ಮೊದಲ ಅಲೆಯಲ್ಲಿಯೇ ಪಾಠ ಕಲಿತ ಈ ಜಿಲ್ಲಾಧಿಕಾರಿ ಮಾಡಿದ ವ್ಯವಸ್ಥೆ ಹೇಗಿದ್ದವು ನೋಡಿ, ಇಂಥ ಅಧಿಕಾರಿಗಳು ಬೇಕು ನಮಗೆ
ಕೊರೋನ ಎರಡನೇ ಅಲೆ ಭಾರತವನ್ನು ಹಣಿದು ಹಾಕಿದೆ. ಅದರಲ್ಲೂ ಕೆಲವು ರಾಜ್ಯಗಳಂತೂ ಇನ್ನಿಲ್ಲದ ಜೀವಹಾನಿ ಅನುಭವಿಸಿವೆ. ಅಂಥ ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಮೊದಲಿನಿಂದಲೂ ಅತಿ ಹೆಚ್ಚು ಪ್ರಕರಣ ಹಾಗೂ ಸಾವು ನೋಡುತ್ತಾ ಬಂದ ಆ ರಾಜ್ಯದಲ್ಲಿ ಕೊರೋನ ಸರ್ಕಾರದ ಕೈ ತಪ್ಪಿ ಹೋಗಿತ್ತು, ಮಣಿಸಲು ಸಾಧ್ಯವೇ ಇಲ್ಲವೆಂಬಂತಾಗಿತ್ತು. ಆದರೆ ಆ ರಾಜ್ಯದ ಈ ಜಿಲ್ಲಾಧಿಕಾರಿ ಮಾತ್ರ ತನ್ನ ಬಿಗು ಹಾಗೂ ಸಮಯೋಚಿತ ನಿರ್ಧಾರಗಳಿಂದಾಗಿ ತನ್ನ ಜಿಲ್ಲೆಯಲ್ಲಿ ಕೊರೋನ ಹಬ್ಬದಂತೆ ತಡೆದರು. ಬನ್ನಿ ಅವರ ಕೆಲಸ ಹೇಗಿದ್ದವು ನೋಡೋಣ.
ನಮ್ಮ ಜನ ಹೇಗಿದಾರೆ ಅಂತ ನಿಮಗೆಲ್ಲ ಗೊತ್ತಿದೆ. ವೈರಸ್ ಚೈನ್ ಕಟ್ ಮಾಡಲು ಲಾಕ್ ಡೌನ್ ಹೇರಿದರೂ ಕೂಡ ಇದರಲ್ಲಿ ರಾಜಕಾರಣಿಗಳಿಗೆ ಏನೋ ಲಾಭ ಇದೆ ಅಂದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು – ಆರೋಗ್ಯ ಮಂತ್ರಿಗಳು ನೀಡುವ ಪ್ರತಿ ಹೇಳಿಕೆಗಳು ಅಥವಾ ನಿರ್ದೇಶನಗಳು ನಮಗೆ ಕಾಮಿಡಿಯಾಗಿ ಕಾಣುತ್ತವೆ, ಅಥವಾ ಇದರಲ್ಲಿ ಅವರಿಗೇನೋ ಲಾಭ ಇದೆ ಅನಿಸುತ್ತದೆ.
ಇದರಲ್ಲಿ ನಮ್ಮ ತಪ್ಪೇನಿಲ್ಲ, ರಾಜಕಾರಣಿಗಳು ನಮ್ಮಲ್ಲಿ ಆ ಪರಿ ನಂಬಿಕೆ ಉಳಿಸಿಕೊಂಡು ಬಂದಿರುವುದರ ಪರಿಣಾಮ ಇದು. ಕೊರೋನ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಯಡಿಯೂರಪ್ಪನವರಿಂದ ಹಿಡಿದು, ಮಹಾರಾಷ್ಟ್ರ ಮುಖ್ಯಮಂತ್ರಿಯಾದಿಯಾಗಿ ಪ್ರಧಾನಮಂತ್ರಿಗಳು ಕೂಡ ಹಲವು ಸಲ ತಪ್ಪು ನಿರ್ಧಾರ ತಗೆದುಕೊಂಡಿದ್ದುಂಟು, ಇದಕ್ಕೆ ಕಾರಣ ಇಂಥ ವೈರಸ್ ಅನ್ನು ಈ ಮೊದಲು ಎದುರಿಸಿದ ಅನುಭವ ಯಾರಿಗೂ ಇರಲಿಲ್ಲ.

ಜನ ಕೂಡ ಇದನ್ನೆಲ್ಲ ಅರ್ಥ ಮಾಡಿಕೊಂಡು ಕೊರೋನ ಗೈಡ್ ಲೈನ್ಸ್ ಪಾಲಿಸಲಿಲ್ಲ, ಬೇರೆ ದೇಶದಲ್ಲಾಗುತ್ತಿದ್ದ ಸಾವಿನ ಸರಣಿ ನೋಡಿ ಕೂಡ ನಾವೆಲ್ಲ ಮಾಸ್ಕ್, ಡಿಸ್ಡನ್ಸ್, ಸ್ವಚ್ಚತೆ ಇಲ್ಲದೇ ಬೇಕಾಬಿಟ್ಟಿ ತಿರುಗಿದೆವು. ಅದೆಲ್ಲದರ ಪರಿಣಾಮ ಎರಡನೇ ಅಲೆ ಈ ಪರಿ ಅಪ್ಪಳಿಸಿತು. ಸರ್ಕಾರಗಳು ಏನು ಮಾಡುತ್ತಿವೆ ಎಂದು ಬೈಯ್ಯುವ ಮೊದಲು ನಾವು ಜಾಗರೂಕರಾಗಿರಬೇಕು, ನಾವು ಬದುಕಿದ್ದರೆ ಸರ್ಕಾರಕ್ಕೆ ಆಮೇಲೆ ಬಯ್ಯಬಹುದು.
ಈಗಲೂ ಕೂಡ ಕೆಲವರು ತಮ್ಮ ಬೇಜವಾಬ್ದಾರಿ ವರ್ತನೆ ಬಿಡುತ್ತಿಲ್ಲ. ಹಟಕ್ಕೆ ಬಿದ್ದವರಂತೆ, ಮದುವೆ, ಮುಂಜಿ, ಮನೆ ಓಪನಿಂಗ್ ಮಾಡುತ್ತಿದ್ದಾರೆ. ಆದರೆ ಈ ಜಿಲ್ಲಾಧಿಕಾರಿ ಮಾತ್ರ ತನ್ನ ಜಿಲ್ಲೆಯಲ್ಲಿ ಅವಕ್ಕೆಲ್ಲ ಕಟ್ಟುನಿಟ್ಟಾಗಿ ಬ್ರೇಕ್ ಹಾಕಿದರು. ಇವರು ಮಹಾರಾಷ್ಟ್ರದ ನಂದುರಬಾರ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೆಟ್.
ಹೆಸರು ಡಾ.ರಾಜೇಂದ್ರ ಭಾರೂಡ್ ಅಂತ. ಮೂಲತ ಹಳ್ಳಿಯಲ್ಲಿ ಹುಟ್ಟಿ ಬೆಳೆದ ರಾಜೇಂದ್ರ ರವರಿಗೆ ತಮ್ಮ ಜನರ ಮನಸ್ಥಿತಿ ಗೊತ್ತಿತ್ತು ಹಾಗೂ ಅವರನ್ನು ಹೇಗೆ ಕಂಟ್ರೋಲ್ ಮಾಡಬೇಕು ಎಂಬುದೂ ತಿಳಿದಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಹಂತಕ್ಕೆ ಬೆಳೆದರೂ ಜನಸಂಪರ್ಕ ನಿರಂತರವಾಗಿತ್ತು. ಅದೆಲ್ಲದರ ಪಲಿತಾಂಶ ಈಗವರು ತಮ್ಮ ಜಿಲ್ಲೆಯಲ್ಲಿ ಕೊರೋನ ವೈರಸ್ ಅನ್ನು 75% ಕುಗ್ಗಿಸಿದ್ದಾರೆ. ಪ್ರತಿದಿನ 1100-1200 ಬರುತ್ತಿದ್ದ ಹೊಸ ಪ್ರಕರಣಗಳು ಈಗ 200 ಕ್ಕೆ ಇಳಿದಿವೆ.

ರಾಜೇಂದ್ರ ಅವರು ಅದೇ ಜಿಲ್ಲೆಯ ಗ್ರಾಮೀಣ ಪ್ರದೇಶದವರಾದ್ದರಿಂದ ಜಿಲ್ಲೆಯ ವಾತಾವರಣ, ಜನಜೀವನದ ಸಂಪೂರ್ಣ ಅರಿವಿತ್ತು. ಹುಟ್ಟುವ ಮೊದಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಇವರು ತಾಯಿಯ ಆರೈಕೆಯಲ್ಲಿ ಬೆಳೆದು ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪಾಸ್ ಆಗಿದ್ದರು.
ಅದಕ್ಕೂ ಮೊದಲು ಎಂಬಿಬಿಎಸ್ ಕೂಡ ಓದಿದ್ದ ಡಾ.ರಾಜೇಂದ್ರರವರಿಗೆ ವೈದ್ಯಕೀಯ ಜ್ಞಾನ ಕೂಡ ಇತ್ತು, ಇದೆಲ್ಲ ತಮ್ಮ ಜಿಲ್ಲೆಯ ಜನರಿಗೆ ಅನುಕೂಲವಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕಾರ, ಕರೋನಾ ಸಾಂಕ್ರಾಮಿಕದ ಮೊದಲ ಅಲೆಯು ದೇಶಕ್ಕೆ ಅಪ್ಪಳಿಸಿದಾಗ, ನಂದುರ್ಬಾರ್ನ ನಿವಾಸಿಗಳು ನಂದುರ್ಬಾರ್ನ ಪುರಾತನ ಕಾಲದ ಮೂಲಸೌಕರ್ಯದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಕರೋನಾ ಸಾಂಕ್ರಾಮಿಕದ ಮೊದಲ ಅಲೆಯಿಂದ ಪಾಠ ಕಲಿತುಕೊಳ್ಳುವ ಡಾ.ರಾಜೇಂದ್ರ ಭರೂದ್, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದರು. ಇನ್ನೊಮ್ಮೆ ಓದಿ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಿದ್ಧತೆಗಳನ್ನು ಪ್ರಾರಂಭಿಸಿದರು! ಕೊರೋನ ನಿಯಂತ್ರಣಕ್ಕಾಗಿ ಅವರ ಕೆಲವು ಕೆಲಸಗಳನ್ನು ನೋಡೋನ ಬನ್ನಿ…

*ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭರೂದ್ ಅವರು ಮೊದಲೇ ತಮ್ಮ ಜಿಲ್ಲೆಯಲ್ಲಿ ಮೂರು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಕೆಲಸ ಮಾಡಿದರು.
*ವೈದ್ಯಕೀಯ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಅವನ್ನು ಒದಗಿಸಿದರು
*ಜಿಲ್ಲೆಯಲ್ಲಿ ಪರಿಣಾಮಕಾರಿ ಲಸಿಕೆ ಚಾಲನೆಯನ್ನು ಪ್ರಾರಂಭಿಸುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದರು.
*ಕಳೆದ ವರ್ಷ ಜಿಲ್ಲೆಯಲ್ಲಿ ಪರೀಕ್ಷೆಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಲ್ಯಾಬ್ ಇರಲಿಲ್ಲ, ಅವುಗಳ ಆರಂಭಕ್ಕೆ ಆದ್ಯತೆ ಕೊಟ್ಟರು.
*ಜಿಲ್ಲೆಯಲ್ಲಿ ಆಂಬುಲೆನ್ಸ್ ಗಳಂತಹ ಮೂಲ ಸೇವೆಗಳ ತೀವ್ರ ಕೊರತೆ ಇತ್ತು. ಅದಕ್ಕೆ ಮೊದಲೇ ತಕ್ಕ ವ್ಯವಸ್ಥೆ ಮಾಡಿಕೊಂಡರು.
*ಖಾಸಗಿ ಶಾಲೆಯ ಬಸ್ ಗಳನ್ನು ಪಡೆದು ಲಸಿಕೆ ಕೇಂದ್ರಕ್ಕೆ ಜನರನ್ನು ಕರೆದುಕೊಂಡು ಹೋಗುವ ಕೆಲಸ ಹಚ್ಚಿದರು.
*ಬೇರೆ ದೇಶದಲ್ಲಾದ ಪರಿಣಾಮವನ್ನು ನೋಡಿ, ಭಾರತದಲ್ಲಿ ಕರೋನಾದ ಎರಡನೇ ಅಲೆ ಬಂದರೆ ಆಮ್ಲಜನಕದ ಅವಶ್ಯಕತೆಯಿದೆ ಎಂದು ಡಾ.ರಾಜೇಂದ್ರ ಭರುದ್ ಆಗಲೇ ಇದನ್ನು ಗಮನದಲ್ಲಿಟ್ಟುಕೊಂಡು ಅವರು ಜಿಲ್ಲೆಯಲ್ಲಿ 3 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಿದರು, ಇವೆಲ್ಲ ಪ್ರತಿ ಗಂಟೆಗೆ 24 ನೂರು ಲೀಟರ್ ಆಮ್ಲಜನಕವನ್ನು ಉತ್ಪಾದಿಸುತ್ತವೆ/

*ಡಾ.ರಾಜೇಂದ್ರ ಭರೂದ್ ಅವರು ಜಿಲ್ಲೆಯ ಜನರಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿ ಮತ್ತು ವೆಬ್ಸೈಟ್ ಅನ್ನು ಕೂಡ ಸ್ಥಾಪಿಸಿದ್ದಾರೆ.
*ಈ ಹಿಂದೆ ಜಿಲ್ಲೆಯಲ್ಲಿ ಕೇವಲ 20 ಬೆಡ್ ಮಾತ್ರ ಇದ್ದವು, ಆದರೆ ಈಗ ಕೋವಿಡ್ ರೋಗಿಗಳಿಗೆ 1200 ಆಮ್ಲಜನಕ ವೆಂಟಿಲೇಟರ್ಗಳು, ಐಸಿಯು ಬೆಡ್ ಗಳು ಮತ್ತು 7 ಸಾವಿರ ಪ್ರತ್ಯೇಕ ಬೆಡ್ ಗಳಿವೆ
*ಕೋವಿಡ್ ಆಸ್ಪತ್ರೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ‘ಆಕ್ಸಿಜನ್ ನರ್ಸ್’ ರನ್ನು ನಿಯೋಜಿಸಿದ್ದಾರೆ, ಅವರ ಕೆಲಸವೆಂದರೆ ಪ್ರತಿ ಗಂಟೆಗೆ ಕೋವಿಡ್ ರೋಗಿಗಳ ಎಸ್ಪಿಒ 2 ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅವರಿಗೆ ಆಮ್ಲಜನಕದ ಪೂರೈಕೆಯ ಪ್ರಮಾಣವನ್ನು ನಿರ್ಧರಿಸುವುದು.
*ಈ ಕೆಲಸದಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆಮ್ಲಜನಕವನ್ನು ಉಳಿಸಲಾಗುತ್ತಿದೆ. ಈ ಮಾದರಿಯು ಪರಿಣಾಮಕಾರಿ ಎಂದು ಸಾಬೀತಾಗುತ್ತಿದ್ದು, ಇದನ್ನು ಇತರ ಜಿಲ್ಲೆಗಳಲ್ಲೂ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
*ವಿಶೇಷವೆಂದರೆ ನಂದೂರ್ಬಾರ್ ಬುಡಕಟ್ಟು ಪ್ರಾಬಲ್ಯದ ಜಿಲ್ಲೆ. ಪ್ರಸ್ತುತ ಜಿಲ್ಲೆಯ ಸರ್ಕಾರಿ ಶಿಕ್ಷಕರು ಮತ್ತು ಇತರ ಸರ್ಕಾರಿ ನೌಕರರು ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ, ಜೊತೆಗೆ ಕೋವಿನ್ ಆ್ಯಪ್ ಇತ್ಯಾದಿಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ಈಗ ಹೇಳಿ ಹೇಗಿದೆ ಈ ಜಿಲ್ಲಾಧಿಕಾರಿಗಳ ಸಾಧನೆ? ಇದೇ ಕೆಲಸವನ್ನು ಎಲ್ಲ ಜಿಲ್ಲಾಧಿಕಾರಿಗಳು ಮಾಡಿದ್ದರೆ ಅಥವಾ ಅವರನ್ನು ಅನುಸರಿಸಿದ್ದರೂ ಕೊರೋನವನ್ನು ಸಾಕಷ್ಟು ನಿಯಂತ್ರಣ ಮಾಡಬಹುದಿತ್ತು. ಇನ್ನೊಂದು ದುರದೃಷ್ಟಕರ ಅಂಶವೆಂದರೆ, ಒಬ್ಬ ಜಿಲ್ಲಾಧಿಕಾರಿ ಸ್ವತಂತ್ರವಾಗಿ ಕೆಲಸ ಮಾಡಲು ತುಂಬಾ ಕಡೆ ನಮ್ಮ ರಾಜಕಾರಣಿಗಳು ಬಿಡುವುದಿಲ್ಲ. ಇದಕ್ಕೆ ನಮ್ಮರಾಜ್ಯದ ಕೆಲವು ಉದಾಹರಣೆಗಳನ್ನು ನೀವೇ ನೆನಪಿಸಿಕೊಳ್ಳಿ.
ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ…
-Team Infotrend