Video; ಮದುವೇಲಿ ವರನ ಮುಂದೆ ನಾದಿನಿ ಹಿಡಿದಳು ರಸಗುಲ್ಲ; ವರ ಕಣ್ಣು ತಪ್ಪಿಸಿ ತಿನ್ನಲು ಮುಂದಾದಾಗ ನಾದಿನಿಯಾಡಿದ ಗೇಮ್ ನೋಡಿ !
ಮದುವೆಯಲ್ಲಿ ವಧು-ವರರ ಜೊತೆಗೆ ಜಾಸ್ತಿ ಹೈಲೈಟ್ ಆಗುವವರು ಎಂದರೆ ವರನ ನಾದಿನಿಯರು, ಅಲ್ವಾ? ಈ ನಾದಿನಿಯರು ತಮ್ಮ ಮುದ್ದಿನ ಮಾವನಿಗೆ ಗೋಳು ಹೊಯ್ದುಕೊಳ್ಳಲು ಸಖತ್ ಪ್ಲಾನ್ ಮಾಡುತ್ತಾರೆ. ಒಮ್ಮೊಮ್ಮೆ ಈ ಪ್ಲಾನ್ ತಿರುಗುಬಾಣವೂ ಆಗುವುದುಂಟು. ಇರಲಿ ಈ ಮದುವೆಯಲ್ಲಿ ಮಾತ್ರ ನಾದಿನಿ ವರನಿಗೆ ಚೆನ್ನಾಗಿ ಮಂಗ ಮಾಡಿದ್ದಾಳೆ ಎಂದರೆ ತಪ್ಪಲ್ಲ.
ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಮದುವೆಯ ಕಾರ್ಯಕ್ರಮಗಳ ನಡುವೆ ನಾದಿನಿ ತನ್ನ ಮುದ್ದಿನ ಮಾವನಿಗೆ ರಸಗುಲ್ಲ ತಿನ್ನಿಸುವ ಸಲುವಾಗಿ ಕೈಯಲ್ಲಿ ರಸಗುಲ್ಲ ಹಿಡಿದುಕೊಂಡು ನಿಂತಿದ್ದಾಳೆ. ವರ ತದೇಕಚಿತ್ತದಿಂದ ಯಾವಾಗ ಆ ರಸಗುಲ್ಲ ನಾದಿನಿಯ ಕೈಯಿಂದ ಕಸಿದುಕೊಂಡು ಬಾಯಲ್ಲಿ ಹಾಕಿಕೊಳ್ಳಲಿ ಎಂದು ಕಾಯುತ್ತಾ ಕುಳಿತಿದ್ದಾನೆ. ಯೋಗ್ಯ ಸಮಯ ನೋಡಿ ವರನು ಸಹ ನಾದಿನಿಯ ಕೈಯನ್ನು ಹಿಡಿದು ಇನ್ನೇನು ರಸಗುಲ್ಲ ಬಾಯಲ್ಲಿ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ನಾದಿನಿ ತಕ್ಷಣ ವರನ ವರಸೆಯನ್ನು ಅರಿತು ಕ್ಷಣಾರ್ಧದಲ್ಲಿ ರಸಗುಲ್ಲ ವರನಿಗಿಂತ ಮೊದಲು ತಾನೇ ಬಾಯಲ್ಲಿ ಹಾಕಿಕೊಂಡು ವರನಿಗೆ ಸರಿಯಾಗಿ ಮಂಗ ಮಾಡುವ ಗೇಮ್ ಆಡಿ ಬಿಡುತ್ತಾಳೆ.
ನೋಡಿ ನಾದಿನಿಯ ಈ ತುಂಟ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ashiq.billota ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟದಿಂದ ನೋಡುತ್ತಿದ್ದಾರೆ. ಮತ್ತು ಅನೇಕ ರೀತಿಯ ತಮಾಷೆಯ ಕಾಮೆಂಟ್ ಗಳು ಮಾಡುತ್ತಿದ್ದಾರೆ.