ನಿಜ ಹೇಳಿ; ಈತ ಯಾರ ಫ್ರೆಂಡ್ ಅಂತ; 🤣 ಮದುವೇಲಿ ಅಣ್ಣ ಏರಿಸಿದ ಎಣ್ಣೆ; ನಡೆಯಲು ಬಾರದೆ ಅಂಬೆಗಾಲಿಡುವ ಪರಿಸ್ಥಿತಿ ಬಂತು.
ಮದುವೆಯ ವಿಡಿಯೋಗಳು ಎಲ್ಲ ರೀತಿಯ ನೆಟ್ಟಿಗರನ್ನು ಬಲವಂತವಾಗಿ ಕ್ಲಿಕ್ ಮಾಡಲು ಬದ್ಧ ಮಾಡುತ್ತವೆ. ಅಷ್ಟೊಂದು ಈ ದೃಶ್ಯಗಳು ಯೂಸರ್ಸ್ ಗಳನ್ನು ಸೆಳೆಯುತ್ತವೆ. ನಮ್ಮ ದೇಶದಲ್ಲಿ ಮದುವೆಯಲ್ಲಿ ಅಥವಾ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಕಂಡುಬರುವ ರೂಢಿ, ಪರಂಪರೆ, ಆಚರಣೆಗಳು ಜಗತ್ತಿನ ಯಾವ ದೇಶದಲ್ಲಿಯೂ ಕಂಡುಬರಲಿಕ್ಕಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೆ, ಊರಿಂದ ಊರಿಗೆ, ರಾಜ್ಯ ರಾಜ್ಯಗಳಲ್ಲಿ ಅನೇಕ ರೀತಿಯ ನೂರಾರು ಪ್ರಕಾರದ ವಿವಿಧ ಆಚರಣೆಗಳು, ಪದ್ಧತಿಗಳು ನೋಡಲು ಸಿಗುತ್ತವೆ.
ಆದರೆ ಇತ್ತೀಚೆಗೆ ಈ ಮದುವೆಯ ಸಮಾರಂಭಗಳಲ್ಲಿ ಎಲ್ಲಕಡೆಗೆ ಯುವಕರು ಅಥವಾ ಎಲ್ಲಾ ವರ್ಗದ ಜನರು ಎಣ್ಣೆಯನ್ನು ಹೊಡೆದು ಮದುವೆಯಲ್ಲಿ ವಿಜೃಂಭಿಸುವದು ತುಂಬಾ ಹೆಚ್ಚಾಗಿ ಹೋಗಿದೆ. ಮದುವೆಯಲ್ಲಿ ಸಂಬಂಧಿಕರು, ಹಿರಿಯರು ಮತ್ತು ಸ್ತ್ರೀಯರು ಹಾಗೂ ಚಿಕ್ಕ ಮಕ್ಕಳು ಇರುತ್ತಾರೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ.
ಹೀಗೆ ಕಂಠಪೂರ್ತಿ ಕುಡಿದು ಮದುವೆಯಲ್ಲಿ ಕುಣಿದಾಡಿ, ತೆಲಾಡಿ, ಓಲಾಡಿ ಕೆಲವೊಮ್ಮೆ ಜಗಳಗಳನ್ನು ಸಹ ತೆಗೆಯಲು ಹಿಂದೆ ಮುಂದೆ ನೋಡುವುದಿಲ್ಲ. ಆ ರೀತಿ ಕೆಟ್ಟ ಸೆಲೆಬ್ರೇಶನ್ ಆಗಿ ಹೋಗುತ್ತದೆ ಮದುವೆಯಲ್ಲಿ.
ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ನಿಮ್ಮ ಇಂಥ ಒಬ್ಬ ಮಿತ್ರನ ನೆನಪಂತೂ ತಂದೆ ತರುತ್ತದೆ. ಈ ರೀತಿಯ ಮಿತ್ರನಿಗೆ ನೀವು ಎಷ್ಟೇ ಸಲ ಹೇಳಿದರೂ ತನ್ನ ವರಸೆ ಬದಲಾಯಿಸದೆ
ಕಂಠಪೂರ್ತಿ ಕುಡಿದು ಮದುವೆಯಲ್ಲಿ ಎಲ್ಲರೂ ಆತನನ್ನೇ ಗಮನಿಸುವ ಹಾಗೆ ಮಾಡಿಕೊಳ್ಳುತ್ತಾನೆ.
ಇಲ್ಲಿಯೂ ಒಬ್ಬ ಅಣ್ಣ ಥೆಟ್ ಇದೇ ರೀತಿ ಮಾಡಿ ಈಗ ಇನ್ಸ್ಟಾಗ್ರಾಮ್ ನಲ್ಲಿ ಮಿಂಚುತ್ತಿದ್ದಾನೆ. ನೋಡಿ ಆತನ ಅವಸ್ಥೆ, ಸಹಜವಾಗಿ ನಡೆಯಲೂ ಬಾರದಾಗಿದೆ. ಆತ ತೊಟ್ಟಿರುವ ಡ್ರೆಸ್ ಗಳಿಗೆ ಆತ ಮಾಡಿದ ಕೆಲಸ ಸ್ವಲ್ಪವೂ ಶೋಭೆ ತರುತ್ತಿಲ್ಲ. ಅದರೊಳಗೆ ಬಹುಶಃ ಆ ಪುಟ್ಟ ಹುಡುಗ ಆತನ ಮಗನಾಗಿರಬೇಕು. ಮಗನಿಗೆ ತನ್ನ ತಂದೆಯ ಈ ಅವಸ್ಥೆಯನ್ನು ನೋಡಿ ಪಾಪ ಹೇಗಾಗಿರಬೇಡ ನೀವೇ ಹೇಳಿ. ಇಲ್ಲಿ ಗಮನಿಸುವ ವಿಷಯ ಏನೆಂದರೆ ಈತನಿಗೆ ಈ ಸಂದರ್ಭದಲ್ಲಿ ನಡೆಯಲು ಬಾರದೆ ಅಂಬೆಗಾಲಿಡುವ ಪರಿಸ್ಥಿತಿ ಎದುರಾಗಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇಂಟರ್ನೆಟ್ ನಲ್ಲಿ ತುಂಬಾ ವೇಗವಾಗಿ ವೈರಲ್ ಆಗುವುದರ ಜೊತೆಗೆ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ವೀಕ್ಷಣೆಯನ್ನು ಪಡೆದಿದ್ದು ಸುಮಾರು 2 ಲಕ್ಷ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.