OMG! ಜಲ ಸಮಾ-ಧಿಯಾದ 43 ಜನ ಮತ್ತು 6000 ಹಸುಗಳಿರುವ ಜಪಾನಿ ಕಾರ್ಗೋ ಶಿಪ್!

ಸಮುದ್ರಯಾನದ ಹಡಗುಗಳು ಭಾರೀ ಗಾತ್ರವನ್ನು ಹೊಂದಿರುವುದು ಮಾತ್ರವೇ ಅಲ್ಲದೇ ಭಾರೀ ಪ್ರಮಾಣದಲ್ಲಿ ವಸ್ತುಗಳ ಸಾಗಾಣಿಕೆಗೆ ಕೂಡಾ ಜನಪ್ರಿಯವಾಗಿದೆ. ಸಮುದ್ರದಲ್ಲಿ ಸರಕು ಸಾಗಣೆ ಮಾಡುವ ಹಡಗುಗಳಲ್ಲಿ ಸಮುದ್ರಯಾನ ಮಾಡುವಾಗ ಹಡಗಿನ ಸುರಕ್ಷತೆಯ ಬಗ್ಗೆ ಸಾಕಷ್ಟು ಗಮನವನ್ನು ವಹಿಸಲಾಗಿರುತ್ತದೆ. ಅಲ್ಲದೇ ಇದರಲ್ಲಿ ಇರುವ ಕೆಲಸಗಾರರು, ಹೆಚ್ಚುವರಿ ಚಾಲಕರು ಎಲ್ಲರಿಗೂ ಕೂಡಾ ಸೂಕ್ತ ರಕ್ಷಣೆಯ ತಂತ್ರಗಳನ್ನು ಕೂಡ ತರಬೇತಿಯ ಮೂಲಕ ನೀಡಲಾಗಿರುತ್ತದೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ಹೊರತಾಗಿ ಕೂಡಾ ಕೆಲವೊಮ್ಮೆ ಸಮುದ್ರಯಾನದ ವೇಳೆ ಕೆಲವು ಕಾರಣಗಳಿಂದ ಹಡಗುಗಳು ಸಮುದ್ರದಲ್ಲಿ ಮುಳುಗಿ ಅಪಾರವಾದ ಪ್ರಾಣ ನಷ್ಟಕ್ಕೆ, ಸರಕುಗಳ ನಷ್ಟಕ್ಕೆ ಕಾರಣವಾಗಿ ಬಿಡುತ್ತದೆ. ‌

ಜಪಾನ್ ನಲ್ಲಿ ಇಂತಹುದೇ ಒಂದು ಘಟನೆಯು ನಡೆದಿದ್ದು ಸರಕು ಸಾಗಣೆಯ ಒಂದು ಭಾರೀ ಹಡಗು ಸಮುದ್ರದಲ್ಲಿ ಮುಳುಗಿ ಹೋಗಿದೆ. ಈ ಹಡಗಿನಲ್ಲಿ ಹಸುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ‌. ಹಡಗು ಮುಳುಗಿದ ಕಾರಣ ಅದರಲ್ಲಿದ್ದ ಸುಮಾರು 6 ಸಾವಿರ ಹಸುಗಳು ಕೂಡಾ ನೀರನಲ್ಲಿ ಮುಳುಗಿ ಪ್ರಾಣವನ್ನು ಕಳೆದುಕೊಂಡಿವೆ. ಇನ್ನು ಹಡಗಿನಲ್ಲಿ ಇದ್ದ 43 ಜನ ಸಿಬ್ಬಂದಿಯಲ್ಲಿ ಕೇವಲ ಒಬ್ಬರನ್ನು ಮಾತ್ರ ರಕ್ಷಣೆ ಮಾಡಲಾಗಿದ್ದು, ಉಳಿದವರೆಲ್ಲರೂ ಕೂಡಾ ಹಡಗಿನ ಸಮೇತ ಜಲ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯಿಂದಾಗಿ ವಿಶ್ವದಲ್ಲೊಂದು ಶೋಕದ ವಾತಾವರಣ ಉಂಟಾಗಿದೆ.

ಈ ಹಡಗಿನ ತೂಕ 11,947 ಟನ್ ಗಳಾಗಿತ್ತು ಎನ್ನಲಾಗಿದೆ. ಗಲ್ಫ್ ಲೈವ್ ಸ್ಟಾಕ್ -1 ಹೆಸರಿನ ಈ ಹಡಗು ಪೂರ್ವ ಚೀನಾದ ಸಮುದ್ರ ತೀರದಿಂದ 6000 ಹಸುಗಳೊಂದಿಗೆ ತನ್ನ ಪ್ರಯಾಣವನ್ನು ಆರಂಭ ಮಾಡಿತ್ತು. ಯಾವಾಗ ಹಡಗು ಅಮಾಮಿ ಓಶಿಯಾ ಹತ್ತಿರ ಬಂದಿತ್ತೋ ಆಗ ಅದರ ಮೇಲೆ ಅಪಾಯದ ಕಾರ್ಮೋಡಗಳು ಕವಿಯ ತೊಡಗಿತ್ತು. ‌ಸಮಸ್ಯೆಯ ಬಗ್ಗೆ ಹಡಗಿನ ಕ್ಯಾಪ್ಟನ್ ಸಂದೇಶವನ್ನು ಕಳುಹಿಸಿ ಸಹಾಯಕ್ಕೆ ಮನವಿಯನ್ನು ಮಾಡಿದ್ದರು. ಆದರೆ ಸಹಾಯ ತಲುಪುವ ಮೊದಲೇ ದುರಾದೃಷ್ಟವಶಾತ್ ಇಡೀ ಹಡಗು ಜಲ ಸಮಾಧಿಯಾಗಿದ್ದು, ಅದರಲ್ಲಿದ್ದ ಎಲ್ಲಾ ಹಸುಗಳು ಹಾಗೂ ಸಿಬ್ಬಂದಿ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ.‌

ದುರ್ಘಟನೆಯ ಸ್ಪಷ್ಟವಾದ ಕಾರಣವು ಇನ್ನೂ ತಿಳಿದು ಬಂದಿಲ್ಲ. ಆದರೆ ದುಃಖದ ಸಂಗತಿ ಏನೆಂದರೆ ಅದರಲ್ಲಿದ್ದ ಆರು ಸಾವಿರ ಅಮಾಯಕ ಹಸುಗಳು ಜೀವವನ್ನು ಕಳೆದುಕೊಂಡರೆ, ಸರಿಯಾದ ಸಮಯಕ್ಕೆ ಸಹಾಯ ಕೂಡಾ ದೊರಕದೇ 42 ಜನ ಸಿಬ್ಬಂದಿ‌ ಕೂಡಾ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ತೀರದಲ್ಲಿದ್ದ ರಕ್ಷಣಾ ದಳದವರು ತಮ್ಮ ಪ್ರಯತ್ನದ ಫಲವಾಗಿ ಕೇವಲ ಒಬ್ಬರನ್ನು ಮಾತ್ರ ಪ್ರಾಣಾಪಾಯದಿಂದ ಪಾರು ಮಾಡಲು ಸಾಧ್ಯವಾಗಿದೆ. ಚಂಡಮಾರುತದ ಕಾರಣದಿಂದಾಗಿ ಈ ಪ್ರದೇಶದಲ್ಲಿ ಹವಾಮಾನ ಕೆಟ್ಟಿತ್ತು ಎನ್ನಲಾಗಿದೆ.

ಈ ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ 38 ಫಿಲಿಪೈನ್ಸ್, 2 ನ್ಯೂಜಿಲೆಂಡ್ ಮತ್ತು ಒಬ್ಬ ಆಸ್ಟ್ರೇಲಿಯಾದ ಪ್ರಜೆ ಇದ್ದರು ಎನ್ನಲಾಗಿದೆ. ಯಾರಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಯೇ ಎಂದು ಇನ್ನೂ ಕೂಡಾ ಹುಡುಕಾಟ ಮುಂದುವರೆದಿದೆ. ಈ ಕಾರ್ಯಾಚರಣೆಗಾಗಿ 5 ವಿಮಾನಗಳು ಮತ್ತು ಪ್ರಾಣ ರಕ್ಷಕಾ ದಳದ 5 ತರಬೇತಿ ಪಡೆದ ನುರಿತ ತಜ್ಞರು ಕಾರ್ಯ ನಿರತರಾಗಿದ್ದಾರೆ.