ಇದು ಮ್ಯಾಜಿಕ್ ರೈಸ್ : ಈ ಅನ್ನ ಮಾಡಲು ಬಿಸಿ ನೀರು, ಗ್ಯಾಸ್, ಸ್ಟೌ, ಸೌದೆ ಏನೂ ಬೇಡ, ತಣ್ಣೀರಿನಲ್ಲೂ ಕೂಡ ಅನ್ನ ತಯಾರಿಸಬಹುದು…!

ಸಾಮಾನ್ಯವಾಗಿ ನಾವು ನೀವು ಎಲ್ಲರೂ ತಿನ್ನುವ ಅನ್ನದಲ್ಲಿ ಶುಗರ್ ನ ಪ್ರಮಾಣ ಇದ್ದೆ ಇರುತ್ತದೆ, ಇನ್ನೂ ಡಯಾಬಿಟಿಸ್ ರೋಗಿಗಳಿಗೆ ಅನ್ನವನ್ನು ತಿನ್ನುವ ಪ್ರಮಾಣದಲ್ಲಿ ಕಡಿಮೆ ಮಾಡಿ ಎನ್ನುವ ಸಲಹೆಯನ್ನು ವೈದ್ಯರು ನೀಡುವುದನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ಅಂದರೆ ಅನ್ನದಲ್ಲಿ ಶುಗರ್ ನ ಪ್ರಮಾಣ ಇದ್ದೇ ಇದೆ ಎಂದಾಯ್ತು. ಇಮ್ಯಾಜಿನ್ ಮಾಡ್ಕೊಳಿ ಅಕಸ್ಮಾತ್ ನಾವ್ ತಿನ್ನೋ ಅಕ್ಕಿಯಲ್ಲಿ ಶುಗರ್ ಕಂಟೆಂಟ್ ಇಲ್ಲದೆ ಇದ್ರೆ ಹೇಗಿರುತ್ತೆ ಅಂತ.

ಆ ಯೋಚನೆಯನ್ನು ಸಫಲಗೊಳಿಸಿದ್ದಾರೆ ಬಿಹಾರದ ಈ ರೈತ, ಆತ ಬೆಳೆಯುವ ಅಕ್ಕಿಯಲ್ಲಿ ಸಕ್ಕರೆ ಪ್ರಮಾಣ ಇಲ್ಲ, ಈ ಅಕ್ಕಿಯನ್ನು ಡಯಾಬಿಟಿಸ್ ರೋಗಿಗಳಿಗೆ ವರದಾನ ಎನ್ನಬಹುದು. ಆರೋಗ್ಯದಾಯಕ ಕೂಡ ಆಗಿರುವ ಈ ಅಕ್ಕಿಯ ಇನ್ನೂ ಹಲವು ಅಚ್ಚರಿದಾಯಕ ವಿಶೇಷತೆಗಳಿವೆ. ಬನ್ನಿ ಅದರ ಬಗ್ಗೆ ಒಂದು ಸುತ್ತು ನೋಡಿಕೊಂಡು ಬರೋಣ-

ಅದೆಂತ ಅಕ್ಕಿ ಎಂದರೆ, ಅದರಲ್ಲಿ ಶುಗರ್ ಕಂಟೆಂಟ್ ಇರುವುದಿಲ್ಲ, ಅನ್ನ ತಯಾರಿಸಲು ಬಿಸಿ ನೀರೇ ಬೇಕೆಂದು ಇಲ್ಲ! ಹೌದು! ಈ ಅಕ್ಕಿಯ ಅನ್ನ ತಯಾರಿಸಲು ಬಿಸಿ ನೀರು ಬೇಕಾಗಿಲ್ಲ. ಗ್ಯಾಸ್, ಸ್ಟೌ, ಸೌದೆ ಹೀಗೇ ಏನೂ ಬೇಡ! ಹೀಗಾಗಿಯೇ ಈ ಅಕ್ಕಿಯನ್ನು ಮ್ಯಾಜಿಕ್ ರೈಸ್ ಎಂದು ಕರೆಯುತ್ತಿದ್ದಾರೆ! ಎಲ್ಲಿ ಬೇಕೆಂದರಲ್ಲಿ ಒಯ್ದು ಕುಳಿತಲ್ಲೇ ಅನ್ನ ತಯಾರಿಸಿಬಿಡಬಹುದು.

ಬಿಹಾರದ ಬಗಹಾ ಎಂಬ ಪ್ರದೇಶದ ನಿವಾಸಿಯಾದ ವಿಜಯ್ ಗಿರಿ ಎಂಬುವರು ಕೇವಲ ಅಸ್ಸಾಂ ನ ಬ್ರಹ್ಮಪುತ್ರ ನದಿ ದಂಡೆಯ ಮೇಲಿರುವ ಮಂಜುಳ ದ್ವಿಪದಲ್ಲಿ ಮಾತ್ರ ಬೆಳೆಯುತ್ತಿದ್ದ ಈ ಅಕ್ಕಿಯನ್ನು ತಮ್ಮ ಗ್ರಾಮವಾದ, ಬಗಹಾದಲ್ಲಿಯೇ ಇರುವ ಹರಪುರ ಎಂಬಲ್ಲಿ ಬೆಳೆದು ತೋರಿಸಿದ್ದಾರೆ. ಫಸಲು ಅವರು ಅಂದುಕೊಂಡಿದ್ದಕ್ಕಿಂತ ತುಂಬಾ ಚೆನ್ನಾಗಿ ಬಂದಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಕೃಷಿ ಮೇಳದ ವೀಕ್ಷಣೆಗೆ ವಿಜಯ್ ಗುರಿಯವರು ಹೋದಾಗ ಅಲ್ಲಿನ ಮೇಳದಲ್ಲಿ ಪ್ರದರ್ಶನಕ್ಕೆ ಬಂದಿದ್ದ ಈ ಅಕ್ಕಿ ಅವರ ಗಮನ ಸೆಳೆಯಿತು. ಮೊದಲಿಗೆ ಅವರು ಕೇವಲ ಒಂದು ಎಕರೆಯಲ್ಲಿ ಬೆಳೆಯಲು ಶುರು ಮಾಡಿದರು ಆ ಅಕ್ಕಿಗೆ ಇರುವ ಬೇಡಿಕೆ ಹಾಗೂ ಇದಕ್ಕಿರುವ ಬೆಲೆಯನ್ನು ಗಮನಿಸಿ ತಮ್ಮ ಹೆಚ್ಚಿನ ಭಾಗ ಜಮೀನಿನಲ್ಲಿ ಈ ಅಕ್ಕಿಯನ್ನೇ ಬೆಳೆಯಲು ಪ್ರಾರಂಭಿಸಿದ್ದಾರೆ.

ವಿಶೇಷ ಎಂದರೆ ಈ ಬೆಳೆಗೆ ರಾಸಾಯನಿಕಗಳ ಬಳಕೆ ಕೂಡ ಅವಶ್ಯಕತೆ ಇಲ್ಲ. ಈ ಅಕ್ಕಿಯಿಂದ ಅನ್ನವನ್ನು ತಯಾರಿಸಲು ಬಿಸಿ ನೀರು ಅಥವಾ ಗ್ಯಾಸ್ ಸ್ಟೋವ್, ಕಟ್ಟಿಗೆಯ ಅವಶ್ಯಕತೆ ಕೂಡ ಇಲ್ಲ, ಅಕಸ್ಮಾತ್ ಬಿಸಿ ಬಿಸಿ ಅನ್ನ ಬೇಕೆಂದರೆ ಮಾತ್ರ ಇವೆಲ್ಲ ಬೇಕು, ಇಲ್ಲದೆ ಇದ್ದರೆ ಈ ಅನ್ನವನ್ನು ತಣ್ಣೀರಿನಲ್ಲೇ ಮಾಡಬಹುದು. 40 ರಿಂದ 60 ನಿಮಿಷ ನೆನೆ ಇಟ್ಟರೆ ತನ್ನಿಂದ ತಾನೇ ಅನ್ನವಾಗಿರುತ್ತದೆ..!

KhetToohath ನ ವರದಿ ಪ್ರಕಾರ ಈ ಅಕ್ಕಿ ಬೆಳೆಯಲು ಹೆಚ್ಚು ಖರ್ಚು ಬರುವುದಿಲ್ಲ, ಹೀಗಾಗಿ ಇದರ ಬೆಲೆ ಕೂಡ 40 ರಿಂದ 60 ರೂಪಾಯಿ ಒಳಗೆ ಸಿಗುತ್ತದೆ. ಇದನ್ನು ಭೂಮಿಯಲ್ಲಿ ನಾಟಿ ಮಾಡಿದ 5 ರಿಂದ 6 ತಿಂಗಳಿನ ಒಳಗೆ ಫಸಲು ಕೈಗೆ ಬರುತ್ತದೆ. ಯಾವುದೇ ರಾಸಾಯನಿಕ ಸಿಂಪರಣೆ – ಗೊಬ್ಬರಕ್ಕೆ ಸಾವಿರಗಟ್ಟಲೇ ಖರ್ಚು ಮಾಡಬೇಕಾಗಿಲ್ಲ. ಇದರ ಕುರಿತು ಮತ್ತಷ್ಟು ಮಾಹಿತಿ ನೀಡುವ ವಿಡಿಯೊ ಕೆಳಗಿದೆ ನೋಡಿ…

ಈ ಅನ್ನವನ್ನು ಡಯಾಬಿಟಿಸ್ ನಿಂದ ಬಳಲುತ್ತಿರುವವರಿಗೆ ನೀಡಿದರೆ, ಯಾವುದೇ ಸಮಸ್ಯೆ ಬರುವುದಿಲ್ಲ ಏಕೆಂದರೆ ಈ ಅಕ್ಕಿಯಲ್ಲಿ ಶುಗರ್ ಕಂಟೆಂಟ್ ಇರುವುದಿಲ್ಲ. ಈ ಅಕ್ಕಿ ಅರೋಗ್ಯಕ್ಕೂ ಕೂಡ ಒಳ್ಳೆಯದು. ಇದರ ಸಾಧಕ ಬಾಧಕ ಅರಿತು ಕೃಷಿ ವಿಜ್ಞಾನಿಗಳು ದೇಶದ ಇತರೆ ಭಾಗದಲ್ಲೂ ಇದನ್ನು ಬೆಳೆಯುವ ಹಾಗೆ ಮಾಡಬೇಕಷ್ಟೆ.