ನಾಸಾದ ಖಗೋಳಶಾಸ್ತ್ರಜ್ಞರು ಏಲಿಯನ್ಸ್ ಕುರಿತಾಗಿ ನೀಡಿದ ಸಂಚಲನ ಮಾಹಿತಿ : 5 ಗ್ಯಾಲಕ್ಸಿಗಳಿಂದ ಭೂಮಿಯ ಸಂಪರ್ಕಕ್ಕೆ ನಡೆದಿದೆ ಪ್ರಯತ್ನ!

ಏಲಿಯನ್ಸ್ ಅಥವಾ ಅನ್ಯಗ್ರಹ ವಾಸಿಗಳು ಎನ್ನುವ ವಿಷಯವು ಯಾವಾಗಲೂ ಒಂದು ಕುತೂಹಲವನ್ನು ಕೆರಳಿಸುತ್ತದೆ. ನಿಜವಾಗಿಯೂ ಅನ್ಯಗ್ರಹ ವಾಸಿಗಳು ಇದ್ದಾರೆಯೇ? ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಅನ್ಯಗ್ರಹ ವಾಸಿಗಳ ಕುರಿತಾಗಿ ವೈವಿದ್ಯಮಯ ಪಾತ್ರಗಳನ್ನು ಸೃಷ್ಟಿ ಮಾಡಿರುವುದರಿಂದ ಒಂದು ರೀತಿಯಲ್ಲಿ ನಮ್ಮ ಮನಸ್ಸಿನಲ್ಲಿ ಅನ್ಯಗ್ರಹ ವಾಸಿಗಳು ಎಂದರೆ ಅಂತಹುದೇ ಇರಬೇಕು ಎನ್ನುವ ಕಲ್ಪನೆಯು ಮೂಡಿದೆ‌‌.

ಆದ್ದರಿಂದಲೇ ಅನ್ಯಗ್ರಹ ವಾಸಿಗಳ ವಿಷಯ ಬಂದಾಗಲೆಲ್ಲ ಅದನ್ನು ತಿಳಿಯಲು ಹಾತೊರೆಯುತ್ತೇವೆ. ಇದೇ ವಿಷಯವಾಗಿ ಹಲವು ವರ್ಷಗಳಿಂದಲೂ ವಿಜ್ಞಾನಿಗಳು ಸಹಾ ಅನ್ಯಗ್ರಹ ವಾಸಿಗಳ ಅಸ್ತಿತ್ವದ ಕುರಿತಾಗಿ ಸ್ಪಷ್ಟವಾದ ಮಾಹಿತಿ ಹಾಗೂ ಸಾಕ್ಷ್ಯಗಳ ಸಂಗ್ರಹದಲ್ಲಿ ಬಹಳಷ್ಟು ಸಂಶೋಧನೆ ಹಾಗೂ ಪ್ರಯೋಗಗಳನ್ನು ಮಾಡುತ್ತಿದ್ದಾರೆ‌‌.

ಕಳೆದ ಕೆಲವು ಸಮಯದಿಂದಲೂ ಅಮೆರಿಕಾದ ಸೈನ್ಯಾಧಿಕಾರಿಗಳು ಏಲಿಯನ್ಸ್ ವಿಚಾರದಲ್ಲಿ ಅಮೇರಿಕಾ ಬಹಳಷ್ಟು ವಿಚಾರಗಳನ್ನು ಮರೆಮಾಚುತ್ತಿದ್ದೆ ಎಂದೂ, ಅದು ಹೆಚ್ಚು ವಿಷಯಗಳನ್ನು ಹೊರಗೆ ಬರಲು ಬಿಡುತ್ತಿಲ್ಲ ಎನ್ನುವ ವಿಚಾರಗಳನ್ನು ಬಹಿರಂಗ ಪಡಿಸುತ್ತಿರುವುದು ಸಾಮಾನ್ಯ ವಿಷಯ ಎನಿಸಿದೆ‌‌.

ಈಗ ಇವೆಲ್ಲವುಗಳ ಬೆನ್ನಲ್ಲೇ ನಾಸಾ ಏಲಿಯನ್ಸ್ ಕುರಿತಾಗಿ ಸಂಚಲನ ಹುಟ್ಟಿಸುವಂತಹ ಒಂದು ಹೊಸ ಸಂಶೋಧನೆಯನ್ನು ಮಾಡಿದೆ ಎನ್ನುವ ಮಾಹಿತಿಯೊಂದು ಹೊರಬಂದಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಾಸಾದ ವಿಜ್ಞಾನಿಗಳು ಕೆಲವು ದಿನಗಳ ಹಿಂದೆ ತಮಗೆ ಕೆಲವು ರಹಸ್ಯಮಯ ಎನಿಸುವಂತಹ ರೇಡಿಯೋ ಸಿಗ್ನಲ್ ಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಅಲ್ಲದೆ ವಿಚಾರದಲ್ಲಿ ತಮ್ಮದೇ ಇದುವರೆಗೆ ದೊರಕಿರುವ ಅಥವಾ ರೆಕಾರ್ಡ್ ಆಗಿರುವ ರೇಡಿಯೋ ಸಿಗ್ನಲ್ ಗಳಲ್ಲಿ ಹೆಚ್ಚು ಶಬ್ದವನ್ನು ಹೊಂದಿರುವ ರೇಡಿಯೋ ಸಿಗ್ನಲ್ ಗಳಾಗಿವೆ ಎನ್ನುವ ಕುತೂಹಕಾರಿ ವಿಷಯ ತಿಳಿಸಿದ್ದಾರೆ. ತಮಗೆ ಬಂದಿರುವ ಈ ಹೊಸ ರೇಡಿಯೋ ಸಿಗ್ನಲ್ ಗಳು 5 ಬೇರೆ ಬೇರೆ ಗೆಲಕ್ಸಿಗಳಿಂದ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ನಾಸಾದ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್ ಗಳನ್ನು ಡಿಕೋಡ್ ಮಾಡುವ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ ಎನ್ನಲಾಗಿದೆ. ಈಗ ಯಾವ ಗೆಲಾಕ್ಸಿಗಳಿಂದ ರೇಡಿಯೋ ಸಿಗ್ನಲ್ ಗಳನ್ನು ಖಗೋಳಶಾಸ್ತ್ರಜ್ಞರು ಪಡೆದಿದ್ದಾರೆಯೋ ಅವುಗಳನ್ನು ಗೆಲಕ್ಸಿ ಯನ್ನು ಕಳೆದ ವರ್ಷವಷ್ಟೇ ಕಂಡುಹಿಡಿಯಲಾಗಿತ್ತು.

ಅವುಗಳಿಗೆ ಮ್ಯಾಗ್ನೆಟರ್ಸ್ ಎನ್ನುವ ಹೆಸರನ್ನು ಸಹಿತ ನೀಡಲಾಗಿದೆ. ಇವುಗಳ ಹುಟ್ಟು ನೂರಾರು ವರ್ಷಗಳ ಹಿಂದೆ ಅಂತರಿಕ್ಷದಲ್ಲಿ ಸೂರ್ಯನಿಗಿಂತ ದೊಡ್ಡ ಗಾತ್ರದ ನಕ್ಷತ್ರಗಳು ಪತನವಾದಾಗ ಉಂಟಾಗಿದೆ ಎಂದು ಹೇಳಲಾಗಿದೆ. ಆಗ ಅವುಗಳು ಸಣ್ಣಸಣ್ಣ ನಕ್ಷತ್ರಗಳಾಗಿ ರೂಪುಗೊಂಡಿದ್ದು, ಅವುಗಳ ಕಾಂತ ಕ್ಷೇತ್ರವು ಪ್ರಬಲವಾಗಿದ್ದು, ಖಗೋಳಶಾಸ್ತ್ರಜ್ಞರು ಪ್ರಸ್ತುತ ಅವುಗಳಿಂದಲೇ ದೊಡ್ಡ ಶಬ್ದಗಳು ಬರುತ್ತಿದೆ ಎಂದು ಹೇಳಿದ್ದಾರೆ.

ಖಗೋಳಶಾಸ್ತ್ರಜ್ಞರು ರೇಡಿಯೋ ಸಿಗ್ನಲ್ ಗಳು ಖಚಿತವಾಗಿ ಅನ್ಯಗ್ರಹ ವಾಸಿಗಳಿಂದ ಬಂದಿವೆ ಎಂದು ನಂಬುತ್ತಿದ್ದಾರೆ. ಅನ್ಯಗ್ರಹ ವಾಸಿಗಳು ಭೂಮಿಯನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸಿಗ್ನಲ್ ಗಳು ದೊರೆತ ನಂತರ ಅನ್ಯಗ್ರಹ ವಾಸಿಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಂಡಕ್ಕೆ ಬಹಳಷ್ಟು ಉತ್ಸಾಹ ದೊರೆತಿದೆ.

ಅವರು ಈ ರೇಡಿಯೋ ಸಿಗ್ನಲ್ ಗಳ ಡಿಕೋಡಿಂಗ್ ಮಾಡುವ ಕೆಲಸದಲ್ಲಿ ಹೆಚ್ಚು ಹುರುಪಿನಿಂದ ತೊಡಗಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಸಹ ವಿಶ್ವದ ಅನ್ಯ ರಾಷ್ಟ್ರಗಳು ಅಮೇರಿಕಾ ಅನ್ಯಗ್ರಹ ವಾಸಿಗಳು ಹಾಗೂ ಯು ಎಫ್ ಓ ಕುರಿತಾಗಿ ಸುಳ್ಳುಗಳನ್ನು ಹೇಳುತ್ತಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದವು. ಈಗ ಪ್ರಸ್ತುತ ನಾಸಾಗೆ ದೊರೆತಿರುವ ರೇಡಿಯೋ ಸಿಗ್ನಲ್ ಗಳ ಮೂಲಕ ಅತಿಶೀಘ್ರದಲ್ಲೇ ಪ್ರಮುಖ ವಿಚಾರಗಳು ತಿಳಿಯಬಹುದು ಎಂದು ಹೇಳಲಾಗುತ್ತಿದೆ.
-Team Infotrend