OMG! ನೋವಿನಿಂದ ಬಳಲುತ್ತಿರುವ 8 ವಾರದ ಬೆಕ್ಕಿನ ಮೂಗಿನಲ್ಲಿ ಇತ್ತು ಪರಾವಲಂಬಿ ಜೀವಿ! ನೋಡಿ ಈ Viral Video

ನಮ್ಮ ಜೀವ ಜಗತ್ತಿನಲ್ಲಿ ಮಾನವರ ಹಾಗೂ ಅವರ ಸುತ್ತ ಮುತ್ತ ಇರುವ ಪ್ರಾಣಿಗಳು ಮಾತ್ರವೇ ಅಲ್ಲದೇ ಇನ್ನೂ ಅನೇಕ ವೈವಿದ್ಯಮಯವಾದ ಜೀವಿಗಳು ಇವೆ‌. ಅವುಗಳಲ್ಲಿ ಪರಾವಲಂಬಿ ಜೀವಿಗಳು ಕೂಡಾ ಒಂದು ಪ್ರಬೇಧದ ಜೀವಿಗಳು. ಇವು ಬದುಕಲು ಬೇರೊಂದು ಜೀವಿಯ ಮೇಲೆ ಆಧಾರವಾಗಿ ಇರುತ್ತವೆ‌. ಆದರೆ ಈ ಪರಾವಲಂಬಿ ಜೀವಗಳಿಂದಾಗಿ ಅನೇಕ ಸಂದರ್ಭಗಳಲ್ಲಿ ನಾವು ಮುದ್ದಿನಿಂದ ಸಾಕಿದ ಪ್ರಾಣಿಗಳಿಗೆ ಆಗುವ ತೊಂದರೆ, ಅವು ಪಡುವ ಕಷ್ಟವನ್ನು ನೋಡಿದಾಗ ನಮಗೆ ತುಂಬಾ ನೋ”ವಾಗುತ್ತದೆ ಅಥವಾ ನಮ್ಮಿಂದ ಅದನ್ನು ನೋಡಲಾಗುವುದಿಲ್ಲ ಹಾಗೂ ಹೇಗಾದರೂ ಮಾಡಿ ಆ ಜೀವಿಗಳಿಂದ ನಮ್ಮ ಮುದ್ದಿನ ಪ್ರಾಣಿಗಳಿಗೆ ಪರಿಹಾರ ಒದಗಿಸಬೇಕೆಂದು ನಾವು ಯಾವ ಯಾವ ಮಾರ್ಗಗಳು ಇವೆಯೋ ಎಲ್ಲವನ್ನು ಕೂಡಾ ಬಳಸಲು ಮುಂದಾಗುತ್ತೇವೆ.

ಕೆಲವೊಮ್ಮೆ ನಮ್ಮಿಂದ ಯಾವುದೇ ರೀತಿಯಲ್ಲೂ ಅದು ಸಾಧ್ಯವಾಗದೆ ಹೋದಾಗ ನಾವು ಪಶು ವೈದ್ಯರ ಬಳಿ ಹೋಗುತ್ತೇವೆ. ಈ ಪರಾವಲಂಬಿಗಳು ಹೇಗಿರುತ್ತವೆ ಎಂದು ಅವು ಪ್ರಾಣಿಗಳ ದೇಹದ ಮೇಲೆ ಅಂಟಿಕೊಂಡು ಅವುಗಳ ರಕ್ತವನ್ನು ಹೀರಿ ಬದುಕುತ್ತಿರುತ್ತವೆ ಮಾತ್ರವೇ ಅಲ್ಲದೇ ಪ್ರಾಣಿಗಳಿಗೆ ನೋವನ್ನು ಉಂಟು ಮಾಡುತ್ತಿರುತ್ತವೆ. ಇಂತಹ ಪರಾವಲಂಬಿ ಜೀವಿಯೊಂದರಿಂದ ತೊಂದರೆಗೆ ಸಿಲುಕಿದ ಒಂದು ಎಂಟು ವಾರಗಳ ಬೆಕ್ಕಿನ ಮರಿಗೆ ಹೇಗೆ ಅದರಿಂದ ಮು ಕ್ತಿ ದೊರಕಿಸಲಾಯಿತು ಎನ್ನುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ‌. ಈಗಾಗಲೇ ಈ ವೀಡಿಯೋವನ್ನು ಎರಡು ಕೋಟಿಗಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ವೀಡಿಯೋದಲ್ಲಿ ನೋಡಿದಾಗ ಬೆಕ್ಕಿನ ಮರಿಯನ್ನು ಪಶು ವೈದ್ಯರ ಬಳಿಗೆ ಕರೆ ತರಲಾಗಿದೆ. ಅದರ ಮೂಗಿನಲ್ಲಿ ಒಂದು ಪರಾವಲಂಬಿ ಜೀವಿಯು ಸೇರಿದೆ. ಸಣ್ಣ ಬೆಕ್ಕಿನ ಮರಿಯ ಮೂಗಿನಲ್ಲಿ ಒಂದು ಪರಾವಲಂಬಿ ಜೀವಿ ಎಂದರೆ ನಿಜಕ್ಕೂ ಆ ಬೆಕ್ಕಿನ ಮರಿಗೆ ಅದರಿಂದ ಎಷ್ಟು ಕಷ್ಟವಾಗಿರಬಹುದು. ಬಹುಶಃ ಅದಕ್ಕೆ ಇರಬಹುದು ವೈದ್ಯರು ಅದರ ಮೂಗಿನಿಂದ ಬಹಳ ನಾಜೂಕಾಗಿ ಆ ಜೀವಿಯನ್ನು ಒಂದು ಕತ್ತರಿಯಂತಹ ವಸ್ತುವನ್ನು ಬಳಸಿ ಹೊರಗೆ ಎಳೆಯುವ ಪ್ರಯತ್ನ ಮಾಡುವಾಗ ಬೆಕ್ಕಿನ ಮರಿ ಕೂಡಾ ಅರಚಿ, ಪರಚಿ ಓಡದೆ ತನ್ನ ಮೂಗಿನಲ್ಲಿರುವ ಆ ತೊಂದರೆ ಹೊರಗೆ ಬಂದರೆ ಸಾಕೆಂಬಂತೆ ಇದೆ.

ವೈದ್ಯರು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಆ ಜೀವಿಯನ್ನು ಎಳೆದು ಹೊರಗೆ ಹಾಕಿದ್ದಾರೆ. ವೀಡಿಯೋ ನೋಡುವಾಗ ಅಯ್ಯೋ ದೇವರೇ ಪಾಪಾ ಬೆಕ್ಕಿನ ಮರಿ ಎಂದು ನಮಗೂ ಅನಿಸುತ್ತದೆ. ಆದರೆ ವೈದ್ಯರ ಅನುಭವ ಹಾಗೂ ಅವರ ಕುಶಲ ತಂತ್ರದಿಂದ ಬೆಕ್ಕಿನ ಮರಿಯ ಮೂಗಿನೊಳಗೆ ಸೇರಿದ್ದ ಆ ಪರಾವಲಂಬಿ ಹೊರಗೆ ಬಂದಿದೆ. ವೈದ್ಯರು ಅದನ್ನು ಇಕ್ಕಳ ಅಥವಾ ಕತ್ತರಿಯಂತ ಸಾಧನದಿಂದ ಹಿಡಿದಿದ್ದು ಸಣ್ಣ ಮೂಗಿನೊಳಗೆ ಆ ಗಾತ್ರದ ಜೀವಿ ಸೇರಿದ್ದನ್ನು ನೋಡಿದಾಗ, ಅದರ ಆಕಾರ ಹಾಗೂ ರೂಪವನ್ನು ನೋಡಿದಾಗ ನಮಗೂ ಮೈ ಜುಂ ಎನಿಸುತ್ತದೆ. ಆದರೆ ಬೆಕ್ಕಿನ ಮರಿಗೆ ಅದರಿಂದ ಮು ಕ್ತಿ ಸಿಕ್ಕಿತ್ತಲ್ಲಾ ಎಂದು ಖುಷಿಯೂ ಆಗುತ್ತದೆ.

ವಿಡಿಯೋ ನೋಡಿ…

ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಕಾಮೆಂಟ್ ಗಳಲ್ಲಿ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಹಲವರು ಪಾಪಾ ಬೆಕ್ಕಿನ ಮರಿ ಎಂದರೆ, ಕೆಲವರು ಮೂಗಿನಿಂದ ಹೊರತೆಗೆದ ಆ ಜೀವಿ ಯನ್ನು ಕೊಂದು ಬಿಡಬೇಕು ಆಗ ಅದು ಮರಿಗಳನ್ನು ಹಾಕಿ ಬೇರೆ ಪ್ರಾಣಿಗಳಿಗೆ ತೊಂದರೆ ಕೊಡುವುದಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ವೀಡಿಯೋ ನೋಡುವಾಗ ಓ ಮೈ ಗಾಡ್ ಎಂದು ಉದ್ಗರಿಸುವ ಹಾಗಾಯ್ತು ಎಂದು ಕೂಡಾ ಬರೆದು ಕಾಮೆಂಟ್ ಮಾಡಿದ್ದಾರೆ. ವೀಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿರುವುದು ಮಾತ್ರ ಖಂಡಿತ.