ಮಾಧುರಿ, ರವೀನಾ, ತಬು, ಜೂಹಿ ಚಾವ್ಲಾರಂಥ ಗ್ಲಾಮರಸ್ ನಟಿಯರು ಮೇಕಪ್ ಇಲ್ಲದೆ ಹೆಂಗ್ ಕಾಣಸ್ತಾರೆ ನೋಡಿ!
ನೀವು ಪರದೆಯ ಮೇಲೆ ನೋಡುತ್ತಿರುವ ಸುಂದರ ನಟಿಯರನ್ನು ಮೇಕಪ್ ಇಲ್ಲದೇ ನೋಡಿದರೆ ಖಂಡಿತ ನಿಮಗೆ ಶಾಕ್ ಆಗುತ್ತದೆ. ಅವರೇನಾ ಇವರು ಎದು ಕನ್ಫೂಸ್ ಆಗುವಷ್ಟು ಬದಲಾವಣೆ ಅವರಲ್ಲ ಇರುತ್ತದೆ. ಅವರ ಮೇಕಪ್ ಅದೆಷ್ಟು ಅದ್ಭುತವಾಗಿರುತ್ತದೆಂದರೆ, ಹೇಗೋ ಇದ್ದವರು ತೆರೆಯ ಮೇಲೆ ಇನ್ ಹೇಗೋ ಕಾಣಿಸುತ್ತಾರೆ.
ಈಗ ಈ ನಟಿಯರನ್ನು ನೋಡಿ, ಮೇಕ್ಅಪ್ ಇಲ್ಲದೆ ಇವರನ್ನು ಗುರುತಿಸುವುದು ಕೂಡ ಕಷ್ಟವಾಗುತ್ತದೆ. ಮೊದಲಿಗೆ ನಿಮ್ಮ ನೆಚ್ಚಿನ ಜೂಹಿ ಚಾವ್ಲಾ ಬಗ್ಗೆ ಮಾತನಾಡೋಣ. ಬಾಲಿವುಡ್ ಅಷ್ಟೇ ಅಲ್ಲದೇ ಕನ್ನಡದಲ್ಲೂ ನಟಿಸಿರುವ ಜೂಹಿ ಒಂದು ಕಾಲದಲ್ಲಿ ಅನೇಕ ಯುವಕರ ಕನಸಿನ ರಾಣಿಯಾಗಿದ್ದವರು.

1984 ರಲ್ಲಿ ‘ಮಿಸ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದ ಜುಹಿ ಚಾವ್ಲಾ 3 ದಶಕಗಳ ಕಾಲ ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆಯ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇಂದು ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಅವರು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜೂಹಿ ಚಾವ್ಲಾ ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ ಇದುವರೆಗೆ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ಜುಹಿಗೆ 51 ವರ್ಷವಯಸ್ಸು. ಈ ನಟಿಯ ಮೇಕಪ್ ಇಲ್ಲದೆ ಸುಂದರವಾದ ಸ್ಮೈಲ್ ಅನ್ನು ನೋಡಿ ನೀವು ಬೆರಗಾಗುತ್ತೀರಿ. ತುಂಬಾ ಜನ ಇದು ಜೂಹಿ ಅಲ್ಲ ಅಂತ ವಾದಿಸತೊಡಗುತ್ತಾರೆ.

ಅದೇ ರೀತಿ ರವೀನಾ ಟಂಡನ್ ಕೂಡ ಮೇಕಪ್ ಇಲ್ಲದೆ ಅವರ ಅಭಿಮಾನಿಗಳೇ ಬೆರಗಾಗುವಂತೆ ಕಾಣುತ್ತಾರೆ. 90 ರ ದಶಕದ ಪ್ರಸಿದ್ಧ ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಅವರ ಸಂಬಂಧ ಭರದಿಂದ ಸಾಗಿತ್ತು. ಸಂದರ್ಶನವೊಂದರಲ್ಲಿ ರವೀನಾ ಅವರು ಒಂದು ಸಮಯದಲ್ಲಿ 3-3 ಹುಡುಗಿಯರ ಜೊತೆ ಅಕ್ಷಯ್ ಡೇಟಿಂಗ್ ಮಾಡಿದ್ದರು ಎಂದು ಉಲ್ಲೇಖಿಸಿದ್ದರು.
ರವೀನಾಳನ್ನು ಮದುವೆಯಾಗುವುದಾಗಿಯೂ ಅಕ್ಷಯ್ ಭರವಸೆ ನೀಡಿದ್ದರು. ಆದರೆ ನಂತರ ಅಕ್ಷಯ್ ನ ಇತರ ಸಂಬಂಧದ ಸುದ್ದಿಯಿಂದ ಅಸಮಾಧಾನಗೊಂಡ ಆಕೆ ಈ ಸಂಬಂಧವನ್ನು ಮುರಿದುಕೊಂಡಿದ್ದಳು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿ ಜನಪ್ರಿಯತೆಯ ತುತ್ತ ತುದಿ ತಲುಪಿದ್ದ ಅಂಥ ರವೀನಾ ಮೇಕ್ ಅಪ್ ಇಲ್ಲದೆ ಹೇಗೆ ಕಾಣಿಸುತ್ತಾರೆ ನೋಡಿ.

ಹಾಗೆಯೇ ಮಾಧುರಿ ದೀಕ್ಷಿತ್ ಅದೆಷ್ಟು ಗಂಡು ಹೈಕಳುಗಳ ನಿದ್ದೆ ಕೆಡಿಸಿದ್ದರು ಎಂಬುದು ನಿಮಗೆ ಗೊತ್ತೇ ಇದೆ. ಚಿತ್ರರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ ಮತ್ತು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ ಬಾಲಿವುಡ್ ನ ಯಶಸ್ವಿ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು ಹಾಗೂ ಪ್ರಮುಖರು.
ಮಾಧುರಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಾಧುರಿ ದೀಕ್ಷಿತ್ ತಮ್ಮ ಮೂರನೆಯ ವಯಸ್ಸಿನಿಂದಲೇ ಕಥಕ್ ಕಲಿಯಲು ಪ್ರಾರಂಭಿಸಿದರು ಮತ್ತು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ಮೊದಲ ಪ್ರದರ್ಶನವನ್ನು ನೀಡಿದರು. ಪ್ರತಿಭೆಯ ಜೊತೆಗೆ ಸೌಂದರ್ಯ ಕೂಡ ಅವರ ಪ್ರಮುಖ ಆಕರ್ಷಣೆಯಾಗಿತ್ತು.

ಮಾಧುರಿ ದೀಕ್ಷಿತ್ ತಮ್ಮ ಹದಿನೇಳನೇ ವಯಸ್ಸಿನಲ್ಲಿ ರಾಜಶ್ರೀ ಅವರ ‘ಅಬೋಧ್’ ಚಿತ್ರದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಆ ಚಿತ್ರ ತೋಪಾಯಿತು, ಮತ್ತು ಅವರು ಮತ್ತೆ ತಮ್ಮ ಅಧ್ಯಯನದತ್ತ ಗಮನ ಹರಿಸಲು ಪ್ರಾರಂಭಿಸಿದರು. ಆದರೆ ನಂತರ ಮಾಧುರಿ ಒಂದಲ್ಲ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಮೇಕ್ ಅಪ್ ಇಲ್ಲದೆ ಮಾಧುರಿಯ ಚಿತ್ರವನ್ನು ಇಲ್ಲಿ ನೋಡಿ.
ಇನ್ನು ತಬು ಕೂಡ ಒಂದು ಕಾಳದಲ್ಲಿ ಬಾಲಿವುಡ್ ನಲ್ಲಿ ಆಳ್ವಿಕೆ ನಡೆಸಿದವರು. ಹಿಂದಿ ಚಲನಚಿತ್ರ ಜಗತ್ತಿನಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಜನರನ್ನು ಬೆರಗುಗೊಳಿಸಿದವರಲ್ಲಿ ನಟಿ ಟಬು ಕೂಡ ಮೊದಲ ಸಾಲಿನಲ್ಲಿ ಬರುತ್ತಾರೆ. ಅವರಿಗೀಗ 50 ವರ್ಷ ತುಂಬಿದೆ. ಮೇಕ್ ಅಪ್ ಇಲ್ಲದೆ ಅವರ ಫೋಟೋ ಇಲ್ಲಿದೆ ನೋಡಿ.
-Team Infotrend