ಸರಳತೆ ಮೆರೆಯುವ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾದ ನೀತಾ ಅಂಬಾನಿ: ಫೋಟೋಗ್ರಾಫರ್ ಗಳನ್ನು ಪ್ರೀತಿಯಿಂದ ಮಾತನಾಡಿಸಿದ ನೀತಾ
ಜಗತ್ತಿನ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ತನ್ನ ಐಶಾರಾಮೀ ಜೀವನ ಶೈಲಿ ಮತ್ತು ವಿಶಿಷ್ಟ ವ್ಯಕ್ತಿತ್ವದಿಂದಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದಲ್ಲದೇ ನೀತಾ ಅಂಬಾನಿ ತಮ್ಮ ಸಮಾಜ ಸೇವಾ ಕಾರ್ಯಗಳಿಂದಾಗಿ ಹಾಗೂ ವ್ಯವಹಾರಗಳಿಂದಾಗಿ ಕೂಡಾ ಸುದ್ದಿಯಾಗುತ್ತಲೇ ಇರುತ್ತಾರೆ. ಇಂತಹ ನೀತಾ ಅಂಬಾನಿ ಅವರು ಸದಾ ಜನರ ಜೊತೆ ಬಹಳ ಸರಳವಾಗಿ ಹಾಗೂ ಸ್ನೇಹ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ. ಇಂತಹ ಉದಾಹರಣೆಗಳನ್ನು ತೋರಿಸುವ ಹಲವು ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ನೋಡಲು ಸಿಗುತ್ತವೆ.
ನೀತಾ ಅಂಬಾನಿ ಕುರಿತಾದ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ನೀತಾ ಅಂಬಾನಿ ಅವರು ಒಂದು ಬಿಲ್ಡಿಂಗ್ ನ ಹೊರಗೆ ನಿಂತ ಫೋಟೋಗ್ರಾಫರ್ ಗಳನ್ನು ಮಾತನಾಡಿಸುತ್ತಾ, ನಿಮ್ಮೆಲ್ಲರ ಊಟವಾಯಿತೇ? ಎಂದು ಕೇಳಿರುವುದನ್ನು ನಾವು ಗಮನಿಸಬಹುದು. ನೀತಾ ಅಂಬಾನಿ ಅವರ ಸರಳತೆಯನ್ನು ತಿಳಿಸುತ್ತಿರುವ ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ನೀತಾ ಅಂಬಾನಿ ಅವರ ಸರಳತೆಯನ್ನು ನೋಡಿದ ನೆಟ್ಟಿಗರು ಬಹಳಷ್ಟು ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ನೀತಾ ಅಂಬಾನಿಯವರು ಯಾವುದೋ ಒಂದು ಕಟ್ಟಡದಿಂದ ಹೊರಗೆ ಬರುವುದನ್ನು ನಾವು ನೋಡಬಹುದಾಗಿದೆ.
ನೀತಾ ಅವರು ಕಟ್ಟಡದಿಂದ ಹೊರಗೆ ಬಂದಾಗ ಅಲ್ಲಿ ಫೋಟೋಗ್ರಾಫರ್ ಗಳು ಉಪಸ್ಥಿತರಿರುತ್ತಾರೆ. ನೀತಾ ಅಂಬಾನಿ ಅವರು ಫೋಟೋಗ್ರಫರ್ ಗಳ ಕಡೆಗೆ ನೋಡುತ್ತಾ ಬಹಳ ಆಪ್ಯಾಯತೆಯಿಂದ ನಗೆಯೊಂದನ್ನು ಬೀರಿ, ಅನಂತರ ಬಹಳ ಪ್ರೀತಿಯಿಂದ ಅವರನ್ನು, “ನಿಮ್ಮೆಲ್ಲರದ್ದು ಊಟ ಆಯಿತೇ??₹ ಎಂದು ಕೇಳಿದ್ದಾರೆ. ನೀತಾ ಅವರ ಪ್ರಶ್ನೆಗೆ ಉತ್ತರ ನೀಡಿದ ಫೋಟೋಗ್ರಾಫರ್ ಗಳು ಉತ್ತರ ನೀಡಿದ ಕೆಲವು ಕ್ಷಣಗಳ ನಂತರ ನೀತಾ ಅಲ್ಲಿಂದ ಹೊರಡುತ್ತಾರೆ. ನೀತಾ ಅಂಬಾನಿ ಅವರ ನಂತರ ಅದೇ ಬಿಲ್ಡಿಂಗ್ ನಿಂದ ಜಯಾ ಬಚ್ಚನ್ ಮತ್ತು ಶ್ವೇತ ಬಚ್ಚನ್ ಅವರು ಹೊರಗೆ ಬರುತ್ತಾರೆ.
ಹಾಗೆ ಹೊರಗೆ ಬಂದ ಜಯಾ ಬಚ್ಚನ್ ಅವರ ರಿಯಾಕ್ಷನ್ ನೀತಾ ಅವರು ಪೋಟೋಗ್ರಫರ್ ಗಳಿಗೆ ಕೊಟ್ಟ ರಿಯಾಕ್ಷನ್ ಗೆ ವಿ ರು ದ್ಧ ವಾಗಿತ್ತು. ಜಯಾ ಬಚ್ಚನ್ ಅವರು ಫೋಟೋಗ್ರಾಫರ್ ಗಳನ್ನು ಕುರಿತಾಗಿ, ನಿಮಗೆ ಯಾವ ಸಂದರ್ಭ ಏನು ಎನ್ನುವುದರ ಕುರಿತಾಗಿ ಸ್ವಲ್ಪವೂ ಜ್ಞಾನವಿಲ್ಲವೇ?? ನಿಮ್ಮ ಮನೆಗಳಲ್ಲಿ ಹೀಗೇನಾದರೂ ಆದರೆ ಆಗಲೂ ಹೀಗೆ ಮಾಡುವಿರಾ?? ಎಂದು ಅ ಸಮಾಧಾನವನ್ನು ಹೊರ ಹಾಕಿದ್ದಾರೆ. ವಿಡಿಯೋದಲ್ಲಿ ನೀತಾ ಅಂಬಾನಿ ಅವರು ಪತಿ ಮುಖೇಶ್ ಅಂಬಾನಿ, ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಅಂಬಾನಿ ಅವರೊಂದಿಗೆ ಮಕ್ಕಳಿಗೆ ಆಹಾರವನ್ನು ನೀಡುತ್ತಿರುವುದು ನಾವು ನೋಡಬಹುದು.
ಇದಲ್ಲದೇ ಆಕಾಶ್ ಮತ್ತು ಶ್ಲೋಕಾ ಅವರ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ನೀತಾ ಅಂಬಾನಿ ಅವರ ವಿಡಿಯೋ ಕೂಡಾ ವೈರಲ್ ಆಗಿದೆ, ಇದರಲ್ಲಿ ಅವರು ಅಲ್ಲಿಗೆ ಬಂದಿದ್ದಕ್ಕಾಗಿ ಛಾಯಾಗ್ರಾಹಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಶ್ರೀಮಂತ ಕುಟುಂಬಕ್ಕೆ ಸೇರಿದ್ದರೂ ಅವರು ತಮ್ಮ ಮಕ್ಕಳನ್ನು ಅತ್ಯಂತ ಸರಳ ರೀತಿಯಲ್ಲಿ ಬೆಳೆಸಿದ್ದಾರೆ ಎನ್ನುವುದು ನಿಜ. ಮಕ್ಕಳ ಶಾಲಾ ದಿನಗಳಲ್ಲಿ ನೀತಾ ಅಂಬಾನಿ ಐದು ರೂಪಾಯಿಗಳನ್ನು ಮಾತ್ರ ಮಕ್ಕಳ ಖರ್ಚಿಗೆ ನೀಡುತ್ತಿದ್ದರು ಎನ್ನುವ ವಿಷಯವನ್ನು ಸ್ವತಃ ಸಂದರ್ಶನದಲ್ಲಿ ನೀತಾ ಹಂಚಿಕೊಂಡಿದ್ದರು.