OMG! ಜೀವಂತ ಗುಬ್ಬಿಯನ್ನು ತಿನ್ನುತ್ತಿರುವ ಜೇಡ! ಅಚ್ಚರಿ ಪಟ್ಟ ಜನ! Viral Video
ಜೇಡ ಇದು ಸಹಜವಾಗಿಯೇ ಅನೇಕ ಪ್ರಾಣಿಗಳ ಭಕ್ಷ್ಯವಾಗಿದೆ. ಬೆಕ್ಕಿನಿಂದ ಹಿಡಿದು ಹಲ್ಲಿಗಳಂಥಹ ಜೀವಿಗಳು ಜೇಡಗಳನ್ನು ತಮ್ಮ ಆಹಾರವನ್ನಾಗಿಸುತ್ತವೆ. ಆದರೆ ಇಲ್ಲಿ ಜೇಡದ ವಿಡಿಯೋ ಒಂದು ಬೇರೆ ಕಾರಣಕ್ಕಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ಜೇಡವು ಜೀವಂತ ಗುಬ್ಬಿಯನ್ನು ಸಹಜವಾಗಿ ತನ್ನ ಆಹಾರವನ್ನಾಗಿ ಮಾಡಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡೇಲಿ ಮೇಲ್ ನೀಡಿದ ವರದಿಯ ಪ್ರಕಾರ, ಈ ವಿಡಿಯೋವನ್ನು ರೆಡಿಟ್ ಯೂಜರ್ ನಿಂದ ಶೇರ್ ಮಾಡಲಾಗಿದೆ. ಕ್ಯಾಪ್ಶನ್ ನಲ್ಲಿ ಯೂಜರ್ ಗೋಲಿಯತ್ ಬರ್ಡ್ ಈಟರ್ ಎನ್ನಲಾಗಿದೆ. ಗೋಲಿಯತ್ ಬರ್ಡ್ ಈಟರ್ ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಜೇಡವಾಗಿದೆ, ಆದರೆ ಈ ವಿಡಿಯೋದಲ್ಲಿ ಕಂಡುಬರುವ ಜೇಡ ಗೋಲಿಯತ್ ಬರ್ಡ್ ಈಟರ್ ಜಾತಿಯ ಜೇಡಲ್ಲ.
ವಿಡಿಯೋದಲ್ಲಿ ಕಾಣುವ ಜೇಡವು ಕಟ್ಟಿಗೆ ಭೀಮ ಮೇಲೆ ಕುಳಿತಿದೆ. ಅದು ಅಲ್ಲಿ ಕುಳಿತೇ ಗುಬ್ಬಿಯ ಬೇಟೆಯಾಡಿದೆ. ವಿಡಿಯೋದಲ್ಲಿ ಕಾಣುವ ಈ ಜೇಡವು ಕಪ್ಪು ಬಣ್ಣದ್ದು ಮತ್ತು ದೊಡ್ಡ ಆಕಾರದ್ದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೈರಲ್ ಆಗಿದೆ.
ವಿಡಿಯೋ ನೋಡಿ…
An Avicularia munching on a bird. pic.twitter.com/IdjQyWMxFZ
— The Dark Side Of Nature (@Darksidevid) September 1, 2020
ವೈರಲ್ ಆದ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಅನೇಕ ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಸುಳ್ಳು ಎಂದರೆ ಇನ್ನು ಕೆಲವರು ತುಂಬಾ ಗಾಬರಿಯಾಗಿದ್ದಾರೆ. ಕೆಲವರು ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಸಹ ಹೇಳಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 4 ಲಕ್ಷ ಜನರು ವೀಕ್ಷಿಸಿದ್ದಾರೆ.