OMG! ಕೋಳಿ ಕದ್ದವರು ಯಾರೆಂದು ತಿಳಿಯಲು ಹಾಕಿದ ಟ್ರ್ಯಾಪ್ ಒಳಗೆ ಬಿದ್ದ ಜೀವಿಯನ್ನು ನೋಡಿ ತಬ್ಬಿಬ್ಬಾದ ನೆಟ್ಟಿಗರು!
ಸೋಶಿಯಲ್ ಮೀಡಿಯಾಗಳಲ್ಲಿ ಒಂದಲ್ಲಾ ಒಂದು ವೀಡಿಯೋ ವೈರಲ್ ಆಗ್ತಾನೇ ಇರುತ್ತೆ. ಕೆಲವು ವೀಡಿಯೋಗಳು ಬಹಳ ಅದ್ಭುತ ಎನಿಸಿದರೆ, ಇನ್ನೂ ಕೆಲವು ವೀಡಿಯೋಗಳನ್ನು ನೋಡಿದವರು ಇದೆಲ್ಲಾ ಫೇಕ್, ಇದೆಲ್ಲಾ ಎಡಿಟಿಂಗ್ ಎಂದು ಹೇಳುತ್ತಾರೆ. ಆದರೆ ವೀಡಿಯೋಗಳು ಮಾತ್ರ ಅದ್ಭುತವಾದ ಪ್ರತಿಕ್ರಿಯೆ ಪಡೆಯುವುದು ಮಾತ್ರವೇ ಅಲ್ಲ, ಭರ್ಜರಿ ವೈರಲ್ ಕೂಡಾ ಆಗುತ್ತವೆ. ನೋಡುಗನಿಗೆ ಕೂಡಾ ಮನರಂಜನೆ ನೀಡುತ್ತದೆ. ಇನ್ನು ವೀಡಿಯೋ ನಿಜ, ಸುಳ್ಳು ಅನ್ನೋ ಚರ್ಚೆಗಳನ್ನು ಕೂಡಾ ಹುಟ್ಟು ಹಾಕಿ, ಒಬ್ಬರು ಇನ್ನೊಬ್ಬರಿಗೆ ಶೇರ್ ಮಾಡೋ ಮೂಲಕ ಇನ್ನಷ್ಟು ಪ್ರಚಾರವನ್ನು ಇಂತಹ ವೀಡಿಯೋಗಳು ಪಡೆಯುವುದು ಕೂಡಾ ಉಂಟು.
ಈಗ ಕೂಡಾ ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡ್ತಾ ಇದೆ. ಈ ವೀಡಿಯೋ ಶೇರ್ ಆದ ಕೆಲವೇ ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ ಮಾಡಲ್ಪಟ್ಟಿದೆ. ಏಳು ಸಾವಿರಕ್ಕಿಂತ ಅಧಿಕ ಲೈಕ್ಸ್ ಬಂದಿದ್ದರೆ, ಸಾವಿರಕ್ಕಿಂತ ಅಧಿಕ ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಈ ವೀಡಿಯೋಗೆ ಕೂಡಾ ಪರ ಹಾಗೂ ವಿ ರೋ ಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನು ವೀಡಿಯೋ ವಿಷಯಕ್ಕೆ ಬಂದರೆ ಈ ವೀಡಿಯೋ ನೋಡಿದರೆ ಒಂದು ಕ್ಷಣಕ್ಕೆ ರೋಮಾಂಚನ ಆಡುತ್ತದೆ. ಕಾರಣ ಇಲಿಯನ್ನು ಹಿಡಿಯಲು ಹೋದರೆ ಹುಲಿ ಸಿಕ್ಕದರೆ ಏನಾಗಬೇಡ ಪರಿಸ್ಥಿತಿ, ಅಂತಹ ಪರಿಸ್ಥಿತಿಯನ್ನು ನಾವಿಲ್ಲಿ ನೋಡಬಹುದು.
ಹೌದು ವೀಡಿಯೋ ಶೇರ್ ಮಾಡಿರುವ ಟ್ವಿಟರ್ ಬಳಕೆದಾರರು ವಿಡಿಯೋ ಜೊತೆಗೆ ಶೀರ್ಷಿಕೆಯಲ್ಲಿ ಬಳಸಿದ ಸಾಲನ್ನು ನೋಡಿದಾಗ ಅವರು ಕೋಳಿಗಳನ್ನು ಕದಿಯುವವರು ಯಾರು? ಎಂದು ತಿಳಿಯಲು ಮಾಡಿರುವ ಒಂದು ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ನೀರು ತುಂಬಿದ ಒಂದು ಹಳ್ಳದ ಸುತ್ತಾ ಕಡ್ಡಿಗಳನ್ನು ನೆಟ್ಟು, ಅದರ ಒಂದು ಬದಿಯಲ್ಲಿ ಒಂದು ಡ್ರಮ್ ರೀತಿಯ ವಸ್ತುವನ್ನು ಇಟ್ಟು, ಇಲಿಯನ್ನು ಬೋನಿನಲ್ಲಿ ಹಿಡಿಯುವ ಹಾಗೆ ಹಿಡಿಯುವ ಎಲ್ಲಾ ತಂತ್ರವನ್ನು ಅಳವಡಿಸಿ ಸಜ್ಜುಗೊಳಿಸಿದ್ದಾರೆ. ಆದರೆ ಈ ಬೋನಿಗೆ ಬಿದ್ದ ಜೀವಿಯನ್ನು ನೋಡಿ ನೆಟ್ಟಿಗರು ಹೌಹಾರಿ ಹೋಗಿದ್ದಾರೆ.
ಏಕೆಂದರೆ ಅವರು ಕೋಳಿ ಹಿಡಿಯಲು ಹಾಕಿದ ಬಲೆಗೆ ಸಿಕ್ಕಿದ್ದು ಯಾವುದೋ ಪ್ರಾಣಿಯಲ್ಲ, ಬದಲಿಗೆ ಒಂದು ವಿಶಾಲ ಕಾಯದ, ನೋಡಿದೊಡನೆ ಭ ಯವನ್ನು ಹುಟ್ಟಿಸುವ ಅನಕೊಂಡ ಗಾತ್ರದ ಹಾವು. ಈ ಭೀ ಕರ ಹಾವು ನೀರಿನಲ್ಲಿ ಹರಿದು ಬಂದು, ಆ ಡ್ರಮ್ ಒಳಗೆ ಬಾಯಿಟ್ಟ ಕೂಡಲೇ ಅದು ಸಿಕ್ಕಿ ಹಾಕಿಕೊಂಡು ತನ್ನ ವಿಶಾಲವಾದ ದೇಹವನ್ನು ಅಲ್ಲಾಡಿಸುತ್ತಿದ್ದರೆ ನೋಡುಗನ ಎದೆಯಲ್ಲಿ ಒಂದು ನಡುಕು ಹುಟ್ಟುವುದು ಸಹಜ. ಈ ಗಾತ್ರದ ಹಾವೇ? ಎಂದು ಕೆಲವರು ಉದ್ಗಾರ ತೆಗೆದರೂ ತೆಗೆಯಬಹುದು. ಒಟ್ಟಾರೆ ವೀಡಿಯೋ ಮಾತ್ರ ಒಂದು ಸಂಚಲನ ಮಾತ್ರ ಸೃಷ್ಟಿಸಿದೆ.
Trying to catch who’s been stealing the chickens… pic.twitter.com/kGbsXgnMY6
— Nature is Scary (@NatureisScary) November 19, 2020
ಕೆಲವರು ವೀಡಿಯೋ ನೋಡಿ ಇದು ಎಡಿಟ್ ಮಾಡಿರೋ ವೀಡಿಯೋ ಎಂದು ನಿಜವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಹಾವನ್ನು ದೊಡ್ಡದಾಗಿ ಕಾಣುವಂತೆ ವೀಡಿಯೋದಲ್ಲಿ ಟ್ರಿಕ್ ಮಾಡಲಾಗಿದೆ ಎಂದಿದ್ದಾರೆ. ಆದರೆ ಕೆಲವರು ಈ ವೀಡಿಯೋ ಟ್ರಿಕ್ ಇದ್ದರೂ ಇರಬಹುದು ಆದರೆ ಬ್ರೆಜಿಲ್ ನಲ್ಲಿ ಇಂತಹ ಹಾವುಗಳು ಬೇಕಾದಷ್ಟಿದೆ ಎಂದು ಕೂಡಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಬಹಳ ಚೆನ್ನಾಗಿದೆ ಹಾವನ್ನು ಹೇಗೆ ಟ್ರ್ಯಾಪ್ ಮಾಡಿದರು ಎಂದು ಪ್ರಶ್ನೆ ಕೂಡಾ ಮಾಡಿದ್ದಾರೆ. ವೀಡಿಯೋ ಮನರಂಜನೆ ಮಾತ್ರ ಚೆನ್ನಾಗಿ ನೀಡುತ್ತಿದೆ.