ಮುಂಬೈ ಬೀದಿಗಳಲ್ಲಿ ಸೈಕಲ್ ಸವಾರಿ ಮಾಡಿದ ರಣಬೀರ್ ಕಪೂರ್; ‘ಈ’ ಸೈಕಲ್ ಬೆಲೆ ಕೇಳಿ ಶಾಕ್ ಆದ ಜನ!
ನಟ-ನಟಿಯರಿಗೆ ಏನು ಕಮ್ಮಿ ದುಬಾರಿಯಾದ ಕಾರುಗಳಲ್ಲಿ ತಿರುಗಾಡುವುದನ್ನು ನೋಡುತ್ತೇವೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರು ಸೈಕಲ್ ಮೇಲೆ ಸುತ್ತಾಡುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ರಣಬೀರ್ ಕಪೂರ್ ಅವರಿಗೆ ಈ ಸ್ಟೈಲ್ ನಲ್ಲಿ ನೋಡಿದವರು ತಮ್ಮ ಕಣ್ಣುಗಳ ಮೇಲೆ ವಿಶ್ವಾಸವೇ ಇಡುತ್ತಿಲ್ಲ. ನೋಡಿದವರಲ್ಲಿ ಕೆಲವರಂತೂ ತಕ್ಷಣ ಸೈಕಲ್ ಸವಾರಿ ಮಾಡುತ್ತಿರುವ ರಣಬೀರ್ ಕಪೂರ್ ಅವರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ರಣಬೀರ್ ಕಪೂರ್ ಅವರು ತಮ್ಮ ತಾಯಿಯ ಜೊತೆಗೆ ಅಜ್ಜನ ಮನೆಗೆ ಹೋಗಿದ್ದರು. ಶೋಮ್ಯಾನ್ ಹೆಸರಿನಿಂದಲೇ ಪ್ರಸಿದ್ಧರಾದ ದಿ. ರಾಜ್ ಕಪೂರ್ ಅವರ ಮನೆಗೆ ರಣಬೀರ್ ಅವರು ಸೈಕಲ್ ಮೇಲೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಯಾವುದೇ ವಾಹನವನ್ನು ಉಪಯೋಗಿಸದೆ ಡೈರೆಕ್ಟ್ ತನ್ನ ಕೆಂಪು ಬಣ್ಣದ ಸೈಕಲ್ ಸವಾರಿಯನ್ನೇ ಮಾಡಲು ಇಷ್ಟ ಪಟ್ಟಿದ್ದಾರೆ. ಅಜ್ಜನ ಮನೆಯಲ್ಲಿ ಸದ್ಯಕ್ಕೆ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದೆ.

ಈ ಫೋಟೋದಲ್ಲಿ ಅವರು ಮುಖಕ್ಕೆ ಮಾಸ್ಕ ಧರಿಸಿ ಕೋವಿಡ್ 19 ನಿಯಮಗಳನ್ನು ಪಾಲಿಸುತ್ತಲೇ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಸದ್ಯ ಸೈಕಲ್ ಮೇಲಿನ ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
ಇನ್ನು ಅವರು ಉಪಯೋಗಿಸುತ್ತಿರುವ ಈ ಸೈಕಲ್ ಬಗ್ಗೆ ಹೇಳುವುದಾದರೆ ಈ ಸೈಕಲ್ eco-friendly ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೋಪನ್ ಹೆಗನ್ ಹೆಸರಿನ ಸೈಕಲ್ ಕಂಪನಿ ಇದಾಗಿದೆ. ಈ ಸೈಕಲ್ ನ ವಿಶೇಷವಾದ ವೈಶಿಷ್ಟ್ಯವೇನೆಂದರೆ ಇದನ್ನು ಫೋಲ್ಡ್ ಮಾಡಲು ಬರುತ್ತದೆ. ಮತ್ತು ಈ ಸೈಕಲ್ ಬೆಲೆಯು 1 ಲಕ್ಷ 46 ಸಾವಿರ ರೂಪಾಯಿಗಳಷ್ಟಿದೆ.
ಈ ಫೋಟೋ ಮೀಡಿಯಾದಲ್ಲಿ ನೋಡಿದ ನಂತರ ರಣಬೀರ್ ಕಪೂರ್ ಅವರ ಫ್ಯಾನ್ಸ್ ಗಳು ಮತ್ತು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅವರು ಸೈಕಲ್ ಮೇಲೆ ಸಂಚರಿಸಿದ ನಂತರ ಸ್ವಲ್ಪವೇ ಸಮಯದಲ್ಲಿ ಅವರ ಈ ಫೋಟೋಗಳು ಮೀಡಿಯಾದಲ್ಲಿ ತುಂಬಾ ವೈರಲ್ ಆಗಿವೆ.