Video; ಜಂಗಲ್ ನಲ್ಲಿ ಜೀಬ್ರಾ ಜೊತೆ ಪ್ರಾಂಕ್ ಮಾಡುವಾಗ ಬಂದವು ಎರಡು ಸಿಂಹಗಳು!

ಸದ್ಯ ಮೀಡಿಯಾದಲ್ಲಿ ಪ್ರಾಂಕ್ ವಿಡಿಯೋಗಳು ಸಾಕಷ್ಟು ನೋಡಲು ಸಿಗುತ್ತವೆ. ಈ ವಿಡಿಯೋಗಳನ್ನು ನೋಡಿದ ನಂತರ ನಕ್ಕು ನಕ್ಕು ಸಾಕಾಗುತ್ತದೆ. ಪ್ರಾಂಕ್ ಮಾಡಲು ಹೋಗಿ ಅನೇಕ ಸಲ ಎಡವಟ್ಟುಗಳು ಆಗುವುದು ವಿಡಿಯೋಗಳಲ್ಲಿ ನೋಡಿದ್ದೇವೆ. ಸದ್ಯ ಇದೇ ರೀತಿಯ ಎಡವಟ್ಟಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಝೀಬ್ರಾ ರೀತಿಯ ಡ್ರೆಸ್ ಗಳನ್ನು ತೊಟ್ಟು ಅರಣ್ಯದಲ್ಲಿ ಪ್ರವೇಶ ಮಾಡಿದ್ದಾರೆ. ಇಬ್ಬರೂ ವ್ಯಕ್ತಿಗಳು ಝೀಬ್ರಾದ ಹಾಗೆ ಉಡುಪು ತೊಟ್ಟುಕೊಂಡು ಅವುಗಳ ಮುಂದೆ ಸುತ್ತಾಡುತ್ತಿದ್ದಾರೆ. ಇದನ್ನು ನೋಡಿದ ನಿಜವಾದ ಝೀಬ್ರಾಗಳು ಅಲ್ಲಿ ನಿಲ್ಲದೆ ಅಥವಾ ಇವರ ಹತ್ತಿರ ಬರದೆ ದೂರ ದೂರ ಓಡಾಡುತ್ತಿವೆ. ಅದೇ ಸಂದರ್ಭದಲ್ಲಿ ಬೇರೊಂದು ಘಟನೆ ಫ್ರಾಂಕ್ ಮಾಡುವವರ ಜೊತೆಗೆ ಘಟಿಸುತ್ತದೆ. ಅದೇನೆಂದರೆ, ಕಾಡಿನಲ್ಲಿಯ ಎರಡು ಸಿಂಹಗಳು ಈ ನಕಲಿ ಝೀಬ್ರಾ ನೋಡಿ ನಿಜವಾದ ಝೀಬ್ರಾಗಳೇ ಇರಬೇಕೆಂದು ಭಾವಿಸಿ ಮಟಾಷ್ ಮಾಡುವ ಪ್ಲಾನ್ ಮಾಡಿಕೊಂಡು ಇತ್ತ ಕಡೆಗೆ ಬರುತ್ತವೆ. ಆಗ ಪ್ರಾಂಕ್ ಮಾಡುವವರು ಬೆಚ್ಚಿಬಿದ್ದಿದ್ದಾರೆ. ಅಷ್ಟರಲ್ಲಿ ಸಿಂಹಗಳು ಇವರ ಮೇಲೆ ಅಟ್ಯಾಕ್ ಮಾಡಿ ಇವರು ತೊಟ್ಟುಕೊಂಡಂತಹ ಝೀಬ್ರಾದ ಪಾರ್ಟ್ಸ್ ಗಳನ್ನು ಒಂದೊಂದಾಗಿ ಕಾಡಿನಲ್ಲಿ ತುಂಬಾ ಖುಷಿಯಿಂದ ತೆಗೆದುಕೊಂಡು ಹೋಗುವದನ್ನು ನೋಡಬಹುದು. ಈ ದೃಶ್ಯ ನೋಡಿದಾಗ ನಗು ತಡೆದುಕೊಳ್ಳುವುದು ಅಸಾಧ್ಯ.

ವೀಡಿಯೋ ನೋಡಿ

 

View this post on Instagram

 

A post shared by Ankita R. (@ankita_18110)

ಪ್ರಸ್ತುತ ವಿಡಿಯೋ ankita_18110 ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಸಾವಿರಾರು ಜನರು ನೋಡಿ ಆನಂದಿಸಿದ್ದಾರೆ ಮತ್ತು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.