ಮುದ್ದುಲಕ್ಷ್ಮೀ ಮನೆ ಮೇಲೆ ಪೊ’ಲೀ’ಸರ ದಾ’”ಳಿ : ಸ್ಥಳಿಯರು ಮಾಹಿತಿ ನೀಡಿದ್ದರು!

ಜನಪ್ರಿಯ ದಾರಾವಾಹಿ ಮುದ್ದುಲಕ್ಷ್ಮೀ ತಂಡಕ್ಕೆ ಇಂದು ಪೊ’ಲೀ’ಸರು ಶಾಕ್ ಕೊಟ್ಟಿದ್ದಾರೆ. ಸ್ಥಳಿಯರು ನೀಡಿದ ಮಾಹಿತಿ ಆಧರಿಸಿ ಮುದ್ದುಲಕ್ಷ್ಮೀ ಶೂಟಿಂಗ್ ನಡೆಯುವ ಮನೆ ಮೇಲೆ ದಾ’”ಳಿ ಮಾಡಲಾಗಿದೆ. ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದ್ದರೂ ಮುದ್ದು ಲಕ್ಷ್ಮಿ ಚಿತ್ರತಂಡ ಶೂಟಿಂಗ್ ಕಾರ್ಯದಲ್ಲಿ ನಿರತವಾಗಿತ್ತು ಎನ್ನಲಾಗಿದೆ.

ಬೆಂಗಳೂರುನ ಜ್ಞಾನಭಾರತಿ  ಪೊ’ಲೀ’ಸ್ ಠಾಣೆ ವ್ಯಾಪ್ತಿಯಲ್ಲಿ  ದಾ’”ಳಿ ನಡೆದಿದ್ದು, ಪೊಲೀಸರು ದಿಡೀರ್ ದಾ’”ಳಿ ನಡೆಸಿ ಮನೆಯೊಳಗೆ ಪರಿಶೀಲನೆ ನಡೆಸಿದರು. ಮನೆಯಲ್ಲಿ ಚಿತ್ರತಂಡ ಇತ್ತಾದರೂ, ನಾವು ಶೂಟಿಂಗ್ ಮಾಡುತ್ತಿಲ್ಲ, ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಕೊರೊನ ಹಾ’ವ’ಳಿಯಿಂದ ತತ್ತರಿಸಿರುವ ರಾಜ್ಯದಲ್ಲಿ ಮೊದಲು ಅರ್ದ ಲಾಕ್ ಡೌನ್ ಮಾಡಿತ್ತಾದರೂ, ಅದರಿಂದ ಪ್ರಯೋಜನವಾಗದಿದ್ದಾಗ ಕಂಪ್ಲೀಟ್ ಲಾಕ್ ಡೌನ್ ಮಾಡಲಾಯಿತು. ಇದರಿಂದ ರಾಜ್ಯ ಸಂಪೂರ್ಣ ಸ್ತಬ್ದವಾಯಿತು. ಆಗ ಅಸೊಸಿಯೇಶನ್ ಕೂಡ ಎಲ್ಲ ಚಿತ್ರೀಕರಣ ನಿಲ್ಲಿಸುವಂತೆ ಹೇಳಿತು.

ಅದರಂತೆ ಈಗ ರಾಜ್ಯದ ಎಲ್ಲ ದಾರಾವಾಹಿಗಳ ಚಿತ್ರೀಕರಣ ನಿಂತಿದೆ. ಸಿನೆಮಾ ಶೂಟಿಂಗ್ ಕೂಡ ಎಲ್ಲೂ ನಡೆಯುತ್ತಿಲ್ಲ. ಅಷ್ಟೇ ಅಲ್ಲ, ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಕೂಡ ಅರ್ದಕ್ಕೇ ಮೊಟಕುಗೊಳಿಸಲಾಗಿದೆ. ಸೋಂಕು ತಗುಲುವ ಭೀತಿಯಿಂದಾಗಿ ಕಿರುತೆರೆಯ ಎಲ್ಲ ಕೆಲಸಗಳು ನಿಂತಿವೆ‌.

ಹೀಗಿರುವಾಗ ಮುದ್ದುಲಕ್ಷ್ಮಿ ತಂಡದವರು ಶೂಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ದಿನನಿತ್ಯ ನೋಡುತ್ತಿದ್ದ ಅಕ್ಕಪಕ್ಕದವರಿಗೆ ಶೂಟಿಂಗ್ ನಿಲ್ಲದಿರುವುದು ಗಮನಕ್ಕೆ ಬಂದು ಮಾಹಿತಿ ನೀಡಿದ್ದಾರೆ, ಅದರಂತೆ ಪೊ’ಲೀಸರು ಬಂದು ಪರಿಶೀಲನೆ ನಡೆಸಿ ಹೇಳಿಕೆ ಪಡೆಯುತ್ತಿದ್ದಾರೆ.

-Team Infotrend