ಇನ್ ಮಾಡುವ ಸಲುವಾಗಿ ರಿಸೆಪ್ಶನ್ ಗೆ ಹೋದಾಗ ಅಲ್ಲಿರುವ ಹುಡುಗಿಯ ಮುಖವನ್ನು ನೋಡಿದಾಗ ಆ ಮುಖ ಗುರುತಿನ ಮುಖವೆನಿಸಿತು. ಸಾಕ್ಷಿ ಆ ಸಮಯದಲ್ಲಿ ಔರಂಗಾಬಾದ್ ನಲ್ಲಿ ಹೋಟೆಲ್ ಮ್ಯಾನೆಜ್ ಮೆಂಟ್ ಗಾಗಿ ಕಾಲೇಜ್ ಕಲಿಯುತ್ತಿದ್ದಳು. ರಜೆಯಲ್ಲಿ ಇಂಟರ್ನ್ ಶಿಪ್ ಕಲಿಯಲು ಕೋಲ್ಕತಾಗೆ ಬಂದಿದ್ದಳು. ಇಂಟರ್ನ್ ಶಿಪ್ ಪೂರ್ಣಗೊಳ್ಳಲು ಕೆಲವೇ ದಿನಗಳು ಉಳಿದಿದ್ದವು.

ಎಷ್ಟೋ ದಿವಸಗಳ ಮೇಲೆ ಭೆಟ್ಟಿಯಾಗಿತ್ತು, ಆದರೆ ಹೋಗಿ ಮಾತನಾಡಿಸುವ ಧೈರ್ಯ ಧೋನಿ ಹತ್ತಿರವಿರಲಿಲ್ಲ. ಆದ್ದರಿಂದ ಮ್ಯಾನೇಜರ್ ಯುದ್ಧಜಿತ್ ದತ್ತಾ ಅವರ ಕಡೆಯಿಂದ ಸಾಕ್ಷಿಯ ಫೋನ್ ನಂಬರ್ ತೆಗೆದುಕೊಂಡು ಅವಳಿಗೆ SMS ಕಳಿಸಿದರು.

ಮೊದಮೊದಲು ಸಾಕ್ಷಿಗೆ ಯಾರೋ ತನ್ನನ್ನು Prank ಮಾಡುತ್ತಿದ್ದಾರೆ ಎಂದು ಅನಿಸಿದೆ. ನಂತರ ಆಕೆಗೆ ಗೊತ್ತಾಯಿತು, ಕ್ಯಾಪ್ಟನ್ ಕೂಲ್ ಸ್ವತಃ ಆಕೆಗೆ ಮೆಸೇಜ್ ಮಾಡುತ್ತಿದ್ದುದು ಗೊತ್ತಾಯಿತು. ಹೀಗಾಗಿ ಇಬ್ಬರಲ್ಲಿ ಮೈತ್ರಿ ಶುರುವಾಯಿತು. ಕೆಲವು ದಿವಸಗಳ ನಂತರ ಧೋನಿ ಸಾಕ್ಷಿಗೆ ಪ್ರಪೋಜ್ ಮಾಡಿದರು. ಪ್ರತಿಯೊಂದು ಹುಡುಗಿಯ ಹಾಗೆ ಸಾಕ್ಷಿಯೂ ಸಹಿತ ಸ್ವಲ್ಪ ಹಗ್ಗ ಜಗ್ಗಾಟ ಮಾಡಿದಳು. ಧೋನಿಗೆ ಸ್ವಲ್ಪ ಹೆಚ್ಚಿಗೇನೆ ಸತಾಯಿಸಿದಳು.

ಸಾಕ್ಷಿಗೆ ಒಪ್ಪಿಸುವ ಸಲುವಾಗಿ ಧೋನಿ ಕದ್ದು ಮುಚ್ಚಿ ಔರಂಗಾಬಾದಿಗೆ ಹೋಗುತ್ತಿದ್ದರು. ಇವರಿಬ್ಬರಿಗೂ ರಿಕ್ಷಾದಲ್ಲಿಂದ ಬೀವಿ ಕಾ ಮಕಬರಾಗೆ ಒಯ್ದು ಬಿಟ್ಟಿದ್ದು ಎಷ್ಟೋ ಜನರು ಹೇಳುತ್ತಾರೆ. ಆದರೆ ನಿಜವಾಗಿ ಧೋನಿಯ ಲವ್ ಸ್ಟೋರಿಗೆ ತಿರುವು ಸಿಕ್ಕಿದ್ದು ಯಾರಿಂದ ಎಂದು ಸ್ವತಃ ಸಾಕ್ಷಿಯೇ ಟ್ವೀಟ್ ಮಾಡಿ ಅದರ ಹಿಂದಿನ ವ್ಯಕ್ತಿಯ ಹೆಸರು ಹೇಳಿದ್ದಾಳೆ.

ರಾಬಿನ್ ಉತ್ತಪ್ಪ.

ರಾಬಿನ್ ಉತ್ತಪ್ಪ ಇವರೇ ಧೋನಿ ಮತ್ತು ಸಾಕ್ಷಿಯ ಲವ್ ಗುರು ಇದ್ದರು.ಯಾವಾಗ ಸಾಕ್ಷಿ ಮತ್ತು ಧೋನಿ ಕೋಲ್ಕತಾದ ತಾಜ್ ಹೊಟೇಲ್ ನಲ್ಲಿ ಬಹಳ ವರ್ಷಗಳ ನಂತರ ಭೆಟ್ಟಿಯಾಗಿದ್ದರು, ಆ ದಿವಸ ಧೋನಿ ರಾಬಿನ್ ಜೊತೆಯಲ್ಲಿದ್ದರಂತೆ. ಆದರೆ ರಾಬಿನ್ ನಿಜವಾಗಿ ಏನು ಮಾಡಿದರು ಎಂಬ ಸೀಕ್ರೆಟ್ ಧೋನಿ ಇನ್ನೂವರೆಗೂ ಹೊರಗೆ ಬರಲು ಬಿಟ್ಟಿಲ್ಲ.

ಮುಂದೆ ಧೋನಿ ಮತ್ತು ಸಾಕ್ಷಿ ಮದುವೆಯಾದರು. ಅವರಿಗೆ ಜೀವಾ ಹೆಸರಿನ ಪುಟ್ಟ ಮಗುವು ಇದ್ದಾಳೆ. ರಾಬಿನ್ ಉತ್ತಪ್ಪ ಟೀಮ್ ಇಂಡಿಯಾದಿಂದ ಹೊರಬಿದ್ದು ಅನೇಕ ವರ್ಷಗಳೇ ಕಳೆದವು. ಸದ್ಯಕ್ಕೆ ರಾಬಿನ್ ರಿಗೆ ಅನೇಕ ಜನರು ನೆನಪು ಸಹ ಹಾರಿದ್ದಾರೆ. ಆದರೆ ಸಾಕ್ಷಿ ಮಾತ್ರ ರಾಬಿನ್ ರಿಗೆ ಎಂದು ನೆನಪು ಹಾರಿಲ್ಲ. ಇವತ್ತೂ ಸಹ ರಾಬಿನ್ ಅವರು ಧೋನಿ ಕುಟುಂಬದ ಬೆಸ್ಟ್ ಫ್ರೆಂಡ್ ಆಗಿದ್ದಾರೆ.