OMG! ಮನುಷ್ಯನ ಆಕಾರದ ಜೇಡರ ಬಲೆ ಪತ್ತೆ; ಎಚ್ಚರಿಕೆ ನೀಡಿದ ಅರಣ್ಯ ಅಧಿಕಾರಿಗಳು!
ನಮ್ಮ ಸುತ್ತಲಿನ ಪರಿಸರದಲ್ಲಿ ಅದೆಷ್ಟೋ ವೈವಿದ್ಯಮಯ ಹಾಗೂ ವಿಚಿತ್ರ ಎನ್ನುವ ಸಂಗತಿಗಳು ಇವೆ. ಅಲ್ಲದೇ ಅವುಗಳು ನಮ್ಮನ್ನು ಆಕರ್ಷಿಸುವುದು ಮಾತ್ರವೇ ಅಲ್ಲದೇ ಅವುಗಳನ್ನು ನೋಡಿದಾಗ ಎಂತಹ ಅದ್ಭುತ ಎನಿಸದೇ ಇರಲಾರದು. ನಮ್ಮ ಪರಿಸರದಲ್ಲಿ ಇಂತಹ ವಿಸ್ಮಯ ಗಳು ಇರುವುದನ್ನು ನೋಡಿದಾಗ ಎಂತಹ ಅಸಾಮಾನ್ಯವಾದ ಕಲೆಯು ಪರಿಸರದಲ್ಲಿ ಅರಳಿವೆ ಎಂದು ನಾವು ಅಚ್ಚರಿಯನ್ನು ಪಡುತ್ತೇವೆ. ಆದರೆ ಅಂತಹ ವಿಸ್ಮಯ ಗಳ ಜೊತೆಗೆ ಒಮ್ಮೊಮ್ಮೆ ಊಹಿಸಿರದ ಅ ಪಾ ಯಗಳು ಕೂಡಾ ಜೊತೆಗಿರುತ್ತವೆ ಎಂಬುದನ್ನು ಕೂಡಾ ನಾವು ಮರೆಯಬಾರದು. ಅಂತಹುದೇ ಒಂದು ವಿಸ್ಮಯ ಯುಎಸ್ ನಲ್ಲಿ ಕಂಡಿದ್ದು, ಆ ಪ್ರಕೃತಿಯ ವಿಸ್ಮಯದ ಬಗ್ಗೆ ನಾವು ಕೂಡಾ ತಿಳಿಯೋಣ ಬನ್ನಿ.
ಯು.ಎಸ್. ನ ಮಿಸ್ಸೌರಿಯಲ್ಲಿ, ಅರಣ್ಯ ಇಲಾಖೆಗೆ ಒಂದು ಅಸಾಮಾನ್ಯ ಎನಿಸುವ ಜೇಡರ ಬಲೆಯೊಂದು ಕಾಣಿಸಿಕೊಂಡಿದೆ. ಇದು ಏಕೆ ಅಸಾಮಾನ್ಯ ಎನ್ನುವುದಾದರೆ, ಇದು ಸಾಮಾನ್ಯ ಜೇಡರ ಬಲೆಯಂತೆ ಇಲ್ಲ, ಬದಲಾಗಿ ಇದು ಒಬ್ಬ ಸಾಮಾನ್ಯ ಮನುಷ್ಯನಷ್ಟು ಎತ್ತರವಾಗಿದೆ. ಈ ವಿಶಿಷ್ಟ ಎನಿಸಿದ ಜೇಡರ ಬಲೆಯ ಸುದ್ದಿ ಎಲ್ಲೆಡೆ ಹರಡಿದಂತೆ ಸುತ್ತ ಮತ್ತಲಿನ ಜನರು ಕೂಡಾ ದೊಡ್ಡ ಸಂಖ್ಯೆಯಲ್ಲಿ ಅದನ್ನು ನೋಡಲು ಅಲ್ಲಿಗೆ ಬಂದಿದ್ದಾರೆ. ಬಂದ ಜನರು ನಿಜವಾಗಿಯೂ ಈ ಜೇಡದ ಬಲೆಯನ್ನು ಹಾಗೂ ಅದರ ವಿಶಾಲತೆಯನ್ನು ನೋಡಿದಾಗ, ಒಂದು ಕ್ಷಣ ಅದು ನಿಜವಾದುದು ಅಲ್ಲವೆಂದುಕೊಂಡಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಈ ಬಲೆಯನ್ನು ಸ್ಪೈಡರ್ ವೆಬರ್ ಎಂಬ ಜೇಡ ನೇಯ್ದಿದೆ ಎಂದು ಹೇಳಿದಾಗ, ಜನರಿಗೆ ಅದರ ವಾಸ್ತವ ಮನವರಿಕೆಯಾಗಿದೆ.

ಈ ವಿಶಿಷ್ಠವಾದ ಜೇಡರ ಬಲೆಯು ಎರಡು ಮರಗಳ ನಡುವೆ ಹೆಣೆಯಲ್ಪಟ್ಟಿದೆ. ನಾವು ಅದರ ಫೋಟೊ ನೋಡಿದರೆ ಅದರ ಉದ್ದ ಅಗಲಗಳ ಒಂದು ಅಂದಾಜು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಕೆಲವರು ಈ ಜೇಡರ ಬಲೆಯನ್ನು ನೋಡಿ ಜೇಡ ಹೆಣೆದಿರುವ ಕಲೆಯನ್ನು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ರಾತ್ರಿ ವೇಳೆ ಅಲ್ಲೇನಾದರೂ ಹೋದರೆ ಬಲೆಯಲ್ಲಿ ಮನುಷ್ಯ ಅದರೊಳಗೆ ಸಿಲುಕಿಕೊಳ್ಳಬಹುದು ಎಂದು ಹೇಳಿದ್ದಾರೆ. ಹಾಗೇನಾದರೂ ರಾತ್ರಿಯ ಕತ್ತಲಲ್ಲಿ ಸಿಕ್ಕಿ ಹಾಕಿಕೊಂಡರೆ ಆ ಬಲೆಯ ಜಿಡ್ಡಿನಲ್ಲಿ ಜೀವ ಬಿಡುವುದು ಖಚಿತ ಎಂದು ಕೂಡಾ ಕೆಲವರು ಹೇಳಿದ್ದಾರೆ.
ಈ ವಿಶಾಲವಾದ ಬಲೆಯ ವಿಚಾರ ಸುದ್ದಿಯಾದ ಮೇಲೆ ಅಲ್ಲಿನ ಪರಿಸರವಾದಿಗಳು ಈ ಜೇಡರ ಬಲೆಯ ಬಗ್ಗೆ ಜನರಿಗೆ ಎಚ್ಚರಿಕೆಯಿಂದ ಇರಿ ಎಂದು ಸೂಚಿಸಿದ್ದು, ಈ ಜೇಡಗಳು ನಿಮ್ಮ ತೋಟಗಳಲ್ಲಿ ಕೂಡಾ ಬಲೆಗಳನ್ನು ಕಟ್ಟಬಹುದು, ಇದು ಸಣ್ಣ ಮಕ್ಕಳಿಗೆ ಬಹಳ ಅ ಪಾ ಯ ಕಾರಿಯಾಗಬಹುದು ಎಂದು ಎಚ್ಚರಿಕೆಯನ್ನು ನೀಡಿ, ಜಾಗೃತರಾಗಿರಿ ಎಂದು ಮುನ್ಸೂಚನೆಯನ್ನು ನೀಡಿದ್ದಾರೆ. ಸ್ಪೈಡರ್ ವೆಬರ್ ಎನ್ನುವ ಜೇಡವು ಇಂತಹ ಸಂಕೀರ್ಣವಾದ ಬಲೆಗಳನ್ನು ನಿರ್ಮಾಣ ಮಾಡುವುದರಲ್ಲಿ ಹೆಸರುವಾಸಿಯಾಗಿದೆ ಎನ್ನಲಾಗಿದೆ. ಮಿಸ್ಸೌರಿ ಪ್ರಾಂತ್ಯದಲ್ಲಿ ಈ ಜಾತಿಗೆ ಸೇರಿದ ಹಲವು ಪ್ರಬೇಧಗಳ ಜೇಡಗಳು ಕಂಡು ಬರುತ್ತದೆ ಎನ್ನಲಾಗಿದೆ.
ಈ ಜೇಡಗಳಲ್ಲಿ ವ್ಯತ್ಯಾಸವನ್ನು ಕಂಡುಹಿಡಿಯುವುದು ಬಹಳ ಕಷ್ಟ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಈ ಜೇಡದ ಉದ್ದವು ಒಂದು ಇಂಚಿಗಿಂತ ಕಡಿಮೆಯಿರುತ್ತದೆ ಎನ್ನಲಾಗಿದೆ. ಆದರೆ ಅದು ಹೆಣೆಯುವ ಬಲೆಗೂ ಅದರ ಗಾತ್ರಕ್ಕೂ ಸಾಮ್ಯತೆಯನ್ನೇ ಹೊಂದಿಲ್ಲ ಎಂದು ಹೇಳಬಹುದು.