ಸಾವನ್ನಪ್ಪಿದ ಶಿಕ್ಷಕನನ್ನು ಎಲೆಕ್ಷನ್ ಡ್ಯೂಟಿಗೆ ಹಾಕಲಾಯಿತು! ಬರಲಾರದ್ದಕ್ಕೆ ಶಿಸ್ತು ಕ್ರಮ ತಗೆದುಕೊಳ್ಳುವ ನೋಟೀಸ್ ಕೂಡ ಕಳಿಸಲಾಯಿತು!
ಇಂಥದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಪಂಚಾಯತ್ ಉಪಚುನಾವಣೆಗಾಗಿ ಶಿಕ್ಷಕರೊಬ್ಬರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಒಂದೂವರೆ ತಿಂಗಳ ಹಿಂದೆಯೇ ಕೊರೋನದಿಂದ ಮೃ’ತಪಟ್ಟಿದ್ದರು. ಇನ್ನು ವಿಷಾಧಕರ ಸಂಗತಿಯೆಂದರೆ, ಅವರು ಮೊದಲು ಚುನಾವಣಾ ಕರ್ತವ್ಯ ನಿರ್ವಹಿಸಿದ್ದಕ್ಕಾಗಿಯೇ ಸೋಂಕು ಅಂಟಿಸಿಕೊಂಡು ಸಾ’ವನ್ನಪ್ಪಿದ್ದರು.
ಆದರೆ ಇದಾವುದನ್ಜು ಅಲ್ಲಿಯ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಗಮನಿಸಿಲ್ಲ. ಸ’ತ್ತವರನ್ನೇ ಮತ್ತೆ ಚುನಾವಣೆ ಕೆಲಸಕ್ಕೆ ನಿಯೋಜಿಸಿದ್ದಾರೆ. ಯಾರಾದರೂ ನೌಕರ ಸಾವನ್ನಪ್ಪಿದರೆ ಆಯಾ ಇಲಾಖೆ ಈ ಬಗ್ಗೆ ತಿಳಿದುಕೊಂಡು ಮುಂದಿನ ಕೆಲಸ ಮಾಡುತ್ತಾರೆ. ಅವರ ಮನೆಯವರು ಕೂಡ ಇಲಾಖೆಗೆ ಈ ವಿಷಯ ತಿಳಿಸಿ ನೌಕರನ ಸಾ’ವಿನ ನಂತರ ಇಲಾಖೆ ಮಾಡಬಹುದಾದ ಕೆಲಸಕ್ಕೆ ಸಹಕರಿಸುತ್ತಾರೆ.
ಆದರೆ ಇಲ್ಲಿ ಇಲಾಖೆಗೆ ತಿಳಿದಿದ್ದರೂ ಅದು ದಿವ್ಯ ನಿರ್ಲಕ್ಷ್ಯ ವಹಿಸಿದೆ. ತನ್ನ ಇಲಾಖೆಯ ಯಾವ ನೌಕರನನ್ನು ಚುನಾವಣೆ ಕೆಲಸಕ್ಕೆ ಹಾಕಬಹುದು ಅನ್ನುವ ಲಿಸ್ಟನ್ನು ಆಯಾ ಇಲಾಖೆ ಜಿಲ್ಲಾಡಳಿತಕ್ಕೆ ನೀಡುತ್ತವೆ. ಆಗ ಶಿಕ್ಷಣ ಇಲಾಖೆ ಒಂದೂವರೆ ತಿಂಗಳ ಹಿಂದೆಯೇ ಮೃ’ತಪಟ್ಟ ನೌಕರನ ಹೆಸರನ್ನೂ ಕೊಟ್ಟಿದೆ.

ಅಷ್ಟೇ ಅಲ್ಲ, ಚುನಾವಣೆ ಕೆಲಸಕ್ಕೂ ಮೊದಲು ಅವರಿಗೆ ತರಬೇತಿ ಕೊಡಬೇಕಾಗಿತ್ತು, ಆಗ ಅವರು ತರಬೇತಿಗೆ ಬರಲಾರದಿದ್ದಾಗಲಾದರೂ ಇಲಾಖೆ ಯಾಕಿರಬಹುದು ಅಂತ ಯೋಚಿಸಿಲ್ಲ. ಒಂದೇ ಸಲಕ್ಕೆ ನಿಮ್ಮ ಮೇಲೆ ಯಾಕೆ ಕ್ರಮ ತಗೆದುಕೊಳ್ಳಬಾರದು ಅಂತ ಕಾರಣ ಕೇಳಿ ನೋಟಿಸು ಕೊಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿನ ಝಾನ್ಸಿಯ ಪಂಚಾಯತ್ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಇವರಿಗೆ ಆದೇಶ ನೀಡಲಾಗಿತ್ತು, ಶನಿವಾರ ಅಲ್ಲಿ ಚುನಾವಣೆ ಇತ್ತು. ಹೀಗಾಗಿ ಅಲ್ಲಿನ ಸಹಶಿಕ್ಷಕ ಸೌರವ್ ಕುಮಾರ್ ತಲೈಯಾ ರವರನ್ನು ಎಲೆಕ್ಷನ್ ಡ್ಯೂಟಿಗೆ ಕರೆ ಬಂದಿತ್ತು. ಅವರನ್ನು ಝಾನ್ಸಿಯ ವಿಕಾಸಖಂಡ್ ಮೌಠ್ ಪೋಲಿಂಗ್ ಬೂತ್ ಗೆ ಮುಖ್ಯ ಪೋಲಿಂಗ್ ಆಫೀಸರ್ ಆಗಿ ಹಾಕಲಾಗಿತ್ತು.

ಈ ವಿಷಯದ ಬಗ್ಗೆ ಶಿಕ್ಷಕರ ಮನೆಯವರು ಆ’ಕ್ರೋ’ಶಗೊಂಡು ಪ್ರತಿಕ್ರಿಯೆ ನೀಡತೊಡಗಿದ ಮೇಲೆ ಇಲಾಖೆಗೆ ತಮ್ಮ ತಪ್ಪಿನ ಅರಿವಾಗಿದೆ. ನೌಕರ ಸ’ತ್ತರೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಇಲಾಖೆ ಒದಗಿಸಬೇಕು. ಸಂಬಳವನ್ನು ನಿಲ್ಲಿಸಿ ಪಿಂಚಣಿ ಸುರು ಮಾಡಬೇಕು. ಆದರೆ ಇವರನ್ನು ನೋಡಿದರೆ ನಿರಂತರವಾಗಿ ಸಂಬಳ ಕೊಡ್ತಾ ಹೋಗುತ್ತಿದ್ದರು ಅನಿಸುತ್ತದೆ!
ಮೊದಲೇ ಎಲೆಕ್ಷನ್ ಡ್ಯೂಟಿ ಮಾಡಿ ಕೊರೊನ ಅಂಟಿಸಿಕೊಂಡು ಮೃ’ತಪಟ್ಟಿರುವಶಿಕ್ಷಕನಿಗೆ ಮತ್ತದೇ ಎಲೆಕ್ಷನ್ ಡ್ಯೂಟಿ ಹಾಕಿದರೆ ಅವರ ಮನೆಯವರಿಗೆ ಹೇಗಾಗಿರಬೇಡ? ಈ ಕಾರಣಕ್ಕಾಗೇ ಈಗ ಎಲ್ಲ ಕಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿರುವುದು.
-Team Infotrend