Video; ಮ್ಯಾಚ್ ನಡೆದಾಗಲೇ ಮಧ್ಯೆ ಅಭಿಮಾನಿಯೊಬ್ಬ ರೋಹಿತ್ ಶರ್ಮಾಗೆ ಭೇಟಿಯಾಗಲು ಬಂದು ಆತ ಮಾಡಿದ್ದೇನು? ನೋಡಿ.

ಇಂಟರ್ನೆಟ್ ನಲ್ಲಿ ಕ್ರಿಕೆಟ್ ನಲ್ಲಿ ನಡೆದ ಅದ್ಭುತ ಸುಂದರ ತುಣುಕು ವಿಡಿಯೋ ದೃಶ್ಯಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟವಾಗುತ್ತವೆ. ಇಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಲು ಜೋರಾಗಿ ವೈರಲಾಗುತ್ತವೆ. ಸದ್ಯ ಒಂದು ವಿಡಿಯೋ ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ. ಇದನ್ನು ನೋಡಿದಾಗ ನಿಮಗೂ ಸಹ ನಗು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ಕಿಂಗ್ ಕೊಹ್ಲಿ ಇತ್ತೀಚೆಗೆ ರೋಹಿತ್ ಶರ್ಮಾ ಅವರ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ಬಿಚ್ಚಿಟ್ಟಿದ್ದರು. ಅದರಲ್ಲಿ ಮಹತ್ವದ ವಿಷಯವೇನೆಂದರೆ ರೋಹಿತ್ ಶರ್ಮ ಅವರಿಗೆ ಮರೆವು ಜಾಸ್ತಿಯಂತೆ. ಹೀಗಾಗಿ ಸದಾ ಯಾವಾಗಲೂ ಏನಾದರೂ ಒಂದು ವಸ್ತುವನ್ನು ಕುಳಿತಲ್ಲಿಯೇ ಮರೆತುಬಿಡುತ್ತಾರಂತೆ. ನಂತರ ಅದನ್ನು ಶೋಧಿಸುವ ಗೋಜಿಗೆ ಹೋಗುವುದಿಲ್ಲ, ಮತ್ತೊಂದು ತೆಗೆದುಕೊಂಡರಾಯಿತು ಬಿಡು ಎಂದು ತಳ್ಳಿ ಹಾಕುತ್ತಾರಂತೆ.

ಇಂಥ ರೋಹಿತ್ ಶರ್ಮ ಅವರ ಸೂಪರ್ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಅವರಿಗೂ ಫ್ಯಾನ್ಸ್ ಫಾಲೋವರ್ಸ್ ಗಳ ಸಂಖ್ಯೆ ಸಾಕಷ್ಟು ಇದೆ. ಎಷ್ಟೋ ಫ್ಯಾನ್ಸ್ ಗಳು ತಮ್ಮ ನೆಚ್ಚಿನ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು, ವಿಡಿಯೋ ಮಾಡಿಕೊಳ್ಳಬೇಕು, ಆಟೋಗ್ರಾಫ್ ತೆಗೆದುಕೊಳ್ಳಬೇಕು ಮತ್ತು ಅವರ ಏನಾದರೂ ಒಂದು ವಿಶೇಷ ವಸ್ತುವನ್ನು ಬೇಡಿಕೊಂಡು ತಮ್ಮ ಹತ್ತಿರ ಇಟ್ಟುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಅಷ್ಟೇ ಏಕೆ ಅವರಿಗೆ ಸ್ವಲ್ಪ ಸ್ಪರ್ಶವಾದರೂ ಮಾಡಬೇಕೆಂಬ ಆಸೆ ಮನದಲ್ಲಿ ಇಟ್ಟುಕೊಂಡಿರುತ್ತಾರೆ.

ಇದೇ ರೀತಿ ಒಬ್ಬ ಫ್ಯಾನ್ ಮ್ಯಾಚ್ ನಡೆದ ಸಂದರ್ಭದಲ್ಲಿ ರೋಹಿತ್ ಶರ್ಮ ಅವರಿಗೆ ಭೇಟಿಯಾಗಲು ಮೈದಾನದಲ್ಲಿ ಓಡಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮ ಅವರು ಸಹ ಆತನ ಜೊತೆಗೆ ಚೆನ್ನಾಗಿ ಸ್ಪಂದಿಸಿದ್ದಾರೆ. ಆದರೆ ರೋಹಿತ್ ಶರ್ಮ ಅವರ ಈ ಸ್ಪಂದನೆಗೆ ಅವರ ಫ್ಯಾನ್ ಸ್ವಲ್ಪ ದುರುಪಯೋಗಪಡಿಸಿಕೊಂಡಿದ್ದಾನೆಂದರೆ ತಪ್ಪಲ್ಲ. ಅದೇನೆಂದರೆ ಅಭಿಮಾನಿ ಮೊದಲು ರೋಹಿತ್ ಶರ್ಮ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ನಂತರ ಆತ ಖುಷಿಯಲ್ಲಿ ರೋಹಿತ್ ಶರ್ಮ ಅವರಿಗೆ ಮುತ್ತು ಕೊಡಲು ಮುಂದಾಗಿದ್ದಾನೆ. ಈ ರೀತಿ ಆತ ಎರಡು ಸಲ ಪ್ರಯತ್ನ ಪಡಬೇಕೆ? ಅದಕ್ಕೆ ರೋಹಿತ್ ಶರ್ಮ ಅವರು ಸ್ಪಷ್ಟವಾಗಿ ಅಸಮಾಧಾನ ತೋರಿಸಿದ್ದಾರೆ. ಇದೆಲ್ಲಾ ಆದ ನಂತರವೂ ಅಭಿಮಾನಿ ಮಾತ್ರ ಸ್ವರ್ಗ ಮೂರೇ ಗೇಣು ಎನ್ನುವಂತೆ ಸಂತೋಷದ ಸಾಗರದಲ್ಲಿ ತೇಲಾಡುತ್ತಾ ಸ್ಟೇಡಿಯಂ ಕಡೆಗೆ ಓಡಿ ಹೋಗುತ್ತಿದ್ದಾನೆ.

ನೋಡಿ ಈ ವಿಡಿಯೋ….

ಈ ವಿಡಿಯೋ ನೋಡಿದ ನೆಟ್ಟಿಗರು ರೋಹಿತ್ ಶರ್ಮಾ ಅವರ ಬಗ್ಗೆ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ತಮ್ಮ ಪ್ರತಿಕ್ರಿಯೆಯಲ್ಲಿ ಒಬ್ಬ ಯೂಸರ್ “ಹೇ ಯಾರ್ ಏನು ಮಾಡುತ್ತಿರುವೆ?” ಎಂದಿದ್ದಾನೆ. ಇನ್ನೊಬ್ಬ ಯೂಸರ್ “ಆತ ಎಷ್ಟೊಂದು ಖುಷಿಯಲ್ಲಿ ಮರಳಿ ಹೋಗುತ್ತಿದ್ದಾನೆ” ಎಂದಿದ್ದಾನೆ.