Video; ಮದುವೆ ಮಂಟಪದಲ್ಲಿ ವರ ಪ್ರೀತಿಯಿಂದ ವಧುವಿನ ಕೆನ್ನೆ ಸವರಿದ್ದಕ್ಕೆ ಸಿಕ್ಕ ರಿಟರ್ನ್ ಗಿಫ್ಟ್ ವರ ಬದುಕಿರುವವರೆಗೂ ಮರೆಯಲಾರ!

ಮದುವೆಯ ಸಂದರ್ಭದಲ್ಲಿ ನಡೆದ ಕೆಲವು ವಿಚಿತ್ರ ಘಟನೆಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ. ಮದುವೆಗಳು ಕೆಲವು ಸಲ ಮೆರವಣಿಗೆಯಿಂದ ಸುದ್ದಿ ಆದರೆ ಇನ್ನು ಕೆಲವು ಸಲ ವಧು-ವರರ ಸ್ಪೆಷಲ್ ಎಂಟ್ರಿಯಿಂದ ಸುದ್ದಿಯಾಗುತ್ತವೆ. ಎಷ್ಟೋ ಸಲ ವಧು-ವರರ ಮಧ್ಯದಲ್ಲಿ ಜಗಳ, ಕೋಪ, ಮುನಿಸಿಕೊಳ್ಳುವಂಥ ಘಟನೆಗಳು ಸಹ ನಡೆಯುವುದುಂಟು. ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಮದುವೆಯಲ್ಲಿ ನಡೆದ ತುಂಬಾ ವಿಶೇಷ ದೃಶ್ಯದ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದವರಿಗೆ ನಗು ತಡೆಯಲಾಗುತ್ತಿಲ್ಲ.

ಪ್ರಸ್ತುತ ವಿಡಿಯೋದಲ್ಲಿ ವಧು-ವರರು ಕಲ್ಯಾಣ ಮಂಟಪದಲ್ಲಿ ಕುಳಿತಿದ್ದಾರೆ. ಇದೇ ಸಂದರ್ಭದಲ್ಲಿ ವರ ತನ್ನ ಭಾವಿ ಪತ್ನಿಯೊಂದಿಗೆ ಸ್ವಲ್ಪ ತಮಾಷೆ ಮಾಡಬೇಕೆಂದು ಯೋಚಿಸಿ ಮೆಲ್ಲಗೆ ವಧುವಿನ ಕೆನ್ನೆಯನ್ನು ಸವರುತ್ತಾನೆ. ಆತ ಮಾಡಿದ ಈ ಚೇಷ್ಟೆ, ಯಾಕೋ ವಧುವಿಗೆ ಸರಿ ಎನಿಸುವುದಿಲ್ಲ, ಹೀಗಾಗಿ ಆಕೆ ಒಮ್ಮೆಲೇ ಸಿಟ್ಟಿಗೆ ಬರುತ್ತಾಳೆ.

ವರನ ಜೊತೆಗೆ ವಧುವಿನ ಗುದ್ದಾಟ…

ಮದುವೆ ಮಂಟಪದಲ್ಲಿ ಕುಳಿತು ಮದುವೆಯ ವಿಧಿ ವಿಧಾನಗಳು ಒಂದೊಂದಾಗಿ ನೆರವೇರುತ್ತಿರುವಾಗ ವರ ತನ್ನಭಾವಿ ಪತ್ನಿಯ ಜೊತೆಗೆ ತಮಾಷೆಯ ಮೂಡ್ ನಲ್ಲಿ ಇಳಿಯುತ್ತಾನೆ. ವರ ವಧುವಿನ ಕೆನ್ನೆ ಮುಟ್ಟಲು ಮಧು ಒಮ್ಮೆಲೆ ಆಕ್ಷನ್ ಮೋಡ್ ನಲ್ಲಿ ಬರುತ್ತಾಳೆ. ಹಾಗೂ ನೇರ ವರನ ಮೇಲೆಯೇ ಅಟ್ಯಾಕ್ ಮಾಡುತ್ತಾಳೆ. ನೋಡು ನೋಡುವಷ್ಟರಲ್ಲಿ ವಧು-ವರ ಇಬ್ಬರು ಮೇಲೆ ಕೆಳಗೆ ಆಗಲು ಶುರು ಮಾಡುತ್ತಾರೆ.

ವಿಡಿಯೋ ನೋಡಿ

ಅತಿಥಿಗಳಿಗೂ ನಗು ತಡೆಯಲು ಆಗುವುದಿಲ್ಲ.

ಮದುವೆಗೆ ಆಗಮಿಸಿದ ಅತಿಥಿಗಳ ಮುಂದೆ ವಧು-ವರರ ಈ ದೃಶ್ಯ ನಡೆದಾಗ ಅತಿಥಿಗಳಿಗೂ ಸಹ ಇಲ್ಲಿ ನಗುತಡೆಯಲು ಸಾಧ್ಯವಾಗಿಲ್ಲ. ಮೊದಲಿನ ಕೆಲವು ಕ್ಷಣಗಳು ಒಮ್ಮೆಲೇ ಶಾಕ್ ಆಗುತ್ತಿದ್ದಂತೆ ನಂತರ ಮಾತ್ರ ಈ ದೃಶ್ಯ ನೋಡಿ ನಕ್ಕಿದ್ದೆ ನಕ್ಕಿದ್ದು. ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನ official_viralclips ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.