Video; ಸುಂದರ ಹುಡುಗಿಯನ್ನು ನೋಡಿ ಮೊದ್ಲು ಮುಖದ ಮೇಲೆ ಕೈಯಾಡಿಸಿ ನಂತರ ನೇರ ಮುತ್ತನ್ನೇ ಕೊಟ್ಟ ಮಂಗದ ಮರಿ!
ಮಕ್ಕಳು ದೇವರ ತೋಟದ ಹೂವುಗಳಿದ್ದಂತೆ ಎಂಬ ಮಾತು ಕೇಳಿರಬೇಕು. ಮಕ್ಕಳು ಆಡುವ ನೇರ ಮತ್ತು ನಿಜವಾದ ಮಾತುಗಳು ಪೋಷಕರಿಗೆ ಕೆಲವೊಮ್ಮೆ ಇನ್ನೊಬ್ಬರ ಮುಂದೆ ಮುಜುಗರವನ್ನು ಉಂಟು ಮಾಡುತ್ತವೆ. ಈ ಮಕ್ಕಳು ಅಷ್ಟೇ ತುಂಟರೂ ಆಗಿರುತ್ತಾರೆ. ಈ ಮಕ್ಕಳ ತುಂಟತನ ನೋಡಿರಬೇಕು ಆದರೆ, ಬೇರೆ ಪ್ರಾಣಿಗಳ ಅದರಲ್ಲೂ ಮಂಗಗಳ ತುಂಟಾಟಿನ ಅಂದಾಜು ಹಚ್ಚಲು ಸಾಧ್ಯವೇ ಇಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಮನುಷ್ಯರ ಜೊತೆಗೆ ಪ್ರಾಣಿಗಳ ತುಂಟಾಟದ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದನ್ನು ನೋಡಿದ್ದೇವೆ. ಸದ್ಯ ಮಂಗದ ಮರಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿದೆ. ಈ ತುಂಟ ಮಂಗದ ಮರಿ ತಾನು ಮಾಡಿದ ತುಂಟಾಟದ ದೃಶ್ಯವನ್ನು ನೆಟ್ಟಿಗರಿಗೆ ಮೇಲಿಂದ ಮೇಲೆ ನೋಡಲು ಹಚ್ಚುತ್ತಿದೆ.
ತಾಯಿ ಮಂಗ ಮತ್ತು ಅದರ ಮರಿಮಂಗಕ್ಕೆ ಹುಡುಗಿಯೊಬ್ಬಳು ತುಂಬಾ ಪ್ರೀತಿಯಿಂದ ಅವುಗಳ ಹತ್ತಿರ ಕುಳಿತು ತಿನ್ನಲು ಆಹಾರವನ್ನು ನೀಡುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ಮರಿಮಂಗ ಮಾಡಿದ ತುಂಟಾಟದಿಂದ ಹುಡುಗಿಯು ನಾಚಿಕೆಂಪಾಗಿದ್ದಾಳೆ.
ಅಂತ ಯಾವ ಕೆಲಸವನ್ನು ಈ ಮರಿಮಂಗವು ಮಾಡಿದೆ ನೋಡಿ ಈ ಕೆಳಗೆ ನೀಡಿದ ವಿಡಿಯೋದಲ್ಲಿ…
ನಮ್ಮ ಪೂರ್ವಜರು ಮಂಗನೆಂದೇ ಹೇಳುತ್ತಾರೆ. ಹೀಗಾಗಿ ಬಹುಶಃ ಮಂಗನಲ್ಲಿ ಮನುಷ್ಯನ ತರ ಕ್ಯೂರಿಯಾಸಿಟಿ ಇರುತ್ತದೆ. ಮರಿಮಂಗ ಮಾಡಿದ ಈ ಕೆಲಸ ನೋಡಿ ನೆಟ್ಟಿಗರಿಗೆ ನಗು ತಡೆಯುತ್ತಿಲ್ಲ. ಮರಿಮಂಗವು ಆಹಾರವನ್ನು ತಿನ್ನುವಾಗ ಹುಡುಗಿಯ ಜೊತೆಗೆ ತುಂಬಾ ಸೌಜನ್ಯದಿಂದ ವ್ಯವಹರಿಸುತ್ತಾ ಮುಖದ ಮೇಲೆ ಕೈ ಆಡಿಸುತ್ತದೆ. ನಂತರ ಕ್ಷಣದಲ್ಲಿಯೇ ಮುದ್ದು ಮಂಗದಮರಿ ನೇರ ಹುಡುಗಿಯ ತುಟಿಗಳಿಗೆ ಮತ್ತನ್ನು ಕೊಟ್ಟುಬಿಡುತ್ತದೆ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ಮುದ್ದಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ashiq.billota ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.