ಮಾನವೀಯತೆ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳಲ್ಲಿದೆ ಎಂದು ಸಾಬೀತು ಮಾಡಿದ ಚಿರತೆ; ಜಿಂಕೆ ಮರಿಗೆ ತಾನೇ ತಾಯಿಯಾಯ್ತು! ನೋಡಿ ಈ Viral Video
ಕೊ ಲ್ಲ ಲು ಬಂದವನೇ ಕಾಯುವಂತಾದರೆ? ಎನ್ನುವುದು ಬಹುಶಃ ಕಥೆಗಳಲ್ಲಿ, ಸಿನಿಮಾಗಳಲ್ಲಿ ಅಥವಾ ಕಲ್ಪನೆಯಲ್ಲಿ ಸಾಧ್ಯ ಎನಿಸಬಹುದು. ಇಲ್ಲವೇ ಎಲ್ಲೋ ನೂರಕ್ಕೋ , ಸಾವಿರಕ್ಕೋ ಒಂದು ಪ್ರ ಕ ರಣದಲ್ಲಿ ಇಂತಹ ಘಟನೆಗಳು ನಡೆದರೂ ನಡೆದಿರಬಹುದು ಎನ್ನಬಹುದು. ಆದರೆ ಎಲ್ಲಾ ಸಂದರ್ಭದಲ್ಲಿ ಕೂಡಾ ಇಂತಹವುಗಳು ನಡೆಯುವುದು ಅಪರೂಪ. ನಡೆದರೆ ಮಾತ್ರ ಅದು ಯಾವುದೇ ಅದ್ಭುತ ಅಥವಾ ವಿಸ್ಮಯಕ್ಕಿಂತ ಕಡಿಮೆ ಇಲ್ಲ ಅಂತಾನೇ ನಾವು ಹೇಳಬಹುದು. ಪ್ರಾಣಿಗಳಲ್ಲಿ ಕೂಡಾ ಇಂತಹುದೊಂದು ಮಾನವೀಯತೆ ಅಥವಾ ಮಾತೃ ಹೃದಯ ಇದೆ ಎಂದಾಗ ಅದು ಸಹಜವಾಗಿಯೇ ಎಲ್ಲರ ಗಮನವನ್ನು ಕೂಡಾ ಸೆಳೆದು ಅದರು ಬಗ್ಗೆ ತಿಳಿಯೋ ಕುತೂಹಲವನ್ನು ಮೂಡಿಸುತ್ತದೆ.
ಸೋಶಿಯಲ್ ಮೀಡಿಯಾ ದಲ್ಲಿ ಹೀಗೆ ಒಂದು ರೋಚಕ ಎನಿಸೋ ವೀಡಿಯೋ ವೈರಲ್ ಆಗ್ತಾ ಸಾಗಿದೆ. ಇದನ್ನು ನೋಡಿದವರಿಗೆ ಕೂಡಾ ಒಂದು ಕ್ಷಣ ಆಶ್ಚರ್ಯ ಆಗೋದ್ರಲ್ಲಿ ಅನುಮಾನಾನೇ ಇಲ್ಲ ಅನ್ನೋ ಹಾಗೆ ಇದೆ ವೀಡಿಯೋ. ಅದಕ್ಕೆ ಕಾರಣ ಆ ವೀಡಿಯೋದಲ್ಲಿ ಸೆರೆಯಾಗಿರುವ ದೃಶ್ಯಗಳು. ಬೇಟೆಯನ್ನು ಅರಸಿ ಬಂದ ಚಿರತೆಯೊಂದು ಬೇಟೆಯ ಬದಲಾಗಿ ತಾನೇ ಒಂದು ಮರಿಯ ರಕ್ಷಕನಾಗಿ, ಅದಕ್ಕೆ ತಾಯಾಗಿ ಸಾಕಿ ಸಲಹಿರುವ ಘಟನೆಯ ವೀಡಿಯೋ ಇದಾಗಿದ್ದು ನೋಡಿದಾಗ ಒಂದು ಕ್ಷಣ ಕ್ರೂ ರ ಪ್ರಾಣಿಯಾದ ಚಿರತೆಯಲ್ಲೂ ಕೂಡಾ ಇಂತಹುದೊಂದು ಅಂತಃಕರಣ ಮಿಡಿಯುವ ಹೃದಯ ಇದೆಯೇ ಎನಿಸುತ್ತದೆ.
ವೀಡಿಯೋ ಒಂದು ಚಿರತೆಯನ್ನು ಬಹಳ ದಿನಗಳವರೆಗೆ ಗಮನಿಸಿ ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ಜಿಂಕೆಯೊಂದು ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮರಿಯೊಂದಕ್ಕೆ ಜನ್ಮ ನೀಡಿದ್ದು, ಅದೇ ಸಮಯದಲ್ಲಿ ಚಿರತೆ ಬೇಟೆಯನ್ನು ಅರಸಿ ಅದರ ಬಳಿ ಬಂದಿದೆ. ಆಗ ಜಿಂಕೆ ಭಯದಿಂದ ತನ್ನ ನವಜಾತ ಶಿಶುವನ್ನು ಅಲ್ಲೇ ಬಿಟ್ಟು ಪ್ರಾಣ ಭ ಯದಿಂದ ಓಡಿ ಹೋಗಿದೆ. ಆಗ ತಾನೇ ಜನ್ಮ ಪಡೆದ ಆ ಎಳೆಯ ಜಿಂಕೆ ಮರಿಯನ್ನು ನೋಡಿದ ಚಿರತೆ ಕೂಡಾ ಒಂದು ಕ್ಷಣ ಕಂಗಲಾಗಿದೆ. ಆ ಮರಿಯನ್ನು ಅಲ್ಲೇ ಬಿಟ್ಟು ಹೋಗಲು ಚಿರತೆಗೆ ಮನಸ್ಸು ಬಂದಿಲ್ಲ. ಅದು ಆ ಜಿಂಕೆ ಮರಿಯನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಅಲ್ಲಿಂದ ಹೊರಟಿದೆ.
ನಂತರ ಅದೇ ವೀಡಿಯೋದಲ್ಲಿ ಕೆಲವು ಸಮಯದ ನಂತರ ಜಿಂಕೆಯ ಮರಿಯೊಂದು ಚಿರತೆಯೊಂದಿಗೆ ಬಹಳ ಆಪ್ಯಾಯತೆಯಿಂದ, ಯಾವುದೇ ಭ ಯವೂ ಇಲ್ಲದೇ ತನ್ನ ತಾಯಿಯ ಬಳಿ ಆಡಿದಂತೆ ಆಟ ಆಡುವುದನ್ನು ಕೂಡಾ ತೋರಿಸಲಾಗಿದೆ. ವೀಡಿಯೋ ಪ್ರಕಾರ ಅಂದು ಚಿರತೆ ಎತ್ತಿಕೊಂಡು ಬಂದ ಅದೇ ನವಜಾತ ಜಿಂಕೆ ಮರಿಯನ್ನು ತಾನೇ ಸಾಕಿ ಸಲಹಿ ಆರೈಕೆ ಮಾಡಿ ಬೆಳೆಸುತ್ತಿದೆ ಎನ್ನುವಂತೆ ಬಿಂಬಿತವಾಗಿದೆ. ಈ ವೀಡಿಯೋ ನಿಜಕ್ಕೂ ಬಹಳ ಅದ್ಭುತ ಹಾಗೂ ಒಂದು ಅಪರೂಪದ ಬಾಂಧವ್ಯವನ್ನು ಜನರ ಮುಂದೆ ಇಟ್ಟಿರುವುದು ಮಾತ್ರ ವಾಸ್ತವ.
ವಿಡಿಯೋ ನೋಡಿ
This is one of the most touching wild life videos I have ever seen! Part 1 pic.twitter.com/iW1e9v2TMK
— Alok Bhatt (@alok_bhatt) September 29, 2020
ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ಶೇರ್ ಮಾಡಿರುವ ಈ ವೀಡಿಯೋ ಕ್ಕೆ ಈಗಾಗಲೇ 24 ಸಾವಿರಕ್ಕಿಂತ ಅಧಿಕ ವೀಕ್ಷಣೆ ದೊರೆತಿದ್ದು, ಸಾವಿರಾರು ಜನರು ಇದನ್ನು ಮೆಚ್ಚಿದ್ದಾರೆ. ಕೆಲವರು ಇದು ಎರಡು ವಿಭಿನ್ನ ವೀಡಿಯೋಗಳು ಎಂದಿದ್ದಾರೆ. ಒಬ್ಬರು ಬಹುಶಃ ಚಿರತೆ ತಾಯಿ ಹಾಗೂ ಮರಿ ಎರಡನ್ನೂ ಬೇಟೆ ಯಾಡಲು ಮರಿಯನ್ನು ಎತ್ತಿ ಕೊಂಡಿದೆ. ಆಗಲಾದರೂ ತಾಯಿ ಜಿಂಕೆ ಬರಬಹುದು ಎಂದು, ಅದು ಬರಲಿಲ್ಲವಾದ್ದರಿಂದ ಮರಿಯನ್ನು ತಾನೇ ಸಾಕಿದೆ ಎಂದಿದ್ದಾರೆ. ಮತ್ತೊಬ್ಬರು ಮನುಷ್ಯರು ಸಾಕಿ ಬೆಳೆಸಿದ ಪ್ರಾಣಿಗಳನ್ನು ಕ ತ್ತ ರಿಸುತ್ತಾರೆ, ಆದರೆ ಈ ಚಿರತೆ ಅಂತಹವರಿಗಿಂತ ಉತ್ತಮ ಎಂದಿದ್ದಾರೆ.