OMG! ನಿದ್ರಿಸುತ್ತಿದ್ದ ಮಹಿಳೆಯ ಕೋಣೆಯೊಳಗೆ ನುಗ್ಗಿದ ವಿಷ ಸರ್ಪ: ಅನಿರೀಕ್ಷಿತ ಅತಿಥಿಯ ಕಂಡು ಬೆ`ಚ್ಚಿ ಬಿದ್ದ ಮಹಿಳೆ!

ರಾತ್ರಿ ಎನ್ನುವುದು ಪ್ರತಿಯೊಬ್ಬರಿಗೂ ಕೂಡಾ ಒಂದು ವರ. ಏಕೆಂದರೆ ಹಗಲೆಲ್ಲಾ ದುಡಿದ ಮನಸ್ಸು, ದೇಹ ಎರಡು ಕೂಡಾ ವಿಶ್ರಾಂತಿ ಬಯಸುವ ಸಮಯ. ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡವರು, ಶ್ರಮ ವಹಿಸಿ ದಿನ ಕಳೆದವರಿಗೆ ಹಾಸಿಗೆ ಮೇಲೊರಗಿದರೆ ನಿದ್ರೆ ಆವರಿಸಿಬಿಡುತ್ತದೆ. ನಿಜಕ್ಕೂ ಅದೊಂದು ಸ್ವರ್ಗ ಸುಖವೇ ಸರಿ. ಏಕೆಂದರೆ ಆರಾಮವಾಗಿ ನಿದ್ರೆ ಬರುವುದೇ ಒಂದು ಯೋಗ‌. ಹಾಗೆ ಕಣ್ಮುಚ್ಚಿ ಮಲಗಿದರೆ ಕೆಲವರಿಗೆ ಸೂರ್ಯೋದಯದ ವರೆಗೆ ಎಚ್ಚರ ಆಗುವುದಿಲ್ಲ. ಕಣ್ತುಂಬ ನಿದ್ದೆ ಎನ್ನುವ ಮಾತು ನಿಜಕ್ಕೂ ಕೇಳಲು ಎಷ್ಟು ಸುಖ ಎನಿಸುವುದೋ ಅಂತಹ ನಿದ್ರೆ ಬಂದರೆ ಅದು ಅದೃಷ್ಟವೇ ಅಲ್ಲವೇ? ದಿನ ಎಲ್ಲಾ ದಣಿದವರಿಗೆ ನಿದ್ದೆ ಎಂಬುದು ಅತ್ಯಾವಶ್ಯಕ ಕೂಡಾ. ಆದರೆ ಹೀಗೆ ನಿದ್ರೆ ಮಾಡುವಾಗ ಯಾರಾದರೂ ಎಚ್ಚರಗೊಳಿಸಿದರೆ ಕೋ ಪ ಕೂಡಾ ಬರುವುದು ಸಹಜ.

ಇನ್ನು ಚೆನ್ನಾಗಿ ನಿದ್ರೆ ಮಾಡುವಾಗ ನಮ್ಮ ಸುತ್ತ ಮುತ್ತಲಿನ ಚಟುವಟಿಕೆಗಳ ಬಗ್ಗೆ ನಮಗೆ ತಿಳಿಯುವುದಿಲ್ಲ‌. ಅಲ್ಲದೇ ಕೆಲವೊಮ್ಮೆ ಯಾರಾದರೂ ಎಬ್ಬಿಸಿದರೂ ಎಚ್ಚರ ಆಗುವುದಿಲ್ಲ ಕೆಲವರಿಗೆ‌. ಆದರೆ ಹೀಗೆ ನಿದ್ರೆ ಮಾಡುವಾಗ ಯಾವುದಾದರೂ ಕ್ರಿಮಿ ಅಥವಾ ಕೀಟವು ನಮ್ಮ ಬಳಿ ಬಂದರೆ ನಮಗೆ ಅದರ ಅರಿವಾಗುವುದು ಕಷ್ಟ. ಅಲ್ಲದೇ ಅವು ನಮ್ಮ ಮೈಮೇಲೆ ಅಂದರೆ ಕೈ ಮೇಲೋ ಅಥವಾ ಕಾಲಿನ ಮೇಲೆ ಯಾವುದಾದರೂ ಕ್ರಿಮಿಯೋ ಕೀಟವೋ ಕುಳಿತರೆ ಅಥವಾ ಓಡಾಡಿದರೆ ನಿದ್ರೆಯಿಂದ ಮೇಲೆ ಏಳದಿದ್ದರೂ ಕೂಡಾ ನಮ್ಮ ಕೈ ಕಾಲುಗಳನ್ನು ಒದರುವ ಮೂಲಕ ಅವುಗಳನ್ನು ದೂರ ಹೋಗುವಂತೆ ಮಾಡುತ್ತೇವೆ.

ಆದರೆ ಒಮ್ಮೆ ಊಹಿಸಿಕೊಂಡು ನೋಡಿ, ನೀವು ನಿದ್ದೆ ಮಾಡುತ್ತಿರುವ ಸಮಯದಲ್ಲಿ ನಿಮ್ಮ ಕೋಣೆಗೆ ಯಾವುದೋ ಒಂದು ಸಣ್ಣ ಕ್ರಿಮಿಯೋ, ಕೀಟವೋ ಅಥವಾ ಹುಳುವೋ ಬರದೆ, ಬದಲಾಗಿ ಹಾವೊಂದು ಕೋಣೆಯನ್ನು ಪ್ರವೇಶ ಮಾಡಿದರೆ ?? ಹೀಗೆ ಊಹೆ ಮಾಡುವುದೇ ಭ ಯ ಹುಟ್ಟಿಸುತ್ತದೆ. ಆದರೆ ಇಂತಹುದೊಂದು ಘಟನೆ ವಾಸ್ತವದಲ್ಲಿ ನಡೆದಿದ್ದು ಸಿಸಿ ಟಿವಿ ಯಲ್ಲಿ ಈ ಭ ಯಾ ನಕ ದೃಶ್ಯವು ರೆಕಾರ್ಡ್ ಆಗಿದೆ. ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ವೈರಲ್ ಆಗಿ ಜನರ ಗಮನವನ್ನು ಸೆಳೆದಿದೆ. ಹಾಗಾದರೆ ಏನೀ ವಿಷಯ ಎಂದು ತಿಳಿಯೋಣ ಬನ್ನಿ.

ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು ಎನ್ನಲಾಗಿದ್ದು 75 ವರ್ಷ ಹಿರಿಯ ಮಹಿಳೆ ಕಾವ್ ಸುಡ್ಸೋಪಾ ಎನ್ನುವವರು ತಮ್ಮ ಕೋಣೆಯಲ್ಲಿ ಮಲಗಿರುವಾಗ ಪೈಪ್ ವರ್ಕ್ ನೊಳಗಿಂದ ಹಾವೊಂದು ಕೋಣೆಯನ್ನು ಪ್ರವೇಶ ಮಾಡಿದೆ. ಅದು ಮಹಿಳೆಯ ಕಾಲಿನ ಬಳಿ ಬಂದಾಗ ಆಕೆ ಅದನ್ನು ಏನೋ ಹುಳುವೋ ಅಥವಾ ಕೀಟವೋ ಎಂದು ಕೊಂಡು ಕಾಲಿನಿಂದ ದೂರ ನೂಕುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಕಚ್ಚಿದಂತಹ ಅನುಭವವಾಗಿ ಆಕೆ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಿ ಭ ಯ ಪಟ್ಟಿದ್ದು, ಅನಂತರ ತಮ್ಮ ಮಗನನ್ನು ಕರೆದಿದ್ದಾರೆ. ಅನಂತರ ಹಾವನ್ನು ಹಿಡಿಯುವವರು ಅದನ್ನು ಹಿಡಿದಿದ್ದಾರೆ.

ತಾಯಿಯ ಹಿತದೃಷ್ಟಿಯಿಂದ ಮಗ ಆಕೆಯ ಕೋಣೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದಿಂದ ಇಡೀ ದೃಶ್ಯ ರೆಕಾರ್ಡ್ ಆಗಿದ್ದು, ಕತ್ತಲಲ್ಲಿ ಬರುವ ಹಾವು, ಅದರ ಹೊಳೆಯುವ ಕಣ್ಣುಗಳು ಎಲ್ಲವೂ ಕೂಡಾ ಸ್ಪಷ್ಟವಾಗಿ ಕಂಡಿದೆ. ಆ ಮಹಿಳೆ ತನಗೆ ಹಾವನ್ನು ನೋಡಿ ಭ ಯ ವಾಗಿತ್ತು, ಅದು ಹಾವೆಂದು ಊಹೆ ಮಾಡಿರಲಿಲ್ಲ, ಈಗ ಆ ಕೋಣೆಯಲ್ಲಿ ಮಲಗಲು ಕೂಡಾ ಭಯ ಎಂದಿದ್ದಾರೆ ಎನ್ನಲಾಗಿದೆ. ಇನ್ನು ವೈರಲ್ ಆದ ಈ ವೀಡಿಯೋವನ್ನು ಹದಿನಾರು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ ಆರು ನೂರಕ್ಕೂ ಅಧಿಕ ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ವಿಡಿಯೋ ನೋಡಿ

ಪ್ರತಿಕ್ರಿಯೆ ನೀಡಿದ ನೆಟ್ಟಿಗರು ಇನ್ನು ಮುಂದೆ ಮಲಗುವ ಮುನ್ನ ಎಚ್ಚರ ವಹಿಸಿ ಎಂದರೆ, ಕೆಲವರು ಈ ವೀಡಿಯೋ ರಾತ್ರಿ ವೇಳೆ ನೋಡುತ್ತಿದ್ದರೆ ನಿಮ್ಮ ಬೆಡ್ ಬಳಿ ಒಮ್ಮೆ ಪರೀಕ್ಷೆ ಮಾಡಿ ಎಂದಿದ್ದಾರೆ. ಮತ್ತೆ ಕೆಲವರು ಅದಕ್ಕೆ ಮನೆಯಲ್ಲಿ ಮುಂಗುಸಿಯನ್ನು ಸಾಕಬೇಕು ಎನ್ನುವ ಸಲಹೆಯನ್ನು ಕೂಡಾ ನೀಡಿದ್ದಾರೆ.