ಗೂಗಲ್‌ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಡುವ 6 ಕ್ರಿಕೆಟಿಗರು ಇವರು! ಯಾರ್ ಯಾರು ಅಂತ ನೋಡಿ…

ವಿವಿಧ ಕಾರಣಗಳಿಗಾಗಿ ಕ್ರಿಕೇಟ್ ಪ್ರೇಮಿಗಳು ಗೂಗಲ್ ನಲ್ಲಿ ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹುಡುಕುತ್ತಲೇ ಇರುತ್ತಾರೆ. ಮೊದಲೇ ಕ್ರಿಕೇಟ್ ಧರ್ಮವಾಗಿ ಬೆಳೆದಿರುವ ದೇಶ ನಮ್ಮದು, ಇಲ್ಲಿರುವಷ್ಟು ಕ್ರಿಕೇಟ್ ಕ್ರೇಜ್ ಪ್ರಪಂಚದ ಮತ್ಯಾವ ದೇಶದಲ್ಲೂ ಇಲ್ಲ. ಹೀಗಾಗಿಯೇ ಇಲ್ಲಿ ಪ್ರತಿದಿನ ಆಟಗಾರರ ಕುರಿತು ಸರ್ಚಿಂಗ್ ನಡೆಯುತ್ತಲೇ ಇರುತ್ತದೆ.

ಮಾಮಾಲಾಗಿ ಯಾರಾದರೂ ಆಟಗಾರ ಉತ್ತಮವಾಗಿ ಆಡಿದಾಗ, ವಿಶ್ವದಾಖಲೆಗಳು ನಿರ್ಮಾಣವಾದಾಗ, ಮಹತ್ವದ ಪಂದ್ಯಗಳಿದ್ದಾಗ, ಐಪಿಎಲ್ ಸರಣಿ ನಡೆಯುವಾಗ ಗೂಗಲ್ ನಲ್ಲಿ ಆಟಗಾರರ ಕುರಿತು ಸರ್ಚ್ ಮಾಡುವುದು ಇದ್ದೇ ಇರುತ್ತದೆ. ಆದರೆ ಅದೇನೂ ಇಲ್ಲದ ಸಮಯದಲ್ಲಿಯೂ ನಮ್ಮ ದೇಶದಲ್ಲಿ ಆಟಗಾರರ ಕುರಿತು ಹುಡುಕಾಟ ನಡೆದೇ ಇರುತ್ತದೆ.

ಇನ್ನು ಸಕತ್ ಫಾರ್ಮ್ ನಲ್ಲಿರುವ, ಸಾಕಷ್ಟು ಜನಪ್ರಿಯತೆ ಗಳಿಸಿರುವ ಹಾಘೂ ಅದನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿರುವ ಆಟಗಾರರ ಬಗ್ಗೆ ಸರ್ಚ್ ಮಾಡುವುದು ಸಾಮಾನ್ಯ. ಆದರೆ ನಮ್ಮಲ್ಲಿ ರಿಟೈರ್ಡ್ ಆದ ಆಟಗಾರರ ಬಗ್ಗೆ ತಿಳಿದುಕೊಳ್ಳು ಜನ ಸರ್ಚ್ ಮಾಡುತ್ತಾರೆ! ಬನ್ನಿ ಹಾಗೆ ಸರ್ಚ್ ಲಿಸ್ಟ್ ನಲ್ಲಿ ಇರುವ ಮೊದಲ 6 ಆಟಗಾರರನ್ನು ನೋಡೋಣ.

1 – ವಿರಾಟ್ ಕೊಹ್ಲಿ : ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರನ್ನು ಪ್ರತಿ ತಿಂಗಳು 10.76 ಲಕ್ಷ ಬಾರಿ ಹುಡುಕಲಾಗುತ್ತದೆ. ಕೊಹ್ಲಿಯ ಜನಪ್ರಿಯತೆ ಅಪಾರ, ಅವರು ಹೊರಗಡೆ ಮಾತ್ರವಲ್ಲ, ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ ಗಳಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

2 – ಮಹೇಂದ್ರ ಸಿಂಗ್ ಧೋನಿ : ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮಾತನಾಡುವುದಾದರೆ, ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಧೋನಿ ಅವರನ್ನು ಗೂಗಲ್ ನಲ್ಲಿ ಪ್ರತಿ ತಿಂಗಳು ಸುಮಾರು 9.59 ಲಕ್ಷ ಬಾರಿ ಹುಡುಕಲಾಗುತ್ತದೆ. ಧೋನಿ ಸುಮಾರು 10 ವರ್ಷಗಳ ಕಾಲ ನಾಯಕತ್ವ ವಹಿಸಿದ್ದರು.

ಅನೇಕ ದೊಡ್ಡ ಪಂದ್ಯಗಳಲ್ಲಿ ಭಾರತವನ್ನು ಗೆಲುವನತ್ತ ಕೊಂಡೊಯ್ದಿದ್ದಾರೆ. ಧೋನಿ ಬಹಳ ಜನಪ್ರಿಯ ಆಟಗಾರರಾಗಿದ್ದು ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಅವರಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಚೆನೈ ಸೂಪರ್ ಕಿಂಗ್ಸ್ ನಿಂದ ಕೂಡ ಧೋನಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

3 – ರೋಹಿತ್ ಶರ್ಮಾ : ಪ್ರತಿ ತಂಡಕ್ಕೂ ರೋಹಿತ್ ಶರ್ಮಾ ಅವರಂತಹ ಬ್ಯಾಟ್ಸ್‌ಮನ್ ಸುಲಭವಾಗಿ ಸಿಗುವುದಿಲ್ಲ. ಗೂಗಲ್ ಹುಡುಕಾಟದ ವಿಷಯದಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಅವರ ಬಗ್ಗೆ ಪ್ರತಿ ತಿಂಗಳು ಸುಮಾರು 7.33 ಲಕ್ಷ ಬಾರಿ ಹುಡುಕಲಾಗುತ್ತದೆ. ಅವರು ಬಹಳ ದೊಡ್ಡ ಮತ್ತು ಜನಪ್ರಿಯ ಆಟಗಾರ.

4 – ಸಚಿನ್ ತೆಂಡೂಲ್ಕರ್ : ಸಚಿನ್ ತೆಂಡೂಲ್ಕರ್ ಕ್ರಿಕೆಟ್ ತೊರೆದು ಬಹಳ ಸಮಯವಾಗಿದೆ, ಆದರೆ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಒಂದು ತಿಂಗಳಲ್ಲಿ ಸರಾಸರಿ 4.51 ಲಕ್ಷ ಬಾರಿ ಅವರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಯುತ್ತದೆ. ಇಂದಿಗೂ ಸಚಿನ್ ರನ್ನು ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳು ಭಾರತದಲ್ಲಿದ್ದಾರೆ.

5 – ಹಾರ್ದಿಕ್ ಪಾಂಡ್ಯ : ದೀರ್ಘಕಾಲದಿಂದ ಭಾರತ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಕೂಡ ಬಹಳ ಜನಪ್ರಿಯ ಆಟಗಾರ ಮತ್ತು ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರನ್ನು ಪ್ರತಿ ತಿಂಗಳು ಸುಮಾರು 3.68 ಲಕ್ಷ ಬಾರಿ ಹುಡುಕಲಾಗುತ್ತದೆ. ಐಪಿಎಲ್ ನಲ್ಲೂ ಫೇಮಸ್ಸಾಗಿರುವ ಅವರಿಗೂ ಸಾಕಷ್ಟು ಅಭಿಮಾನಿ ವರ್ಗ ಇದೆ.

6 – ಯುವರಾಜ್ ಸಿಂಗ್ : ಸಿಕ್ಸರ್ ಕಿಂಗ್ ಎಂದು ಕರೆಯಲ್ಪಡುವ ಜನಪ್ರಿಯ ಆಟಗಾರ ಯುವರಾಜ್ ಸಿಂಗ್ ಜನಪ್ರಿಯತೆಯ ವಿಷಯದಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು ದೀರ್ಘಕಾಲದವರೆಗೆ ಕ್ರಿಕೆಟ್ ತೊರೆದಿದ್ದಾರೆ. ಆದರೆ ಅನೇಕ ಭಾರತೀಯರು ಇನ್ನೂ ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ. ತಿಂಗಳಲ್ಲಿ ಸರಾಸರಿ 3.48 ಲಕ್ಷ ಬಾರಿ ಅವರ ಬಗ್ಗೆ ಹುಡುಕಲಾಗುತ್ತದೆ.
-Team Infotrend