‘Never give up’ ಅನ್ನೊದಕ್ಕೆ ಈ ವೀಡಿಯೋಗಿಂತ ಮತ್ತೊಂದು ಉದಾಹರಣೆ ಬೇಕಾಗಿಲ್ಲ, ನೋಡಿ ವೈರಲ್ ವಿಡಿಯೋ!!
ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಬೇಕಾದರೆ ಅದರ ಹಿಂದಿನ ಲಾಭದ ಕುರಿತು ಸರಿಯಾಗಿ ಅಭ್ಯಾಸ ಮಾಡಿಯೇ ಕೆಲಸ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕೆಲವೊಂದು ಕೆಲಸಗಳಿಂದ ಲಾಭದ ಹೊರತಾಗಿ ಹಾನಿ ಆಗುವದು ಎಂದು ಗುರುತ್ತಿದ್ದರು ಸಹ ಆ ಕೆಲಸ ಮಾಡುತ್ತೇವೆ ಏಕೆಂದರೆ ಆ ಕೆಲಸ ಮಾಡುವದು ಅನಿವಾರ್ಯ ವಾಗಿರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಉತ್ತಮವಾದ ಕೆಲಸ ನೋಡಿ ಉತ್ತಮವಾಗಿ ಸಂಪತ್ತು ಗಳಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಇದರ ಸಲುವಾಗಿ ಅವರು ದಿನವಿಡೀ ಕಷ್ಟಪಟ್ಟು ಅಭ್ಯಾಸ ಮಾಡುತ್ತಾರೆ ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಫಲ ಸಿಗದೆ ಇದ್ದಾಗ ಅವರು ಆ ಕುರಿತು ವಿಚಾರ ಮಾಡುವದೇ ಬಿಟ್ಟು ಬಿಡುತ್ತಾರೆ. ಆದರೆ ನಾವು ಸದಾ ಪ್ರಯತ್ನ ಮಾಡುತ್ತಿದ್ದರೆ ನಮಗೆ ಒಂದಲ್ಲ ಒಂದು ಸಲ ಯಶಸ್ಸು ದೊರೆಯುತ್ತದೆ. ನೇವರ್ ಗಿವ್ ಅಪ್ ಅನ್ನೋದಕ್ಕೆ ಈ ವೀಡಿಯೋ ನೆ ಸಾಕ್ಷಿ.
ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ಹಾವು ತನ್ನ ಬೇ#ಟೆಯಾದ ಕಪ್ಪೆಯನ್ನು ಹಿಡಿಯುತ್ತದೆ. ಆದರೆ ಕಪ್ಪೆ ಮಾತ್ರ ತುಂಬಾ ಬುದ್ಧಿವಂತಿಕೆಯಿಂದ ಹಾವಿನ ದವಡೆಯಿಂದ ಬಿಡಿಸಿಕೊಳ್ಳುತ್ತದೆ. ಹೇಗೆಂದರೆ, ಮೊದಲು ನೆಲದ ಮೇಲೆ ಅಂದರೆ ಹುಲ್ಲಿನ ಮೇಲೆ ಇದ್ದ ಕಪ್ಪೆಯನ್ನು ಹಾವು ಸಾವಕಾಶವಾಗಿ ಹೋಗಿ ಕಪ್ಪೆಯ ಕಾಲನ್ನು ತನ್ನ ಬಾಯಲ್ಲಿ ಹಿಡಿದು ಇನ್ನೇನು ಪೂರ್ಣ ಭಾಗವನ್ನು ತನ್ನ ಬಾಯಲ್ಲಿ ಹಾಕಿಕೊಳ್ಳಬೇಕು ಅನ್ನೋವಷ್ಟರಲ್ಲಿ ಕಪ್ಪೆ ಬಿದ್ಧಿವಂತಿಕೆಯಿಂದ ಹಾಗೆ ಮುಂದೆ ಮುಂದೆ ಹೋಗುತ್ತದೆ. ತನಗಿಂತ ಎಷ್ಟೋ ಪಟ್ಟು ಶಕ್ತಿಯುಳ್ಳ ಹಾವನ್ನು ಸಹ ಲೆಕ್ಕಿಸದೆ ತನ್ನ ಪ್ರಾಣವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಮನದಲ್ಲಿ ವಿಚಾರ ಮಾಡಿ ಕಪ್ಪೆ ಅಲ್ಲಿದ್ದ ಗೇಟ್ ಮೇಲೆ ಹತ್ತುತ್ತದೆ. ಆದರೂ ಸಹ ಹಾವು ಕಪ್ಪೆಯ ಕಾಲನ್ನು ಬಿಡುವದಿಲ್ಲ, ಕಪ್ಪೆಯು ಸಹ ತನ್ನ ಬಳಿಯಲ್ಲಿದ್ದ ಎಲ್ಲ ಶಕ್ತಿಯನ್ನು ಉಪಯೋಗಿಸಿ ಗೇಟ್ ಮೇಲೆ ಹತ್ತುತ್ತದೆ ಸತತವಾಗಿ ಪ್ರಯತ್ನ ಮಾಡುತ್ತಾ ಕಪ್ಪೆ ಗೇಟ್ ನ ಮೇಲೆ ಹಾಗೆ ಮುಂದೆ ಮುಂದೆ ಹೋಗುತ್ತದೆ ಕೊನೆಗೆ ಹಾವು ತುಂಬಾ ಆಯಾಸಾವಾಗಿ ಕಪ್ಪೆಯನ್ನು ಬಿಟ್ಟು ಬಿಡುತ್ತದೆ. ಆಗ ಕಪ್ಪೆ ಖುಷಿಯಿಂದ ಗೇಟ್ ಮೇಲೆ ಹತ್ತಿ ಅಲ್ಲಿಂದ ಪಲಾಯನ ಮಾಡುತ್ತದೆ. ನಾವು ಸತತವಾಗಿ ಪ್ರಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ ಅನ್ನೋದನ್ನು ಈ ವಿಡಿಯೋದಿಂದ ತಿಳಿದು ಬರುತ್ತದೆ.
ವಿಡಿಯೋ ನೋಡಿ.
Never give up 👌
VC:Fred pic.twitter.com/7rLSDZeNCx— Susanta Nanda IFS (@susantananda3) April 2, 2022
ಪ್ರಸ್ತುತ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಈ ವೀಡಿಯೋ ಇದುವರೆಗೂ ಲಕ್ಷಕ್ಕೂ ಹೆಚ್ಚಿ ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಕಪ್ಪೆಯ ಪ್ರಯತ್ನದ ಕುರಿತು ಕಾಮೆಂಟ್ ಸಹ ಮಾಡಿದ್ದಾರೆ.