ಲೇಡಿ ಸೂಪರ್ ಸ್ಟಾರ್ ನಯನತಾರಾ ಕೋವಿಡ್ ಲಸಿಕೆ ಪಡೆಯದೇ ಸುಮ್ನೆ ಫೋಟೊಗೆ ಪೋಸ್ ಕೊಟ್ಟರಾ? ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ಕಾಲಿವುಡ್ ನ ಭಾರಿ ಬೇಡಿಕೆಯ ನಟಿ ನಯನತಾರಾ ಚೆನೈನ ಆಸ್ಪತ್ರೆಯೊಂದರಲ್ಲಿ ಲಸಿಕೆ ಪಡೆದಿದ್ದರು, ಅವರ ಜೊತೆಗೆ ಅವರ ಪ್ರೇಮಿ ವಿಘ್ನೇಶ್ ಶಿವನ್ ಕೂಡ ಲಸಿಕೆ ಹಾಕಿಸಿಕೊಂಡಿದ್ದರು. ಆದರೂ ಈಗ ನಯನತಾರಾ ಟ್ರೋಲ್ ಆಗುತ್ತಿದ್ದಾರೆ. ಕಾರಣ ನಯನತಾರಾ ಫೋಟೊದಲ್ಲಿ ಇಂಜೆಕ್ಷನ್ನೇ ಕಾಣುತ್ತಿಲ್ಲ! ಸುಮ್ಮನೇ ಇಂಜೆಕ್ಷನ್ ಹಿಡಿದ ಹಾಗೆ ಕೈ ಮಾಡಿದ್ದಾರೆ. ಅದನ್ನು ಕೂಡ ಅಬ್ಸರ್ವ್ ಮಾಡಿರುವ ಜನ ಈಗ ಟ್ರೋಲ್ ಮಾಡತೊಡಗಿದ್ದಾರೆ!
ಲಸಿಕೆ ಹಾಕಿಸಿಕೊಂಡ ನಂತರ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಪ್ ಲೋಡ್ ಮಾಡಿದ ನಟಿ ನಯನತಾರಾ ‘ಪ್ಲೀಸ್ ಲಸಿಕೆ ಹಾಕಿಸಿಕೊಳ್ಳಿ’ ಎಂದು ಜನರಲ್ಲಿ ವಿನಂತಿ ಕೂಡ ಮಾಡಿದ್ದರು. ಆದರೆ ಈಗ ಅವರೇ ಹಾಕಿಸಿಕೊಂಡಿಲ್ಲ ಎಂಬ ಗುಲ್ಲು ಎದ್ದಿದೆ. ಲಸಿಕೆ ನೀಡುತ್ತಿರುವ ನರ್ಸ್ ಕೈಯಲ್ಲಿ ಇಂಜೆಕ್ಷನ್ನೇ ಕಾಣುತ್ತಿಲ್ಲ, ಅಲ್ಲೂ ಕೂಡ ಲಸಿಕೆ ಪಡೆದಂತೆ ನಟಿಸಿದರಾ ನಯನತಾರಾ ಎಂದು ಜನ ಟ್ರೋಲ್ ಮಾಡತೊಡಗಿದ್ದಾರೆ.
ಈ ಟ್ರೋಲ್ ನಯನತಾರಾ ವರೆಗೆ ಕೂಡ ತಲುಪಿ “ಟೀಂ ನಯನತಾರಾ” ದವರು ಸ್ಪಷ್ಟನೆ ಕೊಟ್ಟಿದ್ದಾರೆ. ನೆಟ್ಟಿಗರು ವಾದಿಸುತ್ತಿರುವುದರಲ್ಲಿ ಹುರುಳಿಲ್ಲ, ನರ್ಸ್ ಕೈಯಲ್ಲಿ ಇಂಜೆಕ್ಷನ್ ಇದೆ, ನಯನತಾರಾ ಲಸಿಕೆ ಪಡೆದಿದ್ದಾರೆ ಎಂದು ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೂ ಜನರಿಗೆ ಈ ಬಗ್ಗೆ ಖಚಿತತೆ ಸಿಗುತ್ತಿಲ್ಲ, ಈಗ ಆಸ್ಪತ್ರೆಯವರು ಸ್ಪಷ್ಟಪಡಿಸುವದಷ್ಟೇ ಉಳಿದಿದೆ!
ಈ ಹಿಂದೆ ಕೂಡ ಹಲವರು ಲಸಿಕೆ ಹಾಕಿಸಿಕೊಳ್ಳುವ ಹಾಗೆ ನಟಿಸಿ ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇನ್ನಿಲ್ಲದಂತೆ ಟ್ರೋಲ್ ಆಗಿದ್ದರು. ಆ ಸಾಲಿಗೆ ಈಗ ನಯನತಾರಾ ಕೂಡ ಸೇರಿದ್ದಾರೆ. ಇಷ್ಟಕ್ಕೂ ಲಸಿಕೆ ಹಾಕಿಸಿಕೊಳ್ಳುವುದು ಬಿಡುವುದು ಅವರ ವೈಯಕ್ತಿಕ ವಿಚಾರ, ಅದನ್ನು ಕೇಳಲು ನಾವ್ಯಾರು ಎಂದು ಕೂಡ ಅವರ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ.

ಆದರೆ, ಅವರೊಬ್ಬ ಪಬ್ಲಿಕ್ ಪರ್ಸನ್, ಜನ ಅವರನ್ನು ಫಾಲೊ ಮಾಡುತ್ತಾರೆ, ಅದೂ ಅಲ್ಲದೇ ಲಸಿಕೆ ಹಾಕಿಸಿಕೊಳ್ಳಲು ಜನರಿಗೆ ಅವರು ಮನವಿ ಮಾಡಿರುವುದರಿಂದ ನಾವು ಅವರ ಲಸಿಕೆ ಬಗ್ಗೆ ಸತ್ಯಾಸತ್ಯತೆ ಕೇಳುತ್ತಿದ್ದೇವೆ ಅಷ್ಟೆ ಎಂದು ನೆಟ್ಟಿಗರು ವಾದಿಸಿದ್ದಾರೆ. ಅವರ ವಿಚಾರ ಬಿಡಿ, ಲಸಿಕೆ ಸಿಕ್ಕಾಗ ನೀವು ಹಾಕಿಸಿಕೊಳ್ಳಲು ಮರೆಯಬೇಡಿ.
-Team Infotrend