ಇಬ್ಬರು ಹುಡುಗಿಯರನ್ನು ಮದುವೆಯಾಗಿದ್ದ ಉಮಾಪತಿ ಜೈಲಿಗೆ! ಎರಡು ಮದುವೆ ಆಗಿದ್ದಕ್ಕಲ್ಲ, ಕಾರಣ ಬೇರೆ ಇದೆ

ನಿನ್ನೆ ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಇವರದೇ ಹಾವಳಿ. ಇವರ ಮದುವೆಯ ಫೋಟೊ ಹಾಗೂ ಇವರ ಲಗ್ಮಪತ್ರದ ಫೋಟೊ ಎಲ್ಲ ಕಡೆ ವೈರಲ್ ಆಗಿತ್ತು. ಎಷ್ಟೊ ಟ್ರೋಲ್ ಪೇಜ್ ಗಳು ಇವರ ಫೋಟೊ ಸ್ಟಿಲ್ ಮಾಡಿ ಹಾಕಿ ತಮಾಷೆ ಮಾಡಿದರು. ನಂತರ ಅಸಲಿ ವಿಷಯ ಗೊತ್ತಾಗಿ ಮತ್ತೊಮ್ಮೆ ವೈರಲ್ ಆದರು. ಈಗ ಮದುವೆ ಗಂಡು ಜೈಲಿಗೆ ಹೋಗುವ ಮೂಲಕ ಮಗದೊಮ್ಮೆ ಸುದ್ದಿಯಲ್ಲಿದ್ದಾನೆ.

ವಾಸ್ತವದಲ್ಲಿ, ಉಮಾಪತಿ ಮದುವೆಯಾದ ಹುಡುಗಿಯರಲ್ಲಿ ಒಬ್ಬಳಿಗೆ ಬಾಯಿ ಇರಲಿಲ್ಲ. ಅಕ್ಕ ತಂಗಿಯರಲ್ಲಿ ಒಬ್ಬಳು ಮೂಕಿಯಾಗಿದ್ದು, ಇನ್ನೊಬ್ಬಳೇ ಆಕೆಗೆ ಬಾಯಿಯಾಗಿದ್ದಳು. ಹೀಗಿರುವಾಗ ಒಬ್ಬಳನ್ನೇ ಮದುವೆ ಮಾಡಿ ಕಳಿಸುವುದು ಅವರ ತಂದೆಗೆ ಇಷ್ಟವಿರಲಿಲ್ಲ. ಇದರಿಂದ ಇಬ್ಬರನ್ನೂ ಒಬ್ಬರಿಗೇ ಕೊಡುವ ನಿರ್ಧಾರ ಮಾಡಿದ್ದರು. ಅದರಂತೆ ಉಮಾಪತಿಗೂ ಶರತ್ತು ಹಾಕಿದಾಗ ಅವರು ಇಬ್ಬರನ್ನು ಮದುವೆಯಾಗಲು ಒಪ್ಪಿದ್ದಾರೆ.

ನಂತರ ಲಗ್ನಪತ್ರ ಪ್ರಿಂಟ್ ಹೊಡೆಸಿ ಶಾಸ್ತ್ರೋಕ್ತವಾಗಿ ಇಬ್ಬರನ್ನೂ ಧಾರೆ ಎರೆದು ಕೊಟ್ಟರು. ಆದರೆ ಅವರ ಲಗ್ನಪತ್ರ ಹಾಗೂ ಮದುವೆ ಫೋಟೊ ಯಡವಟ್ಟು ಮಾಡಿತು. ಇವೆರಡೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಸಹಜವಾಗಿ ಪೊಲೀಸರ ಹಾಗೂ ಜಿಲ್ಲಾಢಳಿತದ ಗಮನ ಸೆಳೆಯಿತು. ಸುದ್ದಿ ತಿಳಿದ ಕೋಲಾರ ಜಿಲ್ಲಾಧಿಕಾರಿ ಆರ್ ಸೆಲ್ವಮಣಿಯವರು ಅದೇನು ವಿಷಯ ನೋಡುವಂತೆ ಹೇಳಿದ್ದಾರೆ.

ಸಂಪೂರ್ಣ ಒಪ್ಪಿಗೆಯ ಮೇರೆಗೆ ಇಬ್ಬರೂ ಒಬ್ಬನನ್ನು ಮದುವೆಯಾಗಿದ್ದು ಕಾನೂನಿನ ಪ್ರಕಾರ ತಪ್ಪಾಗಿರಲಿಲ್ಲ, ಅಲ್ಲಿ ಯಾರಿಂದ ದೂರು ಕೂಡ ಬಂದಿರಲಿಲ್ಲ. ಆದರೂ ಪೊಲೀಸರು ಆತನನ್ನು ಬಂಧಿಸಿದರು, ಕಾರಣ ಇಬ್ಬರು ಹುಡುಗಿಯರಲ್ಲಿ ಒಬ್ಬಳು ಇನ್ನೂ ಅಪ್ರಾಪ್ತಳು! ಇದು ಗೊತ್ತಿದ್ದರೂ ಮನೆಯವರು ಮದುವೆ ಮಾಡಿದ್ದಾರೆ. ಇದು ಖಂಡಿತ ಅಪರಾಧ‌. ಆದ್ದರಿಂದ ಪೊಲೀಸರು ಒಟ್ಟು ಏಳು ಜನರ ವಿರುದ್ಧ ಕೇಸ್ ದಾಖಲಿಸಿದ್ದು, ಉಮಾಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
-Team Infotrend