ಟೇಕ್ ಆಫ್ ಸಮಯದಲ್ಲಿ ಮುರಿದು ಬಿದ್ದ ಏರ್ ಆಂಬ್ಯುಲೆನ್ಸ್ ಚಕ್ರ : ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ನ ವಿಡಿಯೋ ನೋಡಿ

ಮುಂಬೈನಲ್ಲಿ ಏರ್ ಆಂಬುಲೆನ್ಸ್ ತುರ್ತು ಲ್ಯಾಂಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೆಟ್ ಸರ್ವ್ ಏರ್ ಆಂಬ್ಯುಲೆನ್ಸ್‌ನಲ್ಲಿ ರೋಗಿಯೊಬ್ಬನನ್ನು ಅವರ ಸಂಬಂಧಿಕರು ಕರೆದೊಯ್ಯುತ್ತಿದ್ದರೆಂದು ಹೇಳಲಾಗುತ್ತಿದೆ. ಇವರಲ್ಲದೆ ಅದರಲ್ಲಿ ಅವರ ಏಳು ವೈದ್ಯರೂ ಇದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಏರ್ ಆಂಬುಲೆನ್ಸ್ ರಾತ್ರಿ 9 ಗಂಟೆಗೆ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೊದಲ್ಲಿ, ವಿಮಾನ ಲ್ಯಾಂಡ್ ಆಗುವಾಗ ಚಕ್ರದ ಬಳಿಯಿಂದ ಕಿಡಿಗಳು ಹಾರುವುದನ್ನು ನಾವಯ ನೋಡಬಹುದು. ಕರ್ಕಶ ಧ್ವನಿಗಳು ಕೂಡ ಕೇಳಿಬರುತ್ತಿವೆ. ಆದರೆ ಪೈಲೆಟ್ ಚಾಕಚಕ್ಯತೆ ಹಾಗೂ ಅದೃಷ್ಟದ ಪರಿಣಾಮ ಏನೂ ದುರಂತವಾಗದೇ ವಿಮಾನ ಸೇಫಾಗಿ ಕೆಳಗಿಳಿಯಿತು.

ಈ ವೀಡಿಯೊದಲ್ಲಿ ಎಮರ್ಜೆನ್ಸಿ ಟೀಮ್ ನ ಅಗ್ನಿಶಾಮಕ, ವೈದ್ಯಕೀಯ ಸಿಬ್ಬಂದಿಗಳು ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವುದನ್ನು ನೀವು ನೋಡಬಹುದು. ಜೆಟ್ ಸರ್ವ್ ಏವಿಯೇಷನ್ ​​ಸಿ -90 ವಿಮಾನವು ನಾಗ್ಪುರದಿಂದ ಆಂಬ್ಯುಲೆನ್ಸ್ ವಿಮಾನವಾಗಿ ಕಾರ್ಯನಿರ್ವಹಿಸುತ್ತಿದೆ.

ನಾಗ್ಪುರದಿಂದ ವಿಮಾನ ಟೇಕಾಫ್ ಆದ ಕೂಡಲೇ ಅದರ ಒಂದು ಚಕ್ರ ಮುರಿದು ನೆಲದ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಪೈಲಟ್ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ವಿಮಾನದೊಳಗಿನ ಎಲ್ಲರೂ ಸುರಕ್ಷಿತವಾಗಿದ್ದಾರೆ.

-Team Infotrend