ಮಹಾರಾಷ್ಟ್ರದ CM ಏಕನಾಥ್ ಶಿಂಧೆ ಟ್ರ್ಯಾಫಿಕ್ ನಲ್ಲಿ ಪಡೆದರು ಸ್ಕೂಟರ್ ನಿಂದ ಲಿಫ್ಟ್! ಸುಂಟರಗಾಳಿಯಂತೆ ವೈರಲ್ ಆಯ್ತು ವಿಡಿಯೋ.

ಮಹಾರಾಷ್ಟ್ರದ ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಅನೇಕ ರೀತಿಯ ನಾಟಕೀಯ ದೃಶ್ಯಗಳು ಮತ್ತು ಬೆಳವಣಿಗೆಗಳು ಕಂಡು ಬಂದವು. ಈ ರಾಜಕೀಯ ನಾಟಕದಲ್ಲಿ ಕೊನೆಗೂ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತು. ಹಾಗೂ ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಯ ಬಂಡಾಯ ಶಾಸಕರು ಕೂಡಿ ಹೊಸ ಸರ್ಕಾರವನ್ನು ರೂಪಿಸಿದರು. ಮಹಾರಾಷ್ಟ್ರದ ಜನತೆಗೆ ಅಷ್ಟೇ ಅಲ್ಲ ಇಡೀ ದೇಶವೆ ಆಶ್ಚರ್ಯವಾಗುವಂತೆ ಸರಳ ಸಜ್ಜನಿಕೆಯ ಹಾಗೂ ಭೂತಕಾಲದಲ್ಲಿ ಆಟೋ ನಡೆಸುತ್ತಿದ್ದ ಏಕನಾಥ್ ಶಿಂದೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಾಮಾನ್ಯ ಜನತೆಯ ಕಳವಳ ಉಳ್ಳ ಸರಳ ಸಜ್ಜನಿಕೆಯ ಮುಖ್ಯಮಂತ್ರಿ ಎಂದೇ ಮಹಾರಾಷ್ಟ್ರದಲ್ಲಿ ಅವರನ್ನು ಕಾಣಲಾಗುತ್ತಿದೆ. ಸದ್ಯ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಏಕನಾಥ ಶಿಂಧೆ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ. ಯಾಕೆ ನೋಡೋಣ ಬನ್ನಿ.

ಪ್ರಸ್ತುತ ವಿಡಿಯೋದಲ್ಲಿ ಏಕನಾಥ ಶಿಂದೆ ಅವರು ಯಾವುದೋ ಒಂದು ಕೆಲಸಕ್ಕಾಗಿ ತುಂಬಾ ಗಡಿಬಿಡಿಯಲ್ಲಿ ಎಲ್ಲಿಗೋ ನಡೆದಿದ್ದಾರೆ. ಆದರೆ ಅವರು ಹೆವಿ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಏಕನಾಥ್ ಶಿಂದೆ ಅವರು ಒಂದು ಸ್ಕೂಟರ್ ಚಾಲಕನಿಂದ ಲಿಫ್ಟ್ ತೆಗೆದುಕೊಂಡಿದ್ದಾರೆ. ಟ್ರಾಫಿಕ್ ನಲ್ಲಿಂದ ಅವರ ವಾಹನ ಪಾರಾಗುವುದು ಅಸಾಧ್ಯವೆನಿಸಿದಾಗ ಹಾಗೂ ಮಹತ್ವದ ಕೆಲಸಕ್ಕೆ ಹೋಗಲು ಲೇಟ್ ಆಗುತ್ತಿರುವ ಕಾರಣದಿಂದಾಗಿ ಏಕನಾಥ್ ಶಿಂದೆ ಅವರು ಸ್ಕೂಟರ್ ಮೇಲೆ ಕುಳಿತು ಮುಂದೆ ಪ್ರಯಾಣ ಬೆಳೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಸಹ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಈ ಸರಳತೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ವಿಡಿಯೋ ನೋಡಿ

ಪ್ರಸ್ತುತ ಈ ವಿಡಿಯೋ ಟೈಮ್ಸ್ ಆಫ್ ಇಂಡಿಯಾ ಚಾನೆಲ್ ನಿಂದ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಸೆಕ್ಷನ್ನಲ್ಲಿ ಏಕನಾಥ್ ಶಿಂದೆ ಅವರನ್ನು ಬಾಯಿ ತುಂಬಾ ಹೊಗಳಿದ್ದಾರೆ. ಒಬ್ಬ ಯೂಸರ್ “ವೆರಿ ಹಂಬಲ್ ಅಂಡ್ ಡೌನ್ ಟು ದ ಅರ್ಥ ಮ್ಯಾನ್” ಎಂದು ಬಣ್ಣಿಸಿದ್ದಾನೆ. ಇನ್ನೊಬ್ಬ “ಇದ್ದರೆ ಇಂಥ ಮುಖ್ಯಮಂತ್ರಿ ಇರಬೇಕು” ಎಂದು ವರ್ಣಿಸಿದ್ದಾನೆ.