Video : ನಾನು ನಿನ್ನ ನೌಕರಳಲ್ಲ! ಏರ್ ಹೋಸ್ಟೆಸ್ ಮತ್ತು ಪ್ರವಾಸಿಯ ಮಧ್ಯೆ ಚಲಿಸುವ ವಿಮಾನದಲ್ಲಿ ವಾಗ್ವಾದ; ಕಾರಣ ನೋಡಿ…
ಕೆಲವರು ವಿಮಾನದಲ್ಲಿ ಸೇವೆಯನ್ನು ನೀಡುವ ಗಗನಸುಂದರಿಯರಿಗೆ ತಮ್ಮ ಸೇವೆಯನ್ನು ಮಾಡುವ ನೌಕರರಂತೆ ಕಾಣುತ್ತಾರೆ. ಇದೇ ಕಾರಣದಿಂದಾಗಿ ಚಲಿಸುವ ವಿಮಾನದಲ್ಲಿಯೇ ಏರ್ ಹೋಸ್ಟೆಸ್ ಜೊತೆಗೆ ಪ್ರವಾಸಿಗನೊಬ್ಬನ ಜಗಳವಾಗಿದೆ. ಪ್ರಸ್ತುತ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಸ್ತುತ ವಿಮಾನ ಇಸ್ತಾಂಬೂಲ್ ನಿಂದ ದೆಹಲಿಯ ಕಡೆಗೆ ಬರುತ್ತಿತ್ತು. ಫ್ಲೈಟ್ ನಲ್ಲಿ ನೀಡುತ್ತಿರುವ ಆಹಾರದ ಕಾರಣದಿಂದಾಗಿ ಈ ಜಗಳ ಶುರುವಾಯಿತು ಎಂದು ತಿಳಿದು ಬಂದಿದೆ. ವಾದ ವಿವಾದದಲ್ಲಿ ಪ್ರವಾಸಿಗ ಏರ್ ಹೋಸ್ಟೆಸ್ ಗೆ ನೌಕರ ಎಂದು ಸಂಭೋಧಿಸಿದ್ದಾನೆ. ಇದೇ ಕಾರಣದಿಂದಾಗಿ ಏರ್ ಹೋಸ್ಟೇಜ್ ಮತ್ತು ಪ್ರವಾಸಿಗ ಇಬ್ಬರ ಮಧ್ಯದಲ್ಲಿ ಜೋರಾಗಿ ವಾಗ್ವಾದ ನಡೆದಿದೆ. ಏರ್ ಹೊಸ್ಟೆಸ್ ಅದಕ್ಕೆ ಉತ್ತರವಾಗಿ ನಾನು ನಿನ್ನ ನೌಕರಳಲ್ಲ ನಾನು ಈ ವಿಮಾನದಲ್ಲಿ ಕೆಲಸ ಮಾಡುವ ಉದ್ಯೋಗಿ. ವಿಡಿಯೋ ವೈರಲ್ ಆದ ನಂತರ ಇಂಡಿಗೋ ಸಹ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಇಂಡಿಗೋ ನೀಡಿದ ತನ್ನ ಪ್ರತಿಕ್ರಿಯೆಯಲ್ಲಿ ಪ್ರವಾಸಿಗ ತಪ್ಪು ಶಬ್ದವನ್ನು ಬಳಕೆ ಮಾಡಿದ್ದಕ್ಕಾಗಿ ಈ ವಿವಾದ ಹುಟ್ಟಿದೆ ಎಂದು ಹೇಳಿಕೆ ನೀಡಿದೆ.
ಕ್ಯಾಬಿನ್ ಕ್ರೂ ಪ್ರವಾಸಿಗರಿಗೆ ಊಟ ನೀಡುವ ಸಂದರ್ಭದಲ್ಲಿ ಈ ವಿವಾದ ಹುಟ್ಟಿತು. ಇಲ್ಲಿ ಪ್ರವಾಸಿಗನೊಬ್ಬ ನೇರ ಗಗನಸುಂದರಿಯ ತನಿಖೆ ಮಾಡಲು ಶುರು ಮಾಡಿದ. ಆಗ ಗಗನಸುಂದರಿ ಪ್ರವಾಸಿಗನನ್ನು ಶಾಂತವಾಗಿಸಲು ಮೊದಲು ನಮ್ರತೆಯಿಂದ ಮಾತನಾಡಲು ಪ್ರಯತ್ನಿಸಿದ್ದಾಳೆ. ಪ್ರವಾಸಿಗ ಮಾತ್ರ ಅದನ್ನು ಕೇಳದೆ ತನ್ನದೇ ಕಿರಿಚಾಡುವುದನ್ನು ಮುಂದುವರಿಸಿದ್ದ. ಆಗ ಗಗನಸುಂದರಿ ನೀವು ಮಾತನಾಡುವ ಈ ಪದ್ಧತಿ ಸರಿಯಾಗಿಲ್ಲ ಈ ರೀತಿ ನೀವು ನಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಈ ಜಗಳ ಹೆಚ್ಚುತ್ತಾ ಹೋಗಿರುವುದು ಕಂಡುಬರುತ್ತದೆ.
ನೋಡಿ ಈ ವಿಡಿಯೋ…
Tempers soaring even mid-air: "I am not your servant"
An @IndiGo6E crew and a passenger on an Istanbul flight to Delhi (a route which is being expanded soon with bigger planes in alliance with @TurkishAirlines ) on 16th December : pic.twitter.com/ZgaYcJ7vGv
— Tarun Shukla (@shukla_tarun) December 21, 2022