ಈ ಊರಿನಲ್ಲಿ ಇದುವರೆಗೆ ಒಂದೇ ಒಂದು ಕರೋನ ಕೇಸ್ ಕೂಡ ಬಂದಿಲ್ಲ! ಈ ಗ್ರಾಮದ ಜನತೆ ಏನೆಲ್ಲ ಪ್ಲಾನ್ ಮಾಡಿದರು ಗೊತ್ತಾ?

ಇಡೀ ಜಗತ್ತೇ ಕರೋನದಿಂದ ತತ್ತರಿಸಿ ಹೋಗಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಕರೋನ ವಾರಿಯರ್ಸ್ ಎಷ್ಟೇ ಪ್ರಯತ್ನ ಪಟ್ಟರೂ ಕರೋನ ಪಾಸಿಟಿವ್ ಕೇಸ್ ಗಳು ಹೆಚ್ಚುತ್ತಲೇ ಇವೆ, ಇಂಥದ್ರಲ್ಲಿ ಆ ಒಂದು ಊರಿನಲ್ಲಿ ಒಂದೇ ಒಂದು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿಲ್ಲವೆಂದರೆ ನೀವು ನಂಬಲೇಬೇಕು. ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಲು ಈ ಗ್ರಾಮದ ಜನತೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡರು ಎಂದು ನೋಡೋಣ ಬನ್ನಿ…

ಈ ಗ್ರಾಮ ಇರುವುದು ರಾಜಸ್ಥಾನದಲ್ಲಿ, ಅಲ್ಲಿ ಸಿಖರ್ ಜಿಲ್ಲೆಯ ಖಂಡೇಲಾ ಪ್ರಾಂತ್ಯದ ಸುಖಪುರ ಎಂದು ಆ ಊರಿನ ಹೆಸರು. ಇವರು ಹೋದ ವರ್ಷ ಸರ್ಕಾರ ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಿ ಹಲವಾರು ರೂಲ್ಸ್ ಮಾಡಿದಾಗ ಅವುಗಳನ್ನು ಸೀರಿಯಸ್ ಆಗಿ ತೆಗೆದುಕೊಂಡು ಯಾವುದೇ ಉಡಾಫೆ ಮಾಡದೇ ಕಟ್ಟುನಿಟ್ಟಾಗಿ ಪಾಲನೆ ಮಾಡಿದರು.

*ಮೊದಲನೆಯದಾಗಿ ಇವರು ತಮ್ಮ ಊರಿಗೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಬಿಟ್ಟರು.
*ಪರ ಊರಿಗೆ ಕೆಲಸಕ್ಕೆ ತೆರಳಿದವರು ಊರಿಗೆ ಬರಬೇಕಾದರೆ ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್ ಆಗಿಯೇ ಬರುವಂತೆ ನೋಡಿಕೊಂಡರು.
*ಅಪರಿಚಿತರು ಊರಿನೊಳಕ್ಕೆ ಬರುವುದನ್ನು ನಿಷೇಧಿಸಿದರು.
*ಊರಿನ ಹೊರಗೆ ಐಸೋಲೇಷನ್ ಕೇಂದ್ರ ಹಾಗೂ ಕ್ವಾರೆಂಟೈನ್ ಕೇಂದ್ರ ತೆರೆದು ಹೊರಗಿನಿಂದ ಬರುವ ಎಲ್ಲರಿಗೂ ಅಲ್ಲಿಯೇ ಎಲ್ಲರಿಗೂ ಊಟ ನೀರಿನ ವ್ಯವಸ್ಥೆ ಮಾಡುತ್ತಿದ್ದರು.
*ಊರಿಗೆ ಬರುತ್ತಿದ್ದ ಪ್ರತಿಯೊಂದು ರಸ್ತೆಗಳ ಮೂಲಕ ಹೊರಗೆ ಹೋಗುವ – ಒಳಗೆ ಬರುವ ಎಲ್ಲರ ಮೇಲೂ ನಿಗಾವಹಿಸುತ್ತಿದ್ದರು.
*ತಾವೇ ಚೆಕ್ ಪೋಸ್ಟ್ ಮಾಡಿಕೊಡು ಅಲ್ಲಿ ಇಬ್ಬರು ಯುವಕರು ನಿಂತು, ಮಾಸ್ಕ್ ಬಗ್ಗೆ ಎಚ್ಚರಿಕೆ ನೀಡಿ, ಕೈಗೆ ಸ್ಯಾನಿಟೈಸರ್ ಹಾಕಿ ಕಳಿಸುತ್ತಿದ್ದರು.
*ಗ್ರಾಮದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆ.
*ಪ್ರತಿ ಮನೆಯವರೂ ಸ್ಯಾನಿಟೈಝರ್ ಬಳಸುತ್ತಾರೆ.
*ಪದೇ ಪದೇ ಕೈ ತೊಳೆಯುತ್ತ ಸಾಮಾಜಿಕ ಅಂತರ ಕಾದುಕೊಳ್ಳುತ್ತಾರೆ.

*ಪ್ರತಿ ಮನೆಯ ಹೊರಗೆ ಒಂದು ಬಕೇಟ್ ನೀರು, ಸೋಪ್ ಇಟ್ಟಿರುತ್ತಾರೆ, ಕೆಲವರು ಸ್ಯಾನಿಟೈಸರ್ ಬಾಟಲ್ ಕೂಡ ಅಲ್ಲಿಯೇ ಇಟ್ಟಿರುತ್ತಾರೆ. ಮನೆಯೊಳಗೆ ಬರುವ ಮೊದಲು ಕೈ ತೊಳೆದುಕೊಳ್ಳಲೇಬೇಕು.
*ಒಟ್ಟಿನಲ್ಲಿ ಇಡೀ ಗ್ರಾಮವೇ ಒಗ್ಗಟ್ಟು ಪ್ರದರ್ಶಿಸಿ ಕರೋನ ಮಹಾಮಾರಿಯನ್ನು ಗೆದ್ದಿದೆ.

ಈಥರ ನಮ್ಮಲ್ಲೂ ಸಾಕಷ್ಟು ಗ್ರಾಮಗಳಲ್ಲಿ ಮಾಡಿದರಾದರೂ ಅದು ಕೆಲವೇ ಕೆಲವು ದಿನ ಮಾತ್ರ ಮಾಡಿ ನಂತರ ನಿರ್ಲಕ್ಷ್ಯ ಮಾಡಿದರು. ಆದರೆ ಅಲ್ಲಿ ಇಂದಿಗೂ ಈ ನಿಯಮ ಪಾಲನೆ ಆಗ್ತಿದೆ. ಅಲ್ಲಿನ ಗ್ರಾಮ ವಿಕಾಸ ಅಧಿಕಾರಿ ವೀರೇಂದ್ರ ಸಿಂಗ್ ಅವರ ಪ್ರಕಾರ ಈ ಗ್ರಾಮದ ಜನರು ಒಂದೇ ಒಂದು ಸಣ್ಣ ತಪ್ಪು ಕೂಡ ಮಾಡದೇ ಎಲ್ಲಾ ನೀತಿ ನಿಯಮಗಳನ್ನು ಪಾಲಿಸಿ ಇಡೀ ಜಗತ್ತೇ ಕರೋನದಿಂದ ತಲ್ಲಣಿಸುತ್ತಿರುವಾಗ ಈ ಗ್ರಾಮದಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗದ ಹಾಗೆ ಮಾಡಿದರು ಎಂದು ಹೆಮ್ಮೆ ಪಟ್ಟರು.

ಇದೆ ರೀತಿಯಲ್ಲಿ ಪ್ರತಿಯೊಂದು ಗ್ರಾಮ ನಗರಗಳು ಎಚ್ಚರಿಕೆವಹಿಸಿದ್ದೇ ಆದಲ್ಲಿ ಇಡೀ ಜಗತ್ತು ಕರೋನ ಮುಕ್ತವಾಗುವುದರಲ್ಲಿ ಸಂಶಯವಿಲ್ಲ. ಕೊರೊನ ಎಂದರೆ ಕಾಮಿಡಿ ಮಾಡುವವರಿಂದಾಗಿ ಇಂದು ಅದೆಷ್ಟೊ ಜನ ಪ್ರಾಣ ಬಿಟ್ಟರು, ರೂಲ್ಸ್ ಫಾಲೊ ಮಾಡದೇ ಸರ್ಕಾರಗಳ ಮೇಲೆ ಗೂಬೆ ಕೂರಿಸತೊಡಗಿದ್ದಾರೆ. ಕೊರೊನ ಮುಕ್ತ ಗ್ರಾಮದ ವಿಡಿಯೊ ಇಲ್ಲಿದೆ ನೋಡಿ…

-ಮಂಜುನಾಥ್