ಆಟದಲ್ಲಷ್ಟೇ ಅಲ್ಲ, ಆಟದ ನಂತರವೂ ಧೋನಿಗೆ ಧೋನಿಯೇ ಸಾಟಿ! ಅವರ ಈ ನಿರ್ಧಾರ ಅವರ ಮೇಲಿನ ಪ್ರೀತಿ ಇಮ್ಮಡಿಯಾಗುವಂತೆ ಮಾಡಿತು!
ಕರೋನಾ ವೈರಸ್ ಹರಡಿದ ಕಾರಣ ಬಿಸಿಸಿಐ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಅದರ ನಂತರ ತಂಡದ ಎಲ್ಲ ಆಟಗಾರರು ಅವರವರ ಮನೆಗಳಿಗೆ ಮರಳುತ್ತಿದ್ದಾರೆ. ಏತನ್ಮಧ್ಯೆ ಸಿಎಸ್ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿರ್ಧಾರ ಎಲ್ಲರನ್ನೂ ಪುಳಕಿತಗೊಳಿಸಿತು.
ಸಿಎಸ್ಕೆ ಆಟಗಾರರೆಲ್ಲರೂ ಮನೆಗೆ ಹಿಂದಿರುಗುವವರೆಗೂ ನಾನು ಮನೆಗೆ ಹೋಗುವುದಿಲ್ಲ ಎಂದು ಧೋನಿ ನಿರ್ಧರಿಸಿದ್ದಾರೆ! ಅವರು ಕೊನೆಯದಾಗಿ ಹೋಟೆಲ್ ಅನ್ನು ತೊರೆಯುತ್ತೇನೆ ಎಂಬುದು ಇದರರ್ಥ. ಸಿಎಸ್ಕೆ ತಂಡವು ವಿದೇಶಿ ಆಟಗಾರರನ್ನು ಸಹ ಒಳಗೊಂಡಿದೆ. ಧೋನಿ ಅವರ ಈ ನಿಲುವು ಎಲ್ಲರನ್ನೂ ಅಚ್ಚರಿಗೆ ದೂಡಿತು.
ಮೊದಲು ವಿದೇಶಿ ಆಟಗಾರರನ್ನು ಮನೆಗೆ ಕಳುಹಿಸಬೇಕು ಎಂದು ಧೋನಿ ಹೇಳುತ್ತಾರೆ. ನಂತರ ಭಾರತೀಯ ಆಟಗಾರರನ್ನು ಕಳುಹಿಸಬೇಕು. ಧೋನಿ ಇನ್ನೂ ದೆಹಲಿಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿರಲಿ. ನಿನ್ನೆ ಮಾತನಾಡಿದ ಸಿಎಸ್ಕೆ ಆಟಗಾರ ಮಹಿ ಭಾಯ್ ವಿದೇಶಿ ಆಟಗಾರರನ್ನು ಮೊದಲು ಮನೆಗೆ ತಲುಪಿಸಬೇಕೆಂದು ಬಯಸುತ್ತಾರೆ ಎಂದು ಹೇಳಿದರು.
ಇದರ ನಂತರ ಭಾರತೀಯ ಆಟಗಾರರು ಮನೆ ತಲುಪಲಿದ್ದಾರೆ, ಕೊನೆಗೆ ಧೋನಿ ರಾಂಚಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಾರೆ ಎಂಬುದು ಸಿಕ್ಕಿರುವ ಮಾಹಿತಿ. ಈ ಕಾರಣಕ್ಕೇ ಧೋನಿ ಎಲ್ಲರಿಗೂ ಇಷ್ಟವಾಗುವುದು. ಬರಿ ಪಂದ್ಯದಲ್ಲಿ ಮಾತ್ರವಲ್ಲ ಹೊರಗೂ ನಾಯಕತ್ವ ವಹಿಸಿಕೊಳ್ಳುವುದು ಧೋನಿ ಗುಣ, ಅದಕ್ಕೇ ಅವರಿಗೆ ಅವರೇ ಸಾಟಿ.
-Team Infotrend