M S ಧೋನಿ ಬಯೋಗ್ರಫಿ ನಟ ಸುಶಾಂತ್ ಸಿಂಗ್ ರಾಜಪೂತ್(34) ಆತ್ಮ’ಹತ್ಯೆ!
ಇದೀಗ ಬಂದ ಸುದ್ದಿಯ ಪ್ರಕಾರ ಮುಂಬಯಿಯ ಬಾಂದ್ರಾದಲ್ಲಿರುವ ಮನೆಯಲ್ಲಿ ಆತ್ಮ’ಹತ್ಯೆಯನ್ನು ಮಾಡಿಕೊಂಡಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಆತ್ಮ’ಹತ್ಯೆಯ ಕಾರಣ ಇನ್ನು ಸ್ಪಷ್ಟವಾಗಿಲ್ಲ.
ಇವರು ನಟಿಸಿದ M S ಧೋನಿ ಯವರ ಮೇಲೆ ಆಧಾರಿತ ಚಿತ್ರ ತುಂಬಾ ಯಶಸ್ಸು ಕಂಡಿತ್ತು. ಅದರ ಜೊತೆ ಅಮೀರ್ ಖಾನ PK ಚಿತ್ರದಲ್ಲಿಯೂ ಪಾಕಿಸ್ತಾನಿ ನಾಗರಿಕನ ಪಾತ್ರವನ್ನು ಮಾಡಿದ್ದರು. ಅನುಷ್ಕಾ ಶರ್ಮಾ ಅವರ ಲವರ್ ಆಗಿ ಕೆಲಸ ಮಾಡಿದ್ದರು.

ಇದರ ಜೊತೆಗೆ ಅವರು ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯವನ್ನು ಎಲ್ಲರಿಂದಲೂ ಸೈ ಎನಿಸಿಕೊಂಡರು.
M S ಧೋನಿ ಚಿತ್ರ ಅವರಿಗೆ ಅಪಾರ ಯಶಸ್ಸನ್ನು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ಅವರ ಅಭಿನಯವು ಚೆನ್ನಾಗಿ ಹೊರ ಹೊಮ್ಮಿತ್ತು.
ಆದರೆ ಆಕಸ್ಮಿಕವಾಗಿ ಅವರು ಆತ್ಮ’ಹತ್ಯೆಗೆ ಒಳಗಾಗಿ ನಮ್ಮಿಂದ ದೂರ ಹೋದರೆಂಬ ದುಃಖ ಬಾಲಿವುಡ್ ವ್ಯಕ್ತ ಮಾಡುತ್ತಿದೆ.