OMG! ನಿಜವಾಯಿತು ಗೋಲ್ಡ್ ಕಾಯಿನ್ ಜಾಹಿರಾತು! ಸಾಬೂನಿನಲ್ಲಿ ದೊರಕಿತು ಬರೋಬ್ಬರಿ 38 ಲಕ್ಷದ ಬಂಗಾರ!

ಕಂಪನಿಗಳು ತಮ್ಮ ವಸ್ತುಗಳನ್ನು ಮಾರ್ಕೆಟ್ ನಲ್ಲಿ ಮಾರಾಟ ಮಾಡುವ ಸಲುವಾಗಿ ಗ್ರಾಹಕರಿಗೆ ಅನೇಕ ರೀತಿಯ ವಿನೂತನ ಆಫರ್ ಗಳನ್ನು ಕೊಡುತ್ತದೆ. ಇದರಿಂದ ಗ್ರಾಹಕರು ಆಕರ್ಷಿತರಾಗುತ್ತಾರೆ. ಇದರಿಂದ ಆ ಕಂಪನಿಗಳ ವಸ್ತುಗಳು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ಆದರೆ ಇಂತಹ ಆಫರ್ ಗಳಿಂದ ಬಂಗಾರ ಅಥವಾ ಇನ್ನಿತರ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದ್ದನ್ನು ಕೇಳಿಲ್ಲ.

ಇಂಥ ಜಾಹಿರಾತುಗಳ ಐಡಿಯಾ ಕಳ್ಳಸಾಗಾಣಿಕೆಯನ್ನು ಮಾಡುವವರು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಾರೆ. ನೆರೆಯ ಆಂಧ್ರಪ್ರದೇಶದಲ್ಲಿ ಇದೇ ರೀತಿಯಲ್ಲಿ ಬಂಗಾರದ ಕಳ್ಳ ಸಾಗಣೆಯನ್ನು ಮಾಡುವ ತಂಡವೊಂದು ಪೊಲೀಸರ ಜಾಣ್ಮೆಯಿಂದ ಸಿಕ್ಕಿಹಾಕಿಕೊಂಡಿದೆ.

ಈ ಕಳ್ಳಸಾಗಾಣಿಕೆಯ ತಂಡವು ಪ್ರಸಿದ್ಧವಾದ ಕಂಪನಿಯ ಸಾಬೂನಿನಲ್ಲಿ ಬಂಗಾರವನ್ನು ಬಚ್ಚಿಟ್ಟುಕೊಂಡು ಹೋಗುತ್ತಿರುವಾಗ ಏರ್ಪೋರ್ಟ್ ನಲ್ಲಿ ಸುರಕ್ಷ ರಕ್ಷಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾಬೂನುಗಳನ್ನು ತೆಗೆದು ತಪಾಸಣೆ ಮಾಡಿದಾಗ ಅದರಲ್ಲಿದ್ದ ಒಟ್ಟು 38 ಲಕ್ಷ ರೂಪಾಯಿಗಳ ಬಂಗಾರ ಪತ್ತೆಯಾಗಿದೆ.

ಈ ಸಂಪೂರ್ಣ ಘಟನೆಯ ವಿಡಿಯೋವನ್ನು ಟ್ವಿಟರ್ನಲ್ಲಿ @FaiHaider ಹೆಸರಿನಿಂದ ಶೇರ್ ಮಾಡಲಾಗಿದೆ. ಶೇರ್ ಮಾಡಿದ ಈ ವಿಡಿಯೋಗೆ ಹೀಗೆ ಕ್ಯಾಪ್ಷನ್ ಕೊಡಲಾಗಿದೆ. 38 ಲಕ್ಷ ರೂಪಾಯಿಗಳ ಬಂಗಾರವನ್ನು ತಿರುಚಿರಾಪಲ್ಲಿ ಏರ್ಪೋರ್ಟ್ ನಲ್ಲಿ ಹಸ್ತಗತ ಮಾಡಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.