ಇದುವರೆಗೆ 180 ಪೈಲಟ್ ಗಳನ್ನು ಬ’ಲಿ ಪಡೆದ ಮಿಗ್ 21 ವಿಮಾನಗಳು! ಇದರ ಸಮಸ್ಯೆಯಾದರೂ ಏನು ಗೊತ್ತಾ?
ಭಾರತೀಯ ವಾಯುಪ’ಡೆಯ ಯು’ದ್ಧ ವಿಮಾನ MIG-21 ಗುರುವಾರ ರಾತ್ರಿ ಪಂಜಾಬ್ನ ಮೊಗಾ ಜಿಲ್ಲೆಯ ಹಳ್ಳಿಯಲ್ಲಿ ಅ’ಪ’ಘಾ’ತಕ್ಕೀಡಾಗಿದೆ. ಈ ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಹು’ತಾ’ತ್ಮರಾದರು. ಅವರು ಕೇವಲ 29 ವರ್ಷ ವಯಸ್ಸಿನವರಾಗಿದ್ದರು ಮತ್ತು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಇದು ಈ ವರ್ಷದ ಎರಡನೇ ಅ’ಪ’ಘಾ’ತವಾಗಿದ್ದು, ಇದರಲ್ಲಿ ದೇಶವು ಇಬ್ಬರು ಪೈಲಟ್ ಮತ್ತು ಎರಡು ವಿಮಾನಗಳನ್ನು ಕಳೆದುಕೊಂಡಿತು.
ಮೊಗಾದಲ್ಲಿ ಅ’ಪ’ಘಾ’ತ :
ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಅವರು ಮಿಗ್-21 ನಿಂದ ರಾಜಸ್ಥಾನದ ಸೂರತ್ಗಡಕ್ಕೆ ತರಬೇತಿ ಅವಧಿಯ ಹಾರಾಟ ನಡೆಸಿದರು ಆದರೆ ಅವರ ವಿಮಾನ ಪಂಜಾಬ್ ನ ಮೊಗಾದಲ್ಲಿ ನೆಲಕ್ಕೆ ಅಪ್ಪಳಿಸಿತು. ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಅ’ಪ’ಘಾ’ತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ಅ’ಪ’ಘಾ’ತದ ಸಮಯದಲ್ಲಿ ಅವರು ವಿಮಾನದಿಂದ ಹೊರ ಹಾರಲು ಪ್ರಯತ್ನಿಸಿದರು ಆದರೆ ಅವರ ಪಾರಾಚೂಟ್ ತೆರೆದುಕೊಳ್ಳಲೇ ಇಲ್ಲ. ನಂತರ ವಿಮಾನ ಜೋರಾಗಿ ಅಬ್ಬರಿಸಿ ಭೂಮಿಗೆ ಬಿತ್ತು. ಹು’ತಾ’ತ್ಮ ಅಭಿನವ್ ಚೌಧರಿ ಅವರ ದೇ’ಹದ ಅ’ವ’ಶೇ’ಷಗಳು ವಿಮಾನದ ಭ’ಗ್ನಾವ’ಶೇ’ಷದಿಂದ ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿವೆ.
ಈ ವರ್ಷದಲ್ಲಿ ಇದಕ್ಕೂ ಮುನ್ನ ಮಾರ್ಚ್ 18 ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಮಿಗ್ -21 ಬಿದ್ದಿತ್ತು. ಇದರಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಶಿಶ್ ಗುಪ್ತಾ ಹು’ತಾ’ತ್ಮರಾಗಿದ್ದರು. ಅಂದರೆ ಈ ವರ್ಷದಲ್ಲಿ ಮಿಗ್ ಫೈಟರ್ 21 ಪ್ಲೇನ್ ನಿಂದಾಗಿ ಭಾರತ ತನ್ನ ಇಬ್ಬರು ವೀರರನ್ನು ಕಳೆದುಕೊಂಡಿತು ಮತ್ತು ಎರಡು ಮಿಗ್ 21 ಹೋದವು.

ಈ ವಿಮಾನಗಳನ್ನು ನಮ್ಮ ದೇಶದಲ್ಲಿ ಹಾರಾಡುವ ಶ’ವ’ಪೆ’ಟ್ಟಿಗೆಯೆಂದು ಕರೆಯಲಾಗುತ್ತದೆ. ಅದನ್ನು ಏಕೆ ಹಾಗೆ ಹೇಳಲಾಗಿದೆ ಎಂಬುದು ನಿಮಗೀಗಾಗಲೇ ಅರ್ಥವಾಗಿದೆ. 1960 ರ ದಶಕದಲ್ಲಿ ಚೆವ್ರೊಲೆಟ್ ಕಂಪನಿಯ ಕಾರನ್ನು ಭಾರತದಲ್ಲಿ ‘ಇಂಪಾಲಾ’ ಎಂದು ಹೆಸರಿಸಲಾಯಿತು. ಆಗ ಈ ಕಾರಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಸಾಕಷ್ಟು ಕ್ರೇಜ್ ಇತ್ತು.
ಆದರೆ ಸಮಯ ಬದಲಾಯಿತು ಮತ್ತು ನಂತರ ಹೊಸ ವಾಹನಗಳು ಬರಲಾರಂಭಿಸಿದವು. ಎಲ್ಲರೂ ಹೊಸ ಮಾಡೆಲ್ ನ ಹೊಸ ಕಾರು ಅಥವಾ ಮೋಟಾರ್ಸೈಕಲ್ ಅನ್ನು ಹೊಂದಲು ಬಯಸುತ್ತಾರೆ. ಆದರೆ 50-60 ವರ್ಷಗಳ ಹಿಂದೆ ನೀವು ಖರೀದಿಸಿದ ವಾಹನ ಹೇಗಿರಬಹುದೆಂದು ಊಹಿಸಿ, ಮಿಗ್ 21 ಕಥೆನೂ ಇದೇ ಆಗಿದೆ.
ಇವು 50-60 ವರ್ಷಗಳಿಂದ ಬಳಕೆಯಲ್ಲಿವೆ :
50 ರಿಂದ 60 ವರ್ಷದ ಹಳೆಯ ಕಾರನ್ನು ಇಂದಿಗೂ ಅದೇ ಸ್ಥಿತಿಯಲ್ಲಿ ಓಡಿಸಲು ಸಾಧ್ಯವಿಲ್ಲ. ಮತ್ತು ಮಿಗ್ ಸರಣಿಯ ಫೈಟರ್ ಗಳಿಗೂ ಇದು ಅನ್ವಯಿಸುತ್ತದೆ. ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಕೂಡ 2019 ರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತೀಯ ವಾಯುಪ’ಡೆಯು ಹಲವು ದಶಕಗಳಿಂದ ಮಿಗ್ -21 ವಿಮಾನವನ್ನು ಹಾರಿಸುತ್ತಿದೆ ಎಂದು ಅವರು ಹೇಳಿದ್ದರು.
ಮಿಗ್ ಫೈಟರ್ 21 ವಿಮಾನವು ಕಳೆದ 50 ವರ್ಷಗಳಿಂದ ಭಾರತೀಯ ವಾಯುಪ’ಡೆಯ ಬೆನ್ನೆಲುಬಾಗಿದೆ. ಭಾರತೀಯ ವಾಯುಪ’ಡೆಯು 1960 ರಿಂದ 850 ಕ್ಕೂ ಹೆಚ್ಚು ಮಿಗ್ ಯು’ದ್ಧ ವಿಮಾನಗಳನ್ನು ಖರಿದಿಸಿದೆ. ಈ ವಿಮಾನಗಳು 1965 ರ ಭಾರತ-ಪಾಕಿಸ್ತಾನ ಯು’ದ್ಧ, ನಂತರ 1971 ರ ಯು’ದ್ಧ, ಮತ್ತು ನಂತರ 1999 ರ ಕಾರ್ಗಿಲ್ ಯು’ದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಯು’ದ್ಧಭೂಮಿಯಲ್ಲಿ ಮಾ’ರ’ಕ :
ಈ ವಿಮಾನಗಳ ಜೀವಿತಾವಧಿ 50 ವರ್ಷಗಳನ್ನು ಮೀರಿರಬಹುದು, ಆದರೆ ಇಂದಿಗೂ ನವೀಕರಿಸಿದ ಮಿಗ್ -21 ವಿಮಾನವು ಆಕಾಶದಲ್ಲಿ ಯಾವುದೇ ಆಧುನಿಕ ವಿಮಾನಗಳೊಂದಿಗೆ ಸ್ಪರ್ಧಿಸಬಲ್ಲದು. ಇದಕ್ಕೆ ತಾಜಾ ಪುರಾವೆಯೆಂದರೆ 2019 ರಲ್ಲಿ ವಾ’ಯುಸೇ’ನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಐದನೇ ತಲೆಮಾರಿನ ಆಧುನಿಕ ವಿಮಾನ ಎಫ್-16 ಅನ್ನು ಮಿಗ್ -21 ಮೂಲಕ ಹೊ’ಡೆ’ದು’ರು’ಳಿ’ಸಿದಾಗ ಎಲ್ಲರೂ ದಂಗಾಗಿದ್ದರು.
ಸರಳವಾಗಿ ಹೇಳುವುದಾದರೆ, ಮಿಗ್ ಸರಣಿಯ ಈ ವಿಮಾನಗಳ ಹೋ’ರಾ’ಟದ ಸಾಮರ್ಥ್ಯವು ಇನ್ನೂ ಹಾಗೇ ಇದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ವಿಮಾನದ ದಾಖಲೆಯು ಉತ್ತಮವಾಗಿಲ್ಲ. ಅದಕ್ಕಾಗಿಯೇ ಈ ಸರಣಿಯ ವಿಮಾನಗಳನ್ನು ನಮ್ಮ ದೇಶದಲ್ಲಿ ಹಾರಾಡುವ ಶ’ವ’ಪೆ’ಟ್ಟಿ’ಗೆಯೆಂದು ಕರೆಯಲಾಗುತ್ತದೆ.
ಕೆಲವು ಡೇಟಾದೊಂದಿಗೆ ನೀವು ಇದನ್ನು ಅರ್ಥಮಾಡಿಕೊಳ್ಳಬಹುದು :
2012 ರ ಹೊತ್ತಿಗೆ ಭಾರತದ 872 ಮಿಗ್ ವಿಮಾನಗಳ ಅರ್ಧದಷ್ಟು ಅ’ಪ’ಘಾ’ತಕ್ಕೀಡಾಗಿವೆ. 2003 ಮತ್ತು 2013 ರ ನಡುವೆ 10 ವರ್ಷಗಳಲ್ಲಿ 38 ಮಿಗ್-21 ವಿಮಾನಗಳು ಅ’ಪ’ಘಾ’ತಕ್ಕೀಡಾಗಿವೆ. ಇಂದಿನಿಂದ ಕಳೆದ 10 ವರ್ಷಗಳ ಬಗ್ಗೆ ನಾವು ಮಾತನಾಡುವುದಾದರೆ, ಈ ಅವಧಿಯಲ್ಲಿ 20 ಮಿಗ್-21 ವಿಮಾನಗಳು ಅ’ಪ’ಘಾ’ತ’ಕ್ಕೀಡಾಗಿವೆ.
ಅ’ಪ’ಘಾ’ತದಲ್ಲಿ 180 ಪೈಲಟ್ ಹು’ತಾತ್ಮರು :
ಮುಖ್ಯ ವಿಷಯವೆಂದರೆ 1970 ರಿಂದ ಇಂದಿನವರೆಗೆ, ಭಾರತೀಯ ವಾಯುಪ’ಡೆಯ 180 ಕ್ಕೂ ಹೆಚ್ಚು ಪೈಲಟ್ ಮಿಗ್ ವಿಮಾನಗಳ ಹಾರಾಟದ ಸಮಯದಲ್ಲಿ ಹು’ತಾ’ತ್ಮರಾಗಿದ್ದಾರೆ. ಇದಲ್ಲದೆ ಈ ಅ’ಪ’ಘಾ’ತಗಳಲ್ಲಿ 40 ನಾಗರಿಕರು ಸಹ ಸಾ”ವನ್ನಪ್ಪಿದ್ದಾರೆ. ತಜ್ಞರ ಪ್ರಕಾರ, ಮಿಗ್ ಸರಣಿ ವಿಮಾನಗಳ ಅ’ಪ’ಘಾ’ತಗಳ ಹಿಂದೆ ಐದು ಕಾರಣಗಳಿವೆ…

ಮೊದಲ ಕಾರಣ – ಮಿಗ್ ಫೈ’ಟರ್ 21 ವಿಮಾನದ ಶಕ್ತಿ ಅದರ ದೊಡ್ಡ ದೌರ್ಬಲ್ಯ. ಆಕಾಶದಲ್ಲಿ ಈ ವಿಮಾನಗಳು ಗಂಟೆಗೆ 250 ಕಿ.ಮೀ ವೇಗದಲ್ಲಿ ಹಾರಬಲ್ಲವು, ಇದು ವೇಗವಾಗಿ ಯು’ದ್ಧವಿಮಾನಗಳ ವಿಭಾಗದಲ್ಲಿ ಸ್ಥಾನ ಪಡೆಯುತ್ತದೆ. ಇದಲ್ಲದೆ ಇಳಿಯುವ ಸಮಯದಲ್ಲಿ ಮಿಗ್ ವಿಮಾನದ ವೇಗವು ಗಂಟೆಗೆ ಸುಮಾರು 350 ಕಿಲೋಮೀಟರ್ ಆಗಿದೆ, ಇದು ಸಾಕಷ್ಟು ಹೆಚ್ಚಾಗಿದೆ. ಈ ವೇಗದಿಂದಾಗಿ, ಈ ವಿಮಾನವನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗುತ್ತದೆ ಮತ್ತು ಅ’ಪ’ಘಾ’ತದ ಸಂಭವನೀಯತೆ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡನೆಯ ಕಾರಣವೆಂದರೆ – ವಿಮಾನದ ವಿನ್ಯಾಸ, ಈ ವಿಮಾನದ ಮೇಲಾವರಣವು ತುಂಬಾ ಚಿಕ್ಕದಾಗಿದೆ ಎಂದು ತಜ್ಞರು ಹೇಳುತ್ತಾರೆ. ಮೇಲಾವರಣವು ವಿಮಾನದ ಪೈಲಟ್ ನಿರ್ವಹಿಸುವ ಭಾಗವಾಗಿದೆ. ಗಾತ್ರವು ಚಿಕ್ಕದಾಗಿದ್ದರಿಂದ ಪೈಲಟ್ ಗೆ ಆಗಾಗ್ಗೆ ರನ್ ವೇ ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ವಿಮಾನದ ವೇಗವು ತುಂಬಾ ಹೆಚ್ಚಾಗಿದೆ ಮತ್ತು ಬಹುಶಃ ಈ ಕಾರಣದಿಂದಾಗಿ ಅನೇಕ ಬಾರಿ ಅ’ಪ’ಘಾ’ತಗಳು ಸಂಭವಿಸುತ್ತವೆ.
ಮೂರನೆಯ ಕಾರಣವೆಂದರೆ – ಈ ವಿಮಾನಗಳ ದೀರ್ಘಾಯುಷ್ಯ. ಭಾರತವು 1960 ರಲ್ಲಿ ಮೊದಲ ಮಿಗ್ ಫೈ’ಟರ್ 21 ವಿಮಾನವನ್ನು ಪಡೆದುಕೊಂಡಿತು. ಹಲವಾರು ದಶಕಗಳ ನಂತರವೂ ಈ ವಿಮಾನಗಳು ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿವೆ. ಆದಾಗ್ಯೂ ಅನೇಕ ಮಿಗ್ ವಿಮಾನಗಳು ನಿವೃತ್ತಿಯಾಗಿವೆ.
ನಾಲ್ಕನೆಯ ಕಾರಣವೆಂದರೆ – ಮಿಗ್ ವಿಮಾನಗಳನ್ನು ತಯಾರಿಸುವ ರಷ್ಯಾ 1990 ರಿಂದ ಅವುಗಳನ್ನು ತಯಾರಿಸುತ್ತಿಲ್ಲ. ಆದ್ದರಿಂದ ಈ ವಿಮಾನಗಳನ್ನು ಸೇವೆಯಲ್ಲಿಡಲು, ಭಾರತವು ಬಿಡಿಭಾಗಗಳನ್ನು ಇಸ್ರೇಲ್ ಮತ್ತು ಇತರ ದೇಶಗಳಿಂದ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇತರ ಕಂಪನಿಗಳ ಬಿಡಿಭಾಗಗಳ ಬಳಕೆಯು ಅ’ಪ’ಘಾ’ತಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಂತಿಮ ಕಾರಣವೆಂದರೆ – ಮಿಗ್ ಸರಣಿಯ ವಿಮಾನಗಳು ಸಿಂಗಲ್ ಎಂಜಿನ್ ಯು’ದ್ಧ ವಿಮಾನಗಳಾಗಿವೆ. ಆ ಕಾರಣದಿಂದಾಗಿ ಹಾರಾಟದ ಸಮಯದಲ್ಲಿ ಆ ಎಂಜಿನ್ ಅಸಮರ್ಪಕ ಕಾರ್ಯಗಳು ನಡೆದಾಗ, ಅದನ್ನು ಬೆಂಬಲಿಸಲು ಎರಡನೇ ಎಂಜಿನ್ ವಿಮಾನದಲ್ಲಿ ಇಲ್ಲ. ಅ’ಪ’ಘಾ’ತಗಳನ್ನು ತಡೆಗಟ್ಟುವಿಕೆ ಕಷ್ಟವಾಗಲು ಇದು ಕೂಡ ಪ್ರಮುಖ ಕಾರಣವಾಗಿದೆ.
-Team Infotrend