ರಾತ್ರೋ ರಾತ್ರಿ ಹೊಸ ನಿರ್ಧಾರ ಮಾಡಿದ ಟಾಟಾ ಪವರ್ಸ್ : ಸೋಲಾರ್ ಉತ್ಪಾದನೆಯ ಪ್ರಮಾಣ 10 ಪಟ್ಟು ಹೆಚ್ಚಿಸಲು ಸಜ್ಜು!

ದೇಶದ ಒಂದು ದೊಡ್ಡ ಕಂಪನಿ ಎನಿಸಿರುವ ಟಾಟಾ ಸೋಲಾರ್ ಕಂಪನಿಯು ಒಂದು ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರಲ್ಲಿ ಈ ಕಂಪನಿಯು ತಂದ ಸೋಲಾರ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲು ಹೊರಟಿದೆ ಎಂದು ಟಾಟಾ ಅವರು ಹೇಳಿದ್ದಾರೆ. ಈ ನಿರ್ಧಾರದಿಂದ ಅವರು ಆಮದಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಹಾಗೂ ಸೋಲಾರ್ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡಬಹುದು ಎಂದು ಹೇಳಿದ್ದಾರೆನ್ನುವ ಈ ವಿಷಯಗಳನ್ನು ಟಾಟಾ ಪವರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದಂತಹ ಪ್ರವೀಣ್ ಸಿನ್ಹಾ ಅವರು ಸ್ವತಃ ಮೇ 25 ರಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಸಿನ್ಹಾ ಅವರು ಮಾತನಾಡುತ್ತಾ ನಾವು ನಮ್ಮ ಸೋಲಾರ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲಿದ್ದೇವೆ ಎಂದಿದ್ದು, ಇದರಿಂದ ವಿದೇಶಿ ಆಮದಿನ ಪ್ರಮಾಣ ವನ್ನು ಕಡಿಮೆ ಮಾಡಬಹುದು ಹಾಗೂ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.‌ ಅದೇ ವೇಳೆಯಲ್ಲಿ ಟಾಟಾ ಕಂಪನಿಯು ನವೀಕರಿಸಬಹುದಾದ ಇಂಧನದ ಮೇಲೆ ಹೆಚ್ಚು ಬಂಡವಾಳವನ್ನು ಹೂಡುತ್ತದೆ ಎಂದು ತಿಳಿಸಿದ್ದಾರೆ.‌ ಅಲ್ಲದೇ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತಮ್ಮ ಈಟಿಸಿ ಅಂದರೆ ಇಂಜಿನಿಯರಿಂಗ್ ಸ್ವಾಧೀನ ಮತ್ತು ನಿರ್ಮಾಣವು ಗಣನೀಯವಾಗಿ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಟಾಟಾ ಪವರ್ ಕಂಪನಿಯ ಹೆಚ್ಚಿನ ಮಾಹಿತಿಯ ಪ್ರಕಾರ ಈಗಾಗಲೇ ಸೋಲಾರ್ ಪವರ್ ನ ಅಭಿವೃದ್ಧಿಗಾಗಿ 9000 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.

ನಿರಂತರ ಸೋಲಾರ್ ಉತ್ಪಾದನೆಯಲ್ಲಿ ನಾವು ದುಪ್ಪಟ್ಟು ವೇಗದಿಂದ ಕೆಲಸವನ್ನು ಮಾಡುತ್ತಿದ್ದೇವೆ ಎಂದಿರುವ ಸಿನ್ಹಾ ಅವರು, ಇದರಿಂದಾಗಿ ದೇಶದೊಳಗೆ ಉದ್ಯೋಗವಕಾಶಗಳು ಕೂಡ ಹೆಚ್ಚಾಗುತ್ತಿದ್ದು, ಬರುವ ಐದರಿಂದ ಏಳು ವರ್ಷಗಳಲ್ಲಿ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚು ಮಾಡಲಾಗುವುದು ಎಂದಿದ್ದಾರೆ. ಅಲ್ಲದೇ ಈ ಹಣಕಾಸು ವರ್ಷದೊಳಗೆ 1200 ರಿಂದ 1300 ಮೆಗಾವ್ಯಾಟ್ ಸೌರ ಫಲಕಗಳನ್ನು ಚಾಲನೆ ಗೊಳಿಸಲಿದ್ದು, 500 ಮೆಗಾಬೈಟ್ ಸೋಲಾರ್ ಫಲಕಗಳನ್ನು ಮುಂಬರುವ ಮೂರು ತಿಂಗಳಲ್ಲಿ ಚಾಲನೆ ಮಾಡಲಾಗುವುದು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಾಟಾ ಕಂಪನಿಯ ಕೂಡಾ ಕಷ್ಟದಲ್ಲಿ ಇರುವುದನ್ನು ಗಮನಿಸಿದ್ದೇವೆ. ಆದರೆ ಅದರಲ್ಲಿ ಈಗಾಗಲೇ 9000 ಕೋಟಿಯನ್ನು ರಿಕವರಿ ಮಾಡಲಾಗಿದ್ದು, 45 ಸಾವಿರ ಕೋಟಿ ರೂಪಾಯಿ ಗಳಿಂದ 35 ಸಾವಿರ ಕೋಟಿ ರೂಪಾಯಿಗಳಿಗೆ ಅದು ಈಗ ತಲುಪಿದೆ. ಮುಂದಿನ ದಿನಗಳಲ್ಲಿ ಟಾಟಾ ಸೋಲಾರ್ ನ ಮೂಲಕ ವೈವಿಧ್ಯಮಯ ಹಾಗೂ ವಿವಿಧ ಬಗೆಯ ಸೋಲಾರ್ ಫಲಕಗಳನ್ನು ಉತ್ಪಾದನೆ ಮಾಡಲಾಗುವುದು. ಇದರಿಂದಾಗಿ ಶೇರುದಾರರಾಗಿರುವವರು ಉತ್ತಮ ಲಾಭವನ್ನು ಪಡೆದುಕೊಳ್ಳಲಿದ್ದಾರೆ ಎಂದು ಸಿನ್ಹಾ ತಿಳಿಸಿದ್ದಾರೆ.