ಮಂಗಕ್ಕೆ ಬಾಳೆಹಣ್ಣು ನೀಡಲು ಮುಂದಾದ ಯುವಕ; ಆತ ಮಾಡಿದ ಒಂದೇ ಒಂದು ತಪ್ಪಿಗೆ ಮಂಗ ಕಿರಿಕ್! ಮಾಡಿದ ಸ್ಟೈಲ್ ನೋಡಿ.
ಮಂಗವಿದ್ದಲ್ಲಿ ಮಂಗಾಟ ಇದ್ದದ್ದೆ, ಅಲ್ವಾ? ಆದರೆ ಇಲ್ಲಿ ಸ್ವಲ್ಪ ಮ್ಯಾಟರ್ ಫುಲ್ ಸೀರಿಯಸ್ ಆಗಿದೆ. ಮಂಗನ ಮಂಗಾಟದ ವಿಡಿಯೋಗಳು ನೆಟ್ಟಿಗರಿಗೆ ಎಲ್ಲಕ್ಕೂ ಹೆಚ್ಚು ಇಷ್ಟವಾಗುತ್ತವೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲಿ ವೈರಲ್ ಆಗುತ್ತವೆ.
ಕೆಲವೊಂದು ಮಂಗಗಳು ತುಂಬಾ ವಿಚಿತ್ರವಾಗಿ ವರ್ತಿಸುತ್ತವೆ. ಈ ವರ್ತನೆ ಮನುಷ್ಯನಿಗೆ ತುಂಬಾ ಯೂನಿಕ್ ಅನಿಸುತ್ತದೆ. ಇದಕ್ಕೂ ಮೊದಲು ಮಂಗಗಳ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದ್ದವು. ಅವುಗಳಲ್ಲಿ ಒಂದು ಮಂಗ ಬಟ್ಟೆ ತೊಳೆಯುತ್ತಿದ್ದರೆ ಇನ್ನೊಂದು ಮಂಗ ಚಾಕು ಹಿಡಿದು ತಿರುಗಾಡುತ್ತಿತ್ತು.
ಸದ್ಯ ಇಲ್ಲಿ ನೋಡಲಿರುವ ಮಂಗನ ವಿಶೇಷ ದೃಶ್ಯವೂ ನಿಮ್ಮ ಮನಸ್ಸು ಸೆಳೆಯಬಲ್ಲದು. ವಿಡಿಯೋದಲ್ಲಿ ಕಂಡು ಬರುವಂತೆ ವ್ಯಕ್ತಿಯೊಬ್ಬ ಮಂಗಕ್ಕೆ ಬಾಳೆಹಣ್ಣಿನ ರೂಪದಲ್ಲಿ ಆಹಾರವನ್ನು ಕೊಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತ ಒಂದೇ ಒಂದು ತಪ್ಪು ಮಾಡುತ್ತಾನೆ. ಆ ತಪ್ಪಿಗೆ ಮಂಗನ ತಲೆ ತಿರುಗಿದೆ.
ಅಷ್ಟಕ್ಕೂ ಏನಾಗಿದೆ ಬನ್ನಿ ನೋಡೋಣ.
ಯುವಕ ಬಾಳೆಹಣ್ಣು ಕೊಡುವಾಗ ಮಂಗಕ್ಕೆ ಒಮ್ಮೆಲೇ ಕೊಟ್ಟಿಲ್ಲ. ಆತ ಒಂದೊಂದಾಗಿ ಬಾಳೆಹಣ್ಣುಗಳನ್ನು ಮಂಗನಿಗೆ ನೀಡಿದ್ದಾನೆ. ಮೊದಲು ಮಂಗ ಒಂದೊಂದೇ ಬಾಳೆಹಣ್ಣುಗಳನ್ನು ತೆಗೆದುಕೊಳ್ಳುತ್ತದೆ ಯುವಕ ಹೀಗೆ ಒಂದೊಂದಾಗಿ ಬಾಳೆಹಣ್ಣು ನೀಡುತ್ತಾ ಹೋದಂತೆ ಒಂದೆರಡು ಬಾಳೆಹಣ್ಣುಗಳನ್ನು ತೆಗೆದುಕೊಂಡ ನಂತರ ಮಂಗನ ಫ್ಯೂಸ್ ಹಾರಿದೆ. ಅದಕ್ಕೆ ಯಾಕೋ ಒಂದೊಂದು ಬಾಳೆಹಣ್ಣುಗಳನ್ನು ಕೊಡುವುದು ಇಷ್ಟವಾಗಿಲ್ಲ. ಆಮೇಲೆ ಅದು ಯುವಕನ ಕೈಯಲ್ಲಿಯ ಬಾಳೆಹಣ್ಣನ್ನು ಸಿಟ್ಟಿನಿಂದ ತೆಗೆದುಕೊಂಡು ದೂರ ಬಿಸಾಡಿದೆ. “ನೀನು ಬಾಳೆಹಣ್ಣು ಕೊಡುವುದಿದ್ದರೆ ಒಮ್ಮೆಲೇ ಕೊಡು, ನನ್ನ ಹತ್ತಿರ ಸಮಯವಿಲ್ಲ, ನನಗೇನು ಭಿಕ್ಷುಕ ಅಂತ ತಿಳಿದಿದ್ದೀಯಾ” ಎನ್ನುವ ರೀತಿಯಲ್ಲಿ ಮಂಗ ವರ್ತಿಸಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ “ಮೊಮೊಂಗನ್ ಮಂಕೀಸ್” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಒಂದೂವರೆ ಲಕ್ಷ ಜನರು ಮೆಚ್ಚುಗೆಯನ್ನು ನೀಡಿದ್ದಾರೆ.