VIDEO : ಪಾನಿ ಪೂರಿ ಸವಿದು ನಾಲಿಗೆ ಚಪ್ಪರಿಸಿದ ಹಸು – ಕರು! ವಿಡಿಯೋ ವೈರಲ್
ಸದ್ಯದ ಜಗತ್ತು ಎಷ್ಟೊಂದು ವೇಗವಾಗಿದೆ ಎಂದರೆ, ಜನರು ದುಡಿದು ದುಡ್ಡು ಮಾಡುವುದೇ ಹೊಟ್ಟೆಗಾಗಿ ಅಂಥದ್ರಲ್ಲಿ ಹೊಟ್ಟೆಗೆ ತಿನ್ನೋಕು ಕೂಡ ಜಾಸ್ತಿ ಟೈಮ್ ಸ್ಪೆಂಡ್ ಮಾಡದಂತ ಪರಿಸ್ಥಿತಿ ಇರುವುದು ನಿಮಗೆಲ್ಲ ತಿಳಿದೇ ಇದೆ. ಹೀಗಾಗಿಯೇ ಅತೀ ಹೆಚ್ಚು ಜನರು ಫಾಸ್ಟ್ ಫುಡ್ ಗೆ ಮೊರೆ ಹೋಗುತ್ತಾರೆ ಅದರಲ್ಲೂ ಸಂಜೆ ಹೊತ್ತಿಗಂತೂ ಪಾನಿ ಪೂರಿ, ಗೋಲ್ಗಪ್ಪಾ, ಸೇವ್ ಪೂರಿ, ಗೋಬಿ ಮಂಚೂರಿಯಂತಹ ಫುಡ್ಸ್ ಸಾಕಷ್ಟು ಪ್ರಚಲಿತದಲ್ಲಿವೆ.
ಇವುಗಳನ್ನು ಫಾಸ್ಟ್ ಫುಡ್ ಎನ್ನುವುದಕ್ಕಿಂತಲೂ ನಾಲಿಗೆ ರುಚಿಗೆ ಹತ್ತಿಸುವ ಪದಾರ್ಥಗಳೆನ್ನಬಹುದು. ಇಂತಹ ಆಹಾರ ಪದಾರ್ಥಗಳನ್ನು ತಿನ್ನಲು ಯುವ ಜನತೆ ಅದರಲ್ಲೂ ಹುಡುಗಿಯರು ಮುಗಿಬಿಳುವುದನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ಆದರೆ ಈ ಆಹಾರ ಪದಾರ್ಥಗಳನ್ನು ಹಸಿರು ಹುಲ್ಲು, ಮೇವು ತಿಂದು ಬದುಕುವ ಗೋ ಮಾತೆಗೂ ಕೂಡ ಇಷ್ಟ ಎಂದು ತೋರಿಸುವಂತಿದೆ ಈ ವಿಡಿಯೋ.
ಲಖನೌ ನಗರದ ಒಂದು ಬೀದಿಯಲ್ಲಿ. ಪಾನಿ ಪೂರಿ ಮಾರುವ ತಳ್ಳುಗಾಡಿಯವನು ನಿಂತಿರುತ್ತಾನೆ, ಅವನ ಬಳಿಯಲ್ಲಿ ಒಬ್ಬ ಗ್ರಾಹಕ ಕೂಡ ನಿಂತಿರುತ್ತಾನೆ, ಪಾನಿ ಪೂರಿಯ ಪ್ಲೇಟನ್ನು ಆ ವ್ಯಕ್ತಿಯ ಕೈಯಲ್ಲಿ ಇಟ್ಟು ಅದರಲ್ಲಿ ಎಲ್ಲಾ ಮಸಾಲೆಸಹಿತ ಪಾನಿ ಪೂರಿಗಳನ್ನು ಇಟ್ಟಾಗ ಆ ವ್ಯಕ್ತಿ ತನಗೆ ನೀಡಿದ ಪಾನಿ ಪೂರಿಯನ್ನು ಅಲ್ಲೇ ನಿಂತಿರುವ ಒಂದು ಹಸುವಿಗೆ ನೀಡಿದರೆ ಅದು ಗಬಕ್ಕನೆ ತಿಂದು ಬಿಟ್ಟಿತು..!
ಹೀಗೆ ಮತ್ತೊಂದು ಪಾನಿ ಪೂರಿಯನ್ನು ಆ ವ್ಯಕ್ತಿ ಅದರ ಜೊತೆಯಲ್ಲೇ ನಿಂತಿದ್ದ ಅದರದೇ ಕರುವಿಗೆ ತಿನಿಸಿದಾಗ ಅದು ಕೂಡ ತಿನ್ನುತ್ತದೆ. ಹೀಗೆ ತಾನು ತಿನ್ನಲು ಪಡೆದ ಪಾನಿ ಪೂರಿಗಳೆಲ್ಲವನ್ನು ಆತ ಅವುಗಳಿಗೆ ತಿನ್ನಿಸಿ ಅದರಲ್ಲೇ ಆನಂದ ಪಡುತ್ತಿದ್ದಾನೆ. ಇದೆಲ್ಲವನ್ನು ನೋಡಿದರೆ ಇಂತಹ ಶಹರಗಳಲ್ಲೂ ಇನ್ನೂ ಇಂತಹ ವ್ಯಕ್ತಿಗಳು ಇರುವರಾ ಎಂದೆನಿಸುವುದು ಉಂಟು.
ಏಕೆಂದರೆ ಹಸು ಅಥವಾ ಇನ್ನಿತರೇ ಪ್ರಾಣಿಗಳು ಸಮೀಪ ಸುಳಿದರೂ ಕೂಡ ಏನೋ ಆಗಿಯೇ ಬಿಟ್ಟಿತು ಎಂಬಂತೆ ಓಡುವವರು ಅಥವಾ ಕೈಗೆ ಸಿಕ್ಕ ವಸ್ತುಗಳಿಂದ ಹೊಡೆಯುವವರು ಕೂಡ ಇದ್ದಾರೆ. ಇದೆಲ್ಲದರ ಮಧ್ಯ ಆ ಹಸು ಮತ್ತದರ ಕರುವಿಗೆ ಪಾನಿ ಪೂರಿಯ ರುಚಿ ಈ ಮೊದಲು ಹಚ್ಚಿದವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಒಂದೊಂದು ಪಾನಿ ಪೂರಿ ತಿಂದಾಗಲೂ ಆ ಹಸು ಮತ್ತು ಕರು ಬಾಯಿ ಚಪ್ಪರಿಸಿಕೊಂಡು ತಿಂದು ಮತ್ತೆ ಮತ್ತೆ ಕತ್ತು ಮುಂದೆ ಮಾಡಿ ಕೇಳುತ್ತಿವೆ. ಕಿಶೋರ್ ಕುಮಾರ್ ಅವರ ಹಿನ್ನೆಲೆ ಹಾಡಿನೊಂದಿಗೆ ವೈರಲ್ ಆಗುತ್ತಿರುವ ಈ ವಿಡಿಯೋ ನಿಮಗಾಗಿ ಮೇಲಿದೆ ನೋಡಿ…
-ಮಂಜುನಾಥ್