ಇವನು 16 ಹೆಂಡತಿಯರ ಒಬ್ಬನೇ ಗಂಡ : ‘ಆ’ ಕೆಲಸಕ್ಕೂ ವೇಳಾಪಟ್ಟಿ ಹಾಕಿಕೊಂಡಿದ್ದಾನೆ!

ಜಗತ್ತಿನಲ್ಲಿ ಇಂತಹ ಅನೇಕ ವಿಚಿತ್ರಗಳು ಇವೆ, ಅವು ಬಹಿರಂಗವಾದಾಗ ಎಲ್ಲರೂ ಆಘಾತಕ್ಕೊಳಗಾಗುತ್ತಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ – ಹಾಗೂ ಕಾನೂನಿನ ಪ್ರಕಾರ ಕೂಡ ಯಾವುದೇ ವ್ಯಕ್ತಿಯು ತಮ್ಮ ಜೀವನದಲ್ಲಿ ಒಂದೇ ಮದುವೆಯಾಗಬಹುದು. ಒಂದನೇ ಹೆಂಡತಿ ತೀರಿಕೊಂಡಿದ್ದರೆ ಅಥವಾ ವಿಚ್ಛೇದನ ಪಡೆದಿದ್ದರೆ ಎರಡನೇ ಮದುವೆಗೆ ಅನುಮತಿ ಇದೆ. ಆದರೆ ಕೆಲವು ದೇಶಗಳಲ್ಲಿ ಅಂತಹ ನಿರ್ಬಂಧಗಳಿಲ್ಲ, ಮಕ್ಕಳನ್ನು ಹುಟ್ಟಿಸುವುದಕ್ಕೂ ಯಾವುದೇ ಸರ್ಕಾರಿ ಕಾನೂನು ಇಲ್ಲ.

ಈ ಮನುಷ್ಯನಿಗೆ 16 ಮದುವೆಗಳಾಗಿವೆ :
ಜಿಂಬಾಬ್ವೆಯ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಇದುವರೆಗೆ 16 ವಿವಾಹಗಳನ್ನು ಆಗಿದ್ದಾನೆ! ಮತ್ತು ಈಗ ಅವನ ಏಕೈಕ ಕೆಲಸವೆಂದರೆ ಮಕ್ಕಳನ್ನು ಹುಟ್ಟಿಸುವುದು. ಇನ್ನೂ ಅಚ್ಚರಿಯೆಂದರೆ, ಇಲ್ಲಿಯವರೆಗೆ ಈ ಮನುಷ್ಯ ಆ ಹೆಂಡತಿಯರಿಂದ ಒಟ್ಟು 151 ಮಕ್ಕಳನ್ನು ಪಡೆದಿದ್ದಾನೆ! ಇಷ್ಟಕ್ಕೇ ಅವನಿಗೆ ಸಮಾದಾನ ಆಗಿಲ್ಲ, ಇನ್ನೂ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಾನೆ.

ಹೆಂಡತಿಯರನ್ನು ಸಂತೋಷವಾಗಿಡುವುದೇ ಫುಲ್ ಟೈಮ್ ಕೆಲಸ :
ಮಾಹಿತಿಯ ಪ್ರಕಾರ, ವಿಚಿತ್ರ ನಂಬಿಕೆಗಳನ್ನು ನಂಬುವ ಈ ಜಿಂಬಾಬ್ವೆಯ ವ್ಯಕ್ತಿ ಮಿಶೆಕ್ ನ್ಯಾಂಡೊರೊ, ತನ್ನ ಪೂರ್ಣ ಸಮಯವನ್ನು ತನ್ನ ಹೆಂಡತಿಯರನ್ನು ಸಂ’ತೋ’ಷದಿಂದ ಇರಿಸಲು ಮತ್ತು ಅವರನ್ನು ತೃ’ಪ್ತಿ’ಪಡಿಸಲು ವ್ಯಯಿಸುತ್ತಾನೆ!

ಆ ಕೆಲಸಕ್ಕೂ ವೇ’ಳಾ’ಪಟ್ಟಿ :
ತನ್ನ ಲೈಂ'”ಗಿ’ಕ ಜೀವನದ ಬಗ್ಗೆಯೂ ಮುಕ್ತವಾಗಿ ಮಾತಾಡಿರುವ ಅವನು, ಪ್ರತಿದಿನ ಒಟ್ಟು ನಾಲ್ಕು ಹೆಂಡತಿಯರಿಗೆ ತೃಪ್ತಿ ಪಡಿಸುತ್ತಾನಂತೆ. ದಿನಕ್ಕೆ ನಾಲ್ಕರಂತೆ ವೇಳಾಪಟ್ಟಿ ಹಾಕಿಕೊಂಡಿದ್ದು, ಆ ನಾಲ್ಕು ಜನರ ಪಾಳಿ ಮತ್ತೆ ನಾಲ್ಕು ದಿನದ ನಂತರ ಬರುವುದು. ಹಾಗೆಯೇ ಹೆಂಡತಿಯರ ವಯಸ್ಸಿಗೆ ಅನುಗುಣವಾಗಿ ಅವನು ಬೆಡ್ ರೂಮ್ ನಲ್ಲಿ ನಡೆದುಕೊಳ್ಳುತ್ತಾನಂತೆ! ಅಂದರೆ ವಯಸ್ಸಾದವರ ಜೊತೆ ಹಾಗೂ ಹ’ರೆಯದ ಹೆಂಡತಿಯರ ಜೊತೆ ಒಂದೇ ಥರ ಬಿಹೇವ್ ಮಾಡುವುದಿಲ್ಲವಂತೆ. ಒಂದು ರೂಮ್ ಮುಗಿದ ಮೇಲೆ ಮತ್ತೊಂದು ರೂಮ್ ಗೆ ಹೋಗುತ್ತಾನಂತೆ!

66 ನೇ ವಯಸ್ಸಿನಲ್ಲಿ 151 ಮಕ್ಕಳು :
ಸ್ಥಳೀಯ ಸುದ್ದಿ ಚಾನೆಲ್ ದಿ ಹೆರಾಲ್ಡ್ ಪ್ರಕಾರ, 66 ವರ್ಷದ ನಂತರವೂ ಅವನು ಯುವತಿಯರನ್ನು ಮದುವೆಯಾಗಲು ಬಯಸುತ್ತಾನೆ. ಯಾಕೆಂದರೆ ಅವನ ಹಳೆಯ ಹೆಂಡತಿಯರು ಇನ್ನು ಮುಂದೆ ಮೊದಲಿನ ವೇಗದಲ್ಲಿ ಮಕ್ಕಳನ್ನು ಹೆರಲು ಸಾಧ್ಯವಾಗುವುದಿಲ್ಲವಂತೆ!

17 ರಂದು ಮತ್ತೊಂದು ಮದುವೆ :
ಮಿಶೆಕ್ ನ್ಯಾಂಡೊರೊ ತನ್ನ ಜೀವನವನ್ನು ಅತ್ಯಂತ ಐಷಾರಾಮಿ ಶೈಲಿಯಲ್ಲಿ ಬದುಕುತ್ತಾನೆ. ಅವನು ತನ್ನ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾನೆ ಮತ್ತು ಅವರ ಹೆಂಡತಿಯರ ಬೇಕು ಬೇಡುಗಳನ್ನು ನೋಡಿಕೊಳ್ಳುತ್ತಾನೆ. ಮಿಶೇಕ್ ಗೆ ಈಗ 151 ಮಕ್ಕಳಿದ್ದರೂ ಅವನಿಗೆ ಸಮಾದಾನವಾಗಿಲ್ಲ. ಈ ತಿಂಗಳ 17 ರಂದು ಮತ್ತೊಂದು ಮದುವೆಯಾಗಲು ತಯಾರಿ ನಡೆಸಿದ್ದಾನೆ!

100 ಹೆಂಡತಿಯರು ಮತ್ತು 1000 ಮಕ್ಕಳ ಕನಸು :
151 ಮಕ್ಕಳ ತಂದೆಯಾದ ಮಿಶೆಕ್ ನ್ಯಾಂಡೋರೊ, ಸಾಧ್ಯವಾದರೆ ನಾನು 100 ಹೆಂಡತಿಯರನ್ನು ಮತ್ತು ಸುಮಾರು 1000 ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಹೇಳುತ್ತಾನೆ. ನಾನು ಮಾಡುತ್ತಿರುವುದು ಬಹುಪತ್ನಿತ್ವ ಯೋಜನೆಯಾಗಿದೆ, ಇದನ್ನು ನಾನು 1983 ರಲ್ಲಿ ಪ್ರಾರಂಭಿಸಿದೆ ಮತ್ತು ಅದನ್ನು ನನ್ನ ಮರಣದವರೆಗೂ ಮುಂದುವರಿಸಲು ಬಯಸುತ್ತೇನೆ ಎಂದು ಹೇಳುತ್ತಾನೆ!
-Team Infotrend