NEET ಪರೀಕ್ಷೆಯಲ್ಲಿ 570 ಗುಣಗಳು ಬಿದ್ದಿವೆ ಅಂತ ತುಂಬಾ ಸಂತಸದಲ್ಲಿದ್ದಳು, ಮರುದಿವಸ ಮತ್ತೆ ರಿಜಲ್ಟ್ ಚೆಕ್ ಮಾಡಿದಾಗ…….

ನಿಮ್ಮ ಜೊತೆಗೂ ಸಹ ಈ ರೀತಿಯಾದ ಘಟನೆ ಎಂದಾದರೂ ಘಟಿಸಿದೆಯೇ? ಮೊದಲು ನಿಮಗೆ ಪರೀಕ್ಷೆಯಲ್ಲಿ ಉತ್ತಮ ಗುಣಗಳು ಸಿಕ್ಕಿದ್ದಕ್ಕಾಗಿ ತುಂಬಾ ಖುಷಿ ಪಟ್ಟು, ನಂತರ ಆ ಪರೀಕ್ಷೆಯಲ್ಲಿ ಕಡಿಮೆ ಬಿದ್ದಿವೆ ಅಂತ ಗೊತ್ತಾದ್ರೆ ನೀವು ದುಃಖ ಪಟ್ಟದ್ದು. ಆದರೆ ಸದ್ಯಕ್ಕೆ ಅಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಚಂದ್ರಪೂರ ನಲ್ಲಿ ವಾಸಿಯಾಗಿದ್ದ ದೇವತಿ ಮೊರೆ ಎಂಬ ವಿದ್ಯಾರ್ಥಿನಿ ಈ ವರ್ಷ NEET ಪರೀಕ್ಷೆ ಕೊಟ್ಟಿದ್ದಳು. ಕಳೆದ 7 ಸೆಪ್ಟೆಂಬರ್ ರಂದು ರಾತ್ರಿ ಈ ಪರೀಕ್ಷೆಯ ರಿಜಲ್ಟ್ ಜಾಹೀರು ಮಾಡಲಾಯಿತು. NTA ಯು NEET ಪರೀಕ್ಷೆಯ ಉತ್ತರ ಪತ್ರಿಕೆ ಮತ್ತು OMR ಶೀಟ್ ನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

ದೇವತಿಯು 7 ಸೆಪ್ಟೆಂಬರ್ ರಾತ್ರಿ ತನ್ನ ಫಲಿತಾಂಶ ಚೆಕ್ ಮಾಡಿ ನೋಡಿದಳು. ದೇವತಿಗೆ NEET ಪರೀಕ್ಷೆಯಲ್ಲಿ 570 ಗುಣಗಳು ದೊರಕಿದ್ದವು. ಫಲಿತಾಂಶ ನೋಡುವ ಸಮಯದಲ್ಲಿ ಆಕೆಗೆ ನೆಟ್ವರ್ಕ್ ಸಮಸ್ಯೆ ಇದ್ದುದರಿಂದ ಆ ರಿಜಲ್ಟ್ ಡೌನ್ಲೋಡ್ ಆಗಲಿಲ್ಲ. ಹೀಗಾಗಿ ಆಕೆ ತನ್ನ ಟ್ಯಾಬ್ ನಲ್ಲಿ ಫಲಿತಾಂಶದ ಸ್ಕ್ರೀನ್ ಶಾಟ್ ತಗೆದುಕೊಂಡು ಇಟ್ಟಳು.

ಸೆಪ್ಟೆಂಬರ್ 8 ರಂದು ಮುಂಜಾನೆ 6 ಗಂಟೆಗೆ ದೇವತಿಯು ಪುನಃ ತನ್ನ ರಿಜಲ್ಟ್ ನ್ನು ವೆಬ್ಸೈಟ್ನಲ್ಲಿ ಚೆಕ್ ಮಾಡಿದಳು. ಆಗಲೂ ಸಹ ಆಕೆಗೆ 570 ಗುಣಗಳು ಬಿದ್ದದ್ದನ್ನು ತೋರಿಸುತ್ತಿತ್ತು ಆದರೆ ಆ ಸಮಯದಲ್ಲಿ ಸಹ ಆಕೆಯ ಫಲಿತಾಂಶ ಡೌನ್ಲೋಡ್ ಆಗುತ್ತಿರಲಿಲ್ಲ. ಅದೇ ದಿನದಂದು ರಾತ್ರಿ 9 ಗಂಟೆಗೆ ದೇವತಿ ಮತ್ತೆ ತನ್ನ ಫಲಿತಾಂಶ ಚೆಕ್ ಮಾಡಿದಳು. ಆ ಸಮಯದಲ್ಲಿ ಸಹ ಅದೇ ತರಹದ ಮಾರ್ಕ್ಸ್ ಗಳು ಕಾಣುತ್ತಿದ್ದವು. ಆಗ ಇವಳು ತನಗೆ ಸಿಕ್ಕ ಗುಣಗಳಿಂದ ತುಂಬಾ ಖುಷಿ ಪಟ್ಟಳು. ಅಲ್ಲದೆ ಆಕೆ ಮನೆಯಲ್ಲಿದ್ದ ಎಲ್ಲರಿಗೂ ಮತ್ತು ತನ್ನ ಸಹಪಾಠಿಗಳಿಗೆ ಸಹ ತಿಳಿಸಿದಳು.

ಆದರೆ ಮಾರನೆಯ ದಿನ ವೆಬ್ಸೈಟ್ನಲ್ಲಿ ಲಾಗಿನ್ ಮಾಡಿ ನೋಡಿದಾಗ ಆಕೆಗೆ ಆಶ್ಚರ್ಯಪಡಿಸುವಂತಹ ವಿಷಯ ತಿಳಿದು ಬಂದಿತು. ನಿಮಗೂ ಸಹ ಇದನ್ನು ಕೇಳಿ ಆಶ್ಚರ್ಯ ವೆನಿಸುತ್ತದೆ. ಕಳೆದ ಎರಡು ದಿವಸಗಳಿಂದ ದೇವತಿಯ ಫಲಿತಾಂಶ 570 ಗುಣಗಳು ತೋರಿಸುತ್ತಿದ್ದವು ಆದರೆ ಇಂದು ನೋಡಿದಾಗ 570 ರ ಬದಲಾಗಿ ಅಲ್ಲಿ ಕೇವಲ 129 ಗುಣಗಳಾಗಿದ್ದವು. ಇದನ್ನು ಕಂಡು ವೆಬ್ಸೈಟ್ ನಲ್ಲಿ ಏನಾದ್ರು ತಾಂತ್ರಿಕ ಸಮಸ್ಯೆ ಇದ್ದಿರಬಹುದು ಹೀಗಾಗಿ ತನ್ನ ಗುಣಗಳು ಕಡಿಮೆ ಕಾಣುತ್ತಿವೆ ಎಂದು ತನ್ನ ಮನದಲ್ಲಿ ಅಂದುಕೊಂಡು ವೆಬ್ಸೈಟ್ ನಲ್ಲಿ ಲಾಗ್ ಔಟ್ ಮಾಡಿ ಮತ್ತೆ ಲಾಗಿನ್ ಮಾಡಿ ನೋಡಿದಳು ಆದರೂ ಸಹ 129 ಗುಣಗಳೆ ಕಾಣಿಸಿದವು. ಇದಕ್ಕಾಗಿ ಆಕೆ ತಕ್ಷಣವೇ NTA ಗೆ ಮೇಲ್ ಮಾಡಿದಳು. ಆದರೆ ಈ ಕುರಿತು NTA ಕಡೆಯಿಂದ ಯಾವುದೇ ಮರುಉತ್ತರ ಬರಲಿಲ್ಲ ವೆಂದು ದೇವತಿ ಹೇಳಿದ್ದಾಳೆ.

“ಮೊಟ್ಟ ಮೊದಲಿಗೆ ವೆಬ್ಸೈಟ್ ನಲ್ಲಿ ನನ್ನ ಮಗಳ ಫಲಿತಾಂಶ ಚೆಕ್ ಮಾಡಿದಾಗ ದೇವತಿಗೆ 570 ಗುಣಗಳು ದೊರಕಿದ್ದವು, ತದನಂತರ ಎರಡನೆಯ ದಿವಸ ಸಹ ಅಷ್ಟೇ ಗುಣಗಳು ಬಿದ್ದಿದ್ದವು ಆದರೆ ಮಾರನೆಯ ದಿವಸ ನೋಡಿದಾಗ ಮೊದಲಿಗಿಂತಲೂ ತುಂಬಾನೇ ಕಡಿಮೆ ಗುಣಗಳು ದೊರೆತ ಹಾಗೆ ತೋರುತ್ತಿತ್ತು. ಇದರಿಂದ ನನ್ನ ಮಗಳು ತುಂಬಾನೇ ಟೆನ್ಶನ್ ನಲ್ಲಿದ್ದಳು. ಎರಡು ದಿವಸಗಳಿಂದ ಆಕೆ ಆಹಾರ ಸಹ ಸೇವನೆ ಮಾಡಿಲ್ಲ. ಈ ಸಮಸ್ಯೆಯ ಸಲುವಾಗಿ ಈಗ ನಾವು ಏನು ಮಾಡಬೇಕು? ಈ ಕುರಿತು ಯಾರಕಡೆಗೆ ನ್ಯಾಯ ಕೇಳಬೇಕು?” ಈ ರೀತಿಯಾದ ಪ್ರಶ್ನೆಗಳು ದೇವತಿಯ ತಾಯಿ ಅರ್ಚನಾ ಮೊರೆ ಯವರು ವ್ಯಕ್ತ ಪಡಿಸಿದ್ದಾರೆ.