OMG! ಮರದ ತುದಿಯ ಮೇಲೆ ಕುಳಿತ ಹಕ್ಕಿಯನ್ನು ಒಂದೇ ಜಿಗಿತದಲ್ಲಿ ಬೇ-ಟೆಯಾಡಿದ ಚಿರತೆ! ಚಿರತೆಯ ಚಾಣಾಕ್ಷತೆ ನೋಡಿ ‘ಅದ್ಭುತ’ ಎಂದ ನೆಟ್ಟಿಗರು!
ಪ್ರಕೃತಿಯು ನಿಜಕ್ಕೂ ವಿಸ್ಮಯಗಳ ಆಗರ, ಆದರೆ ಅದನ್ನು ನೋಡುವ ತಾಳ್ಮೆ ಹಾಗೂ ಮನಸ್ಸಿರಬೇಕು ಅಷ್ಟೇ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಕಳೆದು ಹೋಗಿರುವ ನಾವು, ಒತ್ತಡದ ಬದುಕಿನ ಬವಣೆಯಲ್ಲಿ ಮುಳುಗಿ ಪ್ರಕೃತಿ, ಪರಿಸರ ಎಂಬುವುದೆಲ್ಲಾ ಬಹಳ ದೂರದ ಪದಗಳಾಗಿ ಹೋಗಿವೆ. ಜೀವನದ ಜಂಜಾಟಗಳಲ್ಲಿ ಸಿಲುಕಿರುವ ನಮಗೆ ಆಗಾಗ ಸಾಮಾಜಿಕ ಜಾಲತಾಣಗಳ ಕೊಡುಗೆ ಎಂಬಂತೆ ಕೆಲವು ರಮ್ಯವಾದ, ರಮಣೀಯ ಎನಿಸುವ, ಮನಸ್ಸಿಗೆ ಒಂದು ನೂತನ ಅನುಭೂತಿಯನ್ನು ನೀಡುವ ವೀಡಿಯೋಗಳು, ಫೋಟೋಗಳು ನಮ್ಮ ಕಣ್ಮುಂದೆ ಬಂದಾಗ ನಾವು ಅದನ್ನು ನೋಡಿದಾಗ ಎಂತಹ ಅದ್ಭುತ ಎಂದು ಉದ್ಗಾರವನ್ನು ಮಾಡುತ್ತೇವೆ.
ಅಲ್ಲದೇ ಆ ವೀಡಿಯೋಗಳನ್ನು ನೋಡಿದಾಗ ನಮ್ಮ ಪ್ರಕೃತಿಯಲ್ಲಿ ನಾವು ಹಿಂದೆಂದೂ ಕಾಣದಿರುವ ವಿಸ್ಮಯ ಹಾಗೂ ರೋಚಕವಾದ ದೃಶ್ಯಗಳನ್ನು ನೋಡಿದಾಗಲಂತೂ ಆಶ್ಚರ್ಯದಲ್ಲಿ ಅರಳಿದ ಕಣ್ಣುಗಳಿಂದ ಆ ದೃಶ್ಯಗಳನ್ನು ಮತ್ತೆ ಮತ್ತೆ ನೋಡುತ್ತೇವೆ. ಅಂತಹುದೇ ಒಂದು ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದಾಗ ವನ್ಯ ಮೃಗಗಳ ಭೇಟೆಯಾಡುವ ಚಾಕಚಾಕ್ಯತೆಯು ನಮಗೊಂದು ಅದ್ಭುತ ಎನಿಸಿದೇ ಇರಲಾರದು ಹಾಗೂ ಮೆಚ್ಚುಗೆ ನೀಡದೆ ದೃಷ್ಟಿ ಪಕ್ಕಕ್ಕೆ ಹೊರಳುವುದು ಅಸಾಧ್ಯ ಎಂದೇ ಹೇಳಬಹುದು.
ವಿಡಿಯೋ ನೋಡಿ….
Leopards never fail to amaze me! Vc- SM#leopards #wildlife #wildlifephotography #photoshop #photography #photographer @susantananda3 @Helen75260796 @toothpick97 @drqayumiitk @dharamifs_HP @djohnstonjda @NeilCairns16 @ScottishBirder @davidfettes @jon77lees @Doxybirder @vyasad pic.twitter.com/urFJLf7x1t
— Corbett Expert (@corbett_expert) August 6, 2020
ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಒಂದು ಚಿರತೆಯ ಕೌಶಲ್ಯ ನಿಜಕ್ಕೂ ಮನೋಜ್ಞ ಹಾಗೂ ಎಷ್ಟು ಪರಿಣಿತಿಯನ್ನು ಅದು ಪಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಎಲ್ಲಿಂದಲೋ ಒಂದು ಹಕ್ಕಿಯು ಹಾರಿ ಬಂದು ಮರದ ಮೇಲೆ ಬಂದು ಕೂರುತ್ತದೆ. ಆಗ ಅದರ ನಿರೀಕ್ಷೆಯಲ್ಲಿ ಅಥವಾ ಹೊಂಚು ಹಾಕಿ ಲಕ್ಷ್ಯವನ್ನು ಇಟ್ಟಿತ್ತೇನೋ ಎನ್ನುವಂತೆ ಓಡಿ ಬರುವ ಚಿರತೆ, ಎತ್ತರಕ್ಕೆ ಜಿಗಿದು ಮರದ ಮೇಲೆ ಕುಳಿತಿರುವ ಆ ಹಕ್ಕಿಯನ್ನು ತನ್ನ ಬಾಯಲ್ಲಿ ಹಿಡಿದು ಬಿಡುತ್ತದೆ. ಆ ಹಕ್ಕಿಗೆ ಅದು ಅನಿರೀಕ್ಷಿತ, ಹಾರಿ ತಪ್ಪಿಸಿಕೊಳ್ಳಲು ಕೂಡಾ ಆಗದಂತೆ ಕೆಲವೇ ಕ್ಷಣಗಳಲ್ಲಿ ಮಿಂಚಿನಂತೆ ಎರಗಿ ತನ್ನ ಬೇಟೆಯನ್ನು ಹಿಡಿದ ಆ ಚಿರತೆಯ ಕೌಶಲ್ಯಕ್ಕೆ ಅಮೇಜಿಂಗ್ ಎನ್ನದೇ ಇರಲಾರೆವು.
ಪ್ರಕೃತಿಯಲ್ಲಿ ಹುಟ್ಟಿ, ಬೆಳೆದು ಪ್ರಕೃತಿಯಲ್ಲೇ ಜೀವನ ನಡೆಸುವ ಈ ವನ್ಯ ಮೃಗಗಗಳಿಗೆ ಇಂತಹ ಕೌಶಲ ಹಾಗೂ ಚಾಣಾಕ್ಷತೆಯನ್ನು ಆ ಪ್ರಕೃತಿಯೇ ಗುರುವಾಗಿ ಕಲಿಸಿದೆಯೇನೋ ಎನ್ನುವಂತಹ ಈ ದೃಶ್ಯವು ಪ್ರಕೃತಿ ಕಲಿಸಿದ ಜೀವನ ಪಾಠ ಎನ್ನುವುದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ ಕೂಡಾ ತಪ್ಪಾಗುವುದಿಲ್ಲ. ಆಗಸ್ಟ್ 6 ರಂದು ಟ್ವಿಟರ್ ನ ಖಾತೆದಾರರೊಬ್ಬರು ಹಂಚಿಕೊಂಡಿರುವ ಈ ವೀಡಿಯೋ ಈಗಾಗಲೇ ಸಾವಿರಾರು ವೀಕ್ಷಣೆಯನ್ನು ಪಡೆದಿದ್ದು, ನೋಡಿದವರು ಅಮೇಜಿಂಗ್, ವಂಡರ್ ಫುಲ್ ಎಂತೆಲ್ಲಾ ಪ್ರತಿಕ್ರಿಯೆ ನೀಡಿದ್ದರೆ, ಕೆಲವರು ಆ ಹಕ್ಕಿಗೆ ವಿಧಿ ಸಾವನ್ನು ನಿರ್ಧರಿಸಿತ್ತು ಎಂದು ಕೂಡಾ ಬರೆದು ಕೊಂಡಿದ್ದಾರೆ.