Video: NCC ಯಲ್ಲಿ ಅರಳಿದ ಸಂಕ್ರಾಂತಿ: ಪರೇಡ್ ಮಾಡುವಾಗ’ ಸಜ್ಜಿ ರೊಟ್ಟಿ ಪುಂಡಿ ಪಲ್ಲೆ’ ಎಂದು ಹೇಳಿದ ಎನ್ ಸಿಸಿ ತಂಡ!!

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.

ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.

ರೀಲ್ಸ್ ಮಾಡುವದು ಇದೊಂದು ಪ್ರಕಾರದ ಹವ್ಯಾಸವೇ ಆಗಿದೆ. ಇಂದು ಪ್ರತಿಯೊಬ್ಬರೂ ಮೊಬೈಲ್ ಹೊಂದಿದ್ದಾರೆ, ಮೊಬೈಲ್ ಇದ್ದ ಮೇಲೆ ರೀಲ್ಸ್ ಮಾಡಲೇ ಬೇಕು ಅನ್ನೋ ವಿಚಾರ ಸದ್ಯದಲ್ಲಿ ಚಾಲ್ತಿಯಲ್ಲಿದೆ. ಇಂದು ಒಬ್ಬ ಸಾಧಾರಣ ವ್ಯಕ್ತಿ ಹಿಡಿದು ಪ್ರಸಿದ್ಧ ವ್ಯಕ್ತಿಗಳು ಸಹ ರೀಲ್ಸ್ ಮಾಡುವಲ್ಲಿ ಬ್ಯುಸಿ ಯಾಗಿದ್ದಾರೆ. ರೀಲ್ಸ್ ಇದೊಂದು ವೀಡಿಯೋದ ತುಣುಕಾಗಿರುತ್ತದೆ. ಯಾವುದೇ ಒಂದು ಸನ್ನಿವೇಶ ಅಥವಾ ಹಾಡು, ಡೈಲಾಗ್ ಗಳಿಗೆ ಆಕ್ಟ್ ಮಾಡಿ ಅದನ್ನು ಪೋಸ್ಟ್ ಮಾಡುವದು. ಹೀಗಾಗಿ ಕಂಟೆಂಟ್ ಸೂಪರ್ ಹೊಂದಿರುವ ವಿಡಿಯೋ ಮತ್ತು ಉತ್ತಮವಾಗಿ ಆಕ್ಟ್ ಮಾಡಿರುವ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು, ಶಾಲೆಯಲ್ಲಿ ಒಂದು ಎನ್ಸಿಸಿ ತಂಡ ಪರೇಡ್ ನ ಪ್ರಾಕ್ಟೀಸ್ ಮಾಡುತ್ತಿರುತ್ತೆ. ಸಾಮಾನ್ಯವಾಗಿ ಎಲ್ಲರೂ ಪರೇಡ್ ಮಾಡುವುದು ಎಕ್ ದೋ ಎಕ್ ಅಂದರೆ ಇಲ್ಲಿ ಮಾತ್ರ ಇವರು ಬೇರೇನೇ ಹೇಳಿದ್ದಾರೆ. ಅವರು ಮಾಡಿರುವ ಪರೇಡ್ ನೋಡಿದರೆ ಇವರು ತುಂಬಾನೇ ಸಂಸ್ಕಾರಿ ಎನ್ಸಿಸಿ ತಂಡದವರು ಅನಿಸುತ್ತೆ. ಅಷ್ಟಕ್ಕೂ ಅವರು ಪರೇಡ್ ಮಾಡುವಾಗ ಹೇಳಿದ್ದೇನೆಂದರೆ, ಅವರು ಏಕ್ ದೋ ಬದಲಾಗಿ ಸಜ್ಜಿ ರೊಟ್ಟಿ ಪುಂಡಿ ಪಲ್ಲೇ ಅಂತ ಹೇಳಿದ್ದಾರೆ. ಅವರು ಹೇಳಿರುವ ರೀತಿ ನೋಡಿದರೆ ನಿಜವಾಗಿಯೂ ಸೂಪರ್ ಅನಿಸುತ್ತೆ. ಈ ವೀಡಿಯೋ ನೋಡಿ ನೆಟ್ಟಿಗರು ಇವರಿಗೆ ‘ಸಂಕ್ರಾಂತಿ ಹಬ್ಬದ ನೆನಪು ಬಂದಿರಬಹುದು’ ಅಂದಿದ್ದಾರೆ.

ವೀಡಿಯೋ ನೋಡಿ.

ಈ ಎನ್ಸಿಸಿ ತಂಡದ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಬ್ಯಾಕ್ ಬೆಂಚರ್ ಜೀವನ್ ಎಂಬ ಹೆಸರಿನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ರಷ್ಟು ನೆಟ್ಟಿಗರು ವೀಕ್ಷಣೆ ಮಾಡಿದ್ದಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.