Omg! ಚಲಿಸುತ್ತಿರುವ ಟ್ರೇನ್ ನಲ್ಲಿ ಮಹಿಳೆಯ ಡೆಲಿವರಿ ಮಾಡಿದ TTE!

ನೀವು ರೈಲಿನಲ್ಲಿ ಪ್ರವಾಸ ಮಾಡುವಾಗ ಟಿಟಿಇ ಹಣ ತಗೆದುಕೊಂಡು ಸೀಟ್ ಕೊಟ್ಟಿದ್ದಾರೆ ಮತ್ತು ಯಾವುದೇ ಯಾತ್ರಿಕರ ಜೊತೆ ದುರ್ವ್ಯವಹಾರ ಮಾಡಿದ್ದಾರೆ ಎಂಬುದು ಎಷ್ಟೋ ಸಲ ಕೇಳಿರಬಹುದು. ಆದರೆ ಎಂದಾದರೂ ಕಷ್ಟದಲ್ಲಿ ಸಿಲುಕಿಕೊಂಡವರಿಗಾಗಿ ವೈದ್ಯ ಅಥವಾ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ ಎಂಬುದು ನೀವು ಕೇಳಿರಲಿಕ್ಕಿಲ್ಲ. ನಡೆದದ್ದು ಏನೆಂದರೆ, ಒಂದು ಟ್ರೈನ್ ನಲ್ಲಿ ಡಾಕ್ಟರ್ ಉಪಲಬ್ಧವಿರದ ಕಾರಣ ಗರ್ಭಿಣಿ ಮಹಿಳೆಯ ಹೆರಿಗೆಯನ್ನು ಸ್ವತಃ ಟಿಟಿಇ ಯವರೇ ಮಾಡಿದ್ದಾರೆ. ಇವರ ಸಹಾಯದಿಂದ ಮಹಿಳೆ ಯಾತ್ರಿ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ.

ರೇಲ್ವೆಯ ದೆಹಲಿ ವಿಭಾಗದ ಟಿಟಿಇ ಎಚ್ಎಸ್ ರಾಣಾ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯು ನೋವಿನಿಂದ ಬಳಲುತ್ತಿದ್ದಾರೆ ಅವರಿಗೆ ವೈದ್ಯರ ಅವಶ್ಯಕತೆಯಿದೆ ಎಂದು ತಿಳಿದುಬಂದಿತು. ತಕ್ಷಣ ಅವರು ಟಿಕೆಟ್ ಪಟ್ಟಿಯಿಂದ ಇಡೀ ರೈಲಿನಲ್ಲಿ ವೈದ್ಯ ಪ್ರಯಾಣಿಕರ ಬಗ್ಗೆ ಪತ್ತೆಹಚ್ಚಿದರು. ಆದರೆ ರೇಲ್ವೆಯಲ್ಲಿ ಯಾವುದೇ ವೈದ್ಯ ಪ್ರಯಾಣಿಕರು ಇರುವದು ಕಂಡುಬರಲಿಲ್ಲ.

ಗರ್ಭಿಣಿ ಮಹಿಳಾ ಪ್ರವಾಸಿಯ ಹೆಚ್ಚುತ್ತಿರುವ ತೊಂದರೆಯನ್ನು ನೋಡಿದ ಟಿಟಿಇ ಸ್ವತಃ ಸಹಾಯ ಮಾಡಬೇಕೆಂದು ನಿರ್ಧರಿಸಿ ತಕ್ಷಣ ಆಕೆಯಿದ್ದ ಬೋಗಿಯನ್ನು ತಲುಪಿದರು. ಟಿಟಿಇ ರಾಣಾ ಮತ್ತು ಇತರ ಪ್ರಯಾಣಿಕರ ಸಹಾಯದಿಂದ ಗರ್ಭಿಣಿ ಮಹಿಳಾ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದಳು, ನಂತರ ಇಡೀ ರೈಲಿನಲ್ಲಿ ಸಂತೋಷದ ಅಲೆಯೇ ಹರಿಯಿತು.

ಟಿಟಿಇ ಎಚ್‌ಎಸ್ ರಾಣಾ ಅವರ ಈ ಕಾರ್ಯವನ್ನು ರೈಲ್ವೆ ಸಚಿವಾಲಯವು ಹೊಗಳಿದೆ ಮತ್ತು ಅವರನ್ನು ಶ್ಲ್ಯಾಘಿಸುತ್ತಲೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ, “ತೊಂದರೆಯ ಸಮಯದಲ್ಲಿ ಅವರ ದಯೆ ಮತ್ತು ಮಾನವೀಯತೆಯ ಈ ಉಪಕ್ರಮವು ನಮಗೆ ಹೆಮ್ಮೆ ತಂದಿದೆ”.

ಟಿಟಿಇ ಯವರ ಈ ಕಾರ್ಯವನ್ನು ಸಾಮಾನ್ಯ ಜನರು ಸಾಮಾಜಿಕ ಮಾಧ್ಯಮದಲ್ಲಿ ಹೊಗಳುತ್ತಿದ್ದಾರೆ. ರೈಲ್ವೆ ವಿಭಾಗ ಸಾಮಾನ್ಯವಾಗಿ ಕಳಪೆ ಸೇವೆ ನೀಡುವದು ಎಂದು ಗೋಗರೆಯುವ ಜನರು ಇಂದು ಈ ಘಟನೆಯು ಭಾರತೀಯ ರೇಲ್ವೆಯ ಬಗ್ಗೆ ಜನರಲ್ಲಿ ಗೌರವವನ್ನು ಸೃಷ್ಟಿಸಿದೆ.