Video; ವ್ಯಕ್ತಿ ಸುಖದ ನಿದ್ರೆಯಲ್ಲಿದ್ದಾಗ ಹನುಮಂತ ಬಂದು ಮಾಡಿದ ಅವಾಂತರ ನೋಡಿ. ಪಾಪ.. ಏನೋ ಕಾದಿತ್ತೋ ಏನೋ.
ಸುಖದ ನಿದ್ರೆಯಲ್ಲಿದ್ದಾಗ ಕೆಲವೊಮ್ಮೆ ಅದ್ಯಾವ ಅಪಶಕುನ ಬಂದು ನಿದ್ರೆಯಿಂದ ಎಬ್ಬಿಸುತ್ತದೆ ಗೊತ್ತಾಗೋದಿಲ್ಲ. ಸದ್ಯದ ವಿಡಿಯೋ ನೋಡಿದಾಗ ಇದರದ್ದೇ ಅನುಭವ ಆಗುವುದು ನಿಶ್ಚಿತ.
ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೊರೆಯುವ ಚಳಿಯಲ್ಲಿ ಕಂಬಳಿ ಹೊದ್ದುಕೊಂಡು ತುಂಬಾ ಬೆಚ್ಚಗಿನ ಸುಖದ ನಿದ್ರೆಯಲ್ಲಿದ್ದಾನೆ. ಆತನಿಗೇನು ಗೊತ್ತು ಮುಂದಿನ ಕ್ಷಣ ತುಂಬಾ ಖತರ್ನಾಕ್ ಆಗಿದೆ ಎಂದು. ವ್ಯಕ್ತಿ ಮಲಗಿರುವ ಸಂದರ್ಭದಲ್ಲಿ ಮಂಗ ಒಂದು ಕೋಣೆಯಲ್ಲಿ ಹಠಾತ್ ಎಂಟ್ರಿ ನೀಡಿ ಆತನ ಮೈಮೇಲೆ ಏರಿ ಹೋಗಿದೆ. ಮಲಗಿರುವ ವ್ಯಕ್ತಿಗೆ ಇದ್ಯಾವುದರ ಪರಿವೇ ಇಲ್ಲವೇ ಸುಖದ ನಿದ್ರೆಯಲ್ಲಿ ಜಾರಿದ್ದಾನೆ. ಮೈ ಮೇಲೆ ಮಂಗ ಕುಳಿತಾಗ ಯಾರಾದರೂ ಬಂದು ಕುಳಿತಿರಬೇಕು ಎಂಬ ಅನಿಸಿಕೆಯಿಂದ ಹಾಗೆಯೇ ಮಲಗಿದ್ದಾನೆ. ಆದರೆ ಯಾವಾಗ ಮೈಮೇಲೆ ಹೊದ್ದುಕೊಂಡ ಹೊದಿಕೆಯನ್ನು ತೆಗೆದು ನೋಡುತ್ತಾನೆ ಆಗ ಗೊತ್ತಾಗುತ್ತದೆ ಹತ್ತಿರ ಮಂಗ ಬಂದಿದೆ ಎಂದು. ಪಾಪ ವ್ಯಕ್ತಿ ನಿದ್ರೆಯಲ್ಲಿ ತಕ್ಷಣ ಬೆಚ್ಚಿ ಬೀಳುತ್ತಾನೆ. ಮಂಗಕ್ಕೆ ನೋಡಿ ಆತನ ನಿದ್ರೆ ಕ್ಷಣದಲ್ಲಿ ಮಂಗ ಮಾಯವಾಗಿ ಹೋಗುತ್ತದೆ. ಮತ್ತು ತಾನೀಗ ಏನು ಮಾಡಬೇಕು? ಎಂಬುದೇ ವ್ಯಕ್ತಿಗೆ ತಿಳಿಯುವುದಿಲ್ಲ. ಅಂಥದ್ದರಲ್ಲಿ ಮಂಗ ವ್ಯಕ್ತಿಗೆ ಹೆದರದೆ ಮೇಲಿಂದ ಮೇಲೆ ಆತನ ಮೇಲೆ ಅಟ್ಯಾಕ್ ಮಾಡುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು. ಹತ್ತಿರದಲ್ಲಿದ್ದ ಬಡಿಗೆಯನ್ನು ತೆಗೆದುಕೊಂಡು ಹೆದರಿಸಿದರೂ ಸಹ ಮಂಗ ಕ್ಯಾರೆ ಎನ್ನುವುದಿಲ್ಲ. ಕೊನೆಗೆ ವ್ಯಕ್ತಿಯೇ ಅಲ್ಲಿಂದ ಹೇಗೋ ದಡಬಡಾಯಿಸಿ ಓಡಿ ಹೋಗುವಲ್ಲಿ ಯಶಸ್ವಿಯಾಗುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋ ಇಲ್ಲಿಯವರೆಗೆ ಸುಮಾರು ಏಳು ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಇಟ್ಸ್ ಮೀ ಬಾಲು 0417 ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ.